ಬಿಸಿ ಬಿಸಿ ಸುದ್ದಿ

ಸ್ವರ್ಗ ನರಕಗಳೆಲ್ಲ ಭ್ರಾಂತಿ. ಭಕ್ತನಿದ್ದ ಠಾವೆ ಕೈಲಾಸ

ಶಹಾಪುರ : ಅಸಮಾನತೆಯ ವಿರುದ್ಧ ಜಗತ್ತಿನ ಯಾವ ಮೂಲೆಯಲ್ಲೂ ಇಲ್ಲದ ಚಳುವಳಿಯನ್ನು ಮೊಟ್ಟ ಮೊದಲು ಹುಟ್ಟು ಹಾಕಿದವರು ಬಸವಣ್ಣನವರು. ಜಾತಿ ಪದ್ಧತಿ, ಮೌಢ್ಯ, ಅರಸೊತ್ತಿಗೆ ಹಾಗೂ ಉಳ್ಳವರ ವಿರುದ್ಧದ ಗಟ್ಟಿ ಧ್ವನಿ ಮೊಳಗಿದ್ದು ಕನ್ನಡ ನಾಡಿನಿಂದ ಎಂಬ ಹೆಮ್ಮೆ ನಮಗೆಲ್ಲರಿಗೂ ಇರಬೇಕು ಎಂದು ಕಲಬುರ್ಗಿಯ ಸಮಾಜ ಶಾಸ್ತç ಉಪನ್ಯಾಸಕಿ ಡಾ. ಶಾಂತಾ ಅಷ್ಟಗಿ ಮಾರ್ಮಿಕವಾಗಿ ನುಡಿದರು.
ನಗರದ ಬಸವಮಾರ್ಗ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಏರ್ಪಡಿಸಿದ್ದ , ಗುರಪ್ಪ ಯಜಮಾನ,ಶಿವಮ್ಮ -ಲಿಂಗಣ್ಣ ಸತ್ಯಂಪೇಟೆಯವರ ಸ್ಮರಣೋತ್ಸವದ ನಿಮಿತ್ತ ತಿಂಗಳ ಬಸವ ಬೆಳಕು- ೧೧೭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಬಸವ ತತ್ವದ ಜೀವ ಜೀವಾಳ ಎಂಬ ವಿಷಯ ಕುರಿತು ಮಾತನಾಡುತ್ತ ಮುಂದುವರೆದು, ಸಮಾಜದಲ್ಲಿ ಮಹಿಳೆಯವರ ಅಂತಃಶಕ್ತಿಯ ಕುರಿತು ಈಗಲೂ ಕೊಂಕು ಮಾತುಗಳಿವೆ. ತಳ ಸಮೂಹದ ಬಗೆಗೆ ತಪ್ಪು ತಿಳುವಳಿಕೆಗಳಿವೆ. ಆದರೆ ನೊಂದವರ ಪರವಾಗಿ,ಶೋಷಿತರ ಪರವಾಗಿ ನಿಂತು ಲಿಂಗಾಯತ ಎಂಬ ಬಹುದೊಡ್ಡ ಚಳುವಳಿಯನ್ನು ಬಸವಣ್ಣನವರು ೧೨ ನೇ ಶತಮಾನದಲ್ಲಿ ಮಾಡಿದರು.
