ಕಲಬುರಗಿ: ಚಹಾ ಉದ್ಯಮ ರಂಗದಲ್ಲಿ ಹೆಸರಾಂತ “ಹರ್ಮನ್ ಚಹಾವಾಲಾ” ಬ್ರಾಂಡ್ ನ ಚಹಾ ಮಳಿಗೆ ಕಲ್ಬುರ್ಗಿಯ ಎಸ್. ಎಂ ಪಂಡಿತ್ ರಂಗಮಂದಿರದ ಸಮೀಪ ಇಂದು ಶುಕ್ರವಾರ (ಜುಲೈ 26ರಂದು) ಶುಭ ಆರಂಭಗೊಳ್ಳುವುದರೊಂದಿಗೆ ಚಹಾ ಪ್ರಿಯರಿಗೆ ಸಂತಸ ತಂದಿದೆ.
ಕಲಬುರಗಿಯಲ್ಲಿ ನೂತನ “ಹರ್ಮನ್ ಚಹಾ ವಾಲಾ ” ಅಂಗಡಿಯನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಉಪ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಎಂ.ಕೆ ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಚಹಾ ಪ್ರಿಯರ ಸಂಖ್ಯೆಯು ದಿನದಿಂದ ದಿನಕ್ಕೆ ಗಣನೀಯವಾಗಿ ವೃದ್ಧಿಯಾಗುತ್ತಿದ್ದು ಹರ್ಮನ್ ಚಹಾವಾಲಾ ಕಲ್ಬುರ್ಗಿಗೆ ಕಾಲಿಡುವಂತೆ ಮಾಡಿ ಶುಚಿ ಮತ್ತು ರುಚಿಯಾದ ವಾತಾವರಣದಲ್ಲಿ ಚಹಾ ಮಳಿಗೆ ಆರಂಭಿಸಿ ಚಹಾ ಉದ್ಯಮ ರಂಗಕ್ಕೆ ಹೊಸ ಆಯಮ ನೀಡಿದ್ದಾರೆ.
ಚಹಾವು ಪ್ರೀತಿಯನ್ನು ಹಂಚಿಕೊಳ್ಳಲು ಬಾಂಧವ್ಯವನ್ನು ವೃದ್ಧಿಸಲು ಒಂದು ಆಪ್ತ ಪಾನೀಯವಾಗಿದ್ದು ಹರ್ಮನ್ ಚಹಾವಾಲಾ ಚಹಾಪ್ರಿಯರ ಮನ ತಣಿಸಲಿ ಹಾಗೂ ಚಹಾ ಉದ್ಯಮ ರಂಗ ಬೆಳೆಯಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾಜಿ ಕಾರ್ಪೊರೇಟರ್ ಹಾಗೂ ಸಮಾಜ ಸೇವಕರಾದ ಉಮೇಶ್ ಶೆಟ್ಟಿ ಮಾತನಾಡಿ ಚಹಾ ಮಳಿಗೆಯನ್ನು ಪ್ರಾರಂಭ ಮಾಡುವುದರೊಂದಿಗೆ ಮೆಹ್ತಾ ಬಳಗದವರು ಪ್ರೀತಿಯನ್ನು ಹಂಚಿಕೊಂಡಿದ್ದಾರೆ ಚಹಾ ಒಂದು ಬಾಂಧವ್ಯ ಸೃಷ್ಟಿಯ ಮತ್ತು ಹರ್ಮನ್ ಚಹಾವಾಲಾ ಕಲಬುರಗಿಗೆ ಕಾಲಿಟ್ಟು ಉತ್ತಮ ಕಾರ್ಯ ಆರಂಭಗೊಂಡಂತಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಮಾತನಾಡಿ ಹರ್ಮನ್ ಚಹಾ ವಾಲಾ ಚಹಾ ಉದ್ಯಮ ರಂಗದಲ್ಲಿ ಹೆಸರು ಹೊಂದಿದ್ದು ಕಲ್ಬುರ್ಗಿಯಲ್ಲಿ ಮಳಿಗೆ ಪ್ರಾರಂಭವಾಗುವುದರೊಂದಿಗೆ ಇಲ್ಲಿ “ಚಾಯ್ ಪೆ ಚರ್ಚೆ”ಗೆ ಅವಕಾಶ ಮಾಡಿಕೊಟ್ಟಂತಾಗಿದೆ.ಪ್ರೀತಿ