ಧರ್ಮ ಕೆಲವೇ ಜನರ ಗುತ್ತಿಗೆಯಾಗಿತ್ತು.  ಅದನ್ನು ಜನ ಸಾಮಾನ್ಯರ ಸೊತ್ತು ಎಂದು ತಿಳಿಸಿದರು. ದೇವರ ಹತ್ತಿರ ಯಾರನ್ನೂ ಬಿಡದೆ ಇರುವ ಸಂದರ್ಭದಲ್ಲಿ ಜನರ ಅಂಗೈಗೆ ಇಷ್ಟಲಿಂಗವನ್ನು ಕೊಟ್ಟು ಇದೆ ನಿಮ್ಮ ದೇವರೆಂದರು. ಪರಿಶಿಷ್ಟ ಜಾತಿ  ಮತ್ತು ಪಂಗಡದವರಿಗೆ ಹಾಗೂ ಮಹಿಳೆಯರಿಗೆ ದಯಯ ತಳಹದಿಯ ಧರ್ಮವನ್ನು ಕೊಟ್ಟರು.  ಈ ಹಿಂದೆ ಬ್ರಹ್ಮ ಸತ್ಯ ಜಗತ್ತು ಮಿಥ್ಯ ಎಂಬ ವಾದವನ್ನು ತಳ್ಳಿ ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ ಎನ್ನುವ ಮೂಲಕ ಜನ ಸಾಮಾನ್ಯರಲ್ಲಿ ಪ್ರಜ್ಞೆಯನ್ನು ಮೂಡಿಸಿದವರು. ಸ್ವರ್ಗ ನರಕಗಳೆಲ್ಲ ಭ್ರಾಂತಿ. ಭಕ್ತನಿದ್ದ ಠಾವೆ ಕೈಲಾಸ ಎಂಬ ಮಾರ್ಮಿಕ ಮಾತುಗಳ ಮೂಲಕ ಸಮಾಜವನ್ನು ಬಡಿದೆಬ್ಬಿಸಿದ ಕ್ರಾಂತಿಕಾರಿ ಬಸವಣ್ಣನವರು ಎಂದು ಬಣ್ಣಿಸಿದರು.
ಲಿಂಗಣ್ಣ ಸತ್ಯಂಪೇಟೆಯವರು ಭ್ರಷ್ಟ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ, ಸೋಗಲಾಡಿ ಮಠಾಧೀಶರಿಗೆ ಸಿಂಹ ಸ್ವಪ್ನವಾಗಿದ್ದರು. ಸಮಾದಲ್ಲಿ ಎಲ್ಲಿಯೆ ಅನ್ಯಾಯ ನಡೆದರು ಅದನ್ನು ತಮ್ಮ ಮೊನಚಾದ ಬರವಣಿಗೆಯ ಮೂಲಕ ಹೇಳುತ್ತಿದ್ದರು. ನಾಡಿನ ತುಂಬೆಲ್ಲ ಬಂಡಾಯ ಸಾಹಿತಿಯಾಗಿ ಹೆಸರಾಗಿದ್ದರು. ರೈತರಿಗೆ ಸರಕಾರಗಳಿಂದ ಆಗುತ್ತಿರುವ ಅನ್ಯಾಯಗಳ ವಿರುದ್ಧ ಜನರನ್ನು ಸಂಘಟಿಸಿದ್ದರು.  ನಿರಂತರ ಬರವಣಿಗೆ, ಸಂಘಟನೆ, ಮತ್ತು ಬಸವಪ್ರಜ್ಞೆಗಾಗಿ ನಾಡಿನಾದ್ಯಂತ ಸಂಚರಿಸುವ ಪಾದರಸ ಲಿಂಗಣ್ಣನವರಾಗಿದ್ದರು ಎಂದು ಇದೆ ಸಂದರ್ಭದಲ್ಲಿ ಹೇಳಿದರು.
ಅನಕ್ಷರಸ್ಥರಿಗಿಂತ ಅಕ್ಷರಸ್ಥರು ತುಂಬಾ ಅಪಾಯಕಾರಿ. ವಿದ್ಯೆ ಕಲಿತವರು ಎಂದು ಹೇಳುವವರಿಂದಲೆ ಜಾತಿ ತಾರತಮ್ಯ ಮಾಡುವುದು ಹೆಚ್ಚಾಗಿದೆ. ಜಾತಿಗಳು ಮನುಷ್ಯ ಸೃಷ್ಟಿ. ಯಾವ ವ್ಯಕ್ತಿಯೂ ಜಾತಿಯನ್ನು ಆಯ್ಕೆ ಮಾಡಿ ಹುಟ್ಟುವುದಿಲ್ಲ. ಬಸವಾದಿ ಶರಣರ ತತ್ವ ಚಿಂತನೆಗಳು ಮನೆ ಮನಕ್ಕೂ ತಲುಪಿದಾಗ ಸಮಾದಲ್ಲಿ ಬಹುದೊಡ್ಡ ಬದಲಾವಣೆ ಸಾಧ್ಯವಿದೆ ಮುಖ್ಯ ಅತಿಥಿಯಾಗಿ ನಿವೃತ್ತ ನ್ಯಾಯಮೂರ್ತಿ ಸಾಬಣ್ಣ ಮೇಲಗಲ ಅಭಿಪ್ರಾಯ ಪಟ್ಟರು. ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ  ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳಾಗಿ ಚೆನ್ನಪ್ಪಗೌಡ ಮೋಸಂಬಿ, ನೀಲಾಂಬಿಕೆ, ವಿಶ್ವಾರಾಧ್ಯ ಸತ್ಯಂಪೇಟೆ ಸಸಿಗೆ ನೀರೆಯುವ ಮೂಲಕ ಸಭೆಯನ್ನು ಉದ್ಘಾಟಿಸಿದರು. ವಿಶ್ವಪೂರ್ವ ಸತ್ಯಂಪೇಟೆ ಸ್ವಾಗತಿಸಿದರು. ಫಜಲುದ್ದೀನ ಖಾಜಿಸಾಬ ಕೆಂಭಾವಿ ವಚನ ಪ್ರಾರ್ಥನೆ ಮಾಡಿದರು. ಶಿವಣ್ಣ ಇಜೇರಿ ನಿರೂಪಿಸಿದರು.
ಸಮಾರಂಭದಲ್ಲಿ ಶಿವಯೋಗಪ್ಪ ಹವಾಲ್ದಾರ,ಸಿದ್ಧಲಿಂಗಪ್ಪ ಆನೇಗುಂದಿ, ಅಡಿವೆಪ್ಪ ಜಾಕಾ, ದೇವಿಂದ್ರಪ್ಪ ಬಡಿಗೇರ, ಸಿದ್ಧರಾಮ ಹೊನ್ಕಲ್, ಗಂಗಮ್ಮ ತುಂಬಗಿ, ಸಂಗಮ್ಮ ಗುಳಗಿ, ಬಸವರಾಜ ಮುಂಡಾಸ, ಶಿವಲಿಂಗಪ್ಪ ಸಾಹು, ಶಂಕ್ರಪ್ಪ ಪೋಸ್ಟ ಮಾಸ್ಟರ್, ಕಾಮಣ್ಣ ವಿಭೂತಿಹಳ್ಳಿ, ಸಂಗಮ್ಮ ಹರನೂರ, ಭೀಮನಗೌಡ, ಚಂದ್ರು ಮುಡಬೂಳ, ಗುಂಡಣ್ಣ ಕಲಬುರ್ಗಿ, ಯಂಕಪ್ಪ ಅಲೆಮನಿ, ವಿಶ್ವನಾಥರೆಡ್ಡಿ ಗೊಂದಡಗಿ, ಷಣ್ಮುಖ ಅಣಬಿ, ಶಿವಕುಮಾರ ಅವಂಟಿ, ಚಂದ್ರು ಇಟಗಿ, ಚಂದ್ರಶೇಖರ ಹೈಯಾಳ ಸಿದ್ದು ಕೆರವಟಗಿ, ವಿಶ್ವನಾಥ ಬಂಕಲದೊಡ್ಡಿ,  ಬಸವರಾಜ ಹುಣಸಗಿ, ಶರಣಪ್ಪ ಹುಣಸಗಿ, ಪ್ರಕಾಶ ರಾಜೂರು, ಚೇತನ ಮಾಲಿ ಪಾಟೀಲ ಮಳಗ,ಬಸವರಾಜ ಅರುಣಿ, ಮುಂತಾದವರು ಭಾಗವಹಿಸಿದ್ದರು.
emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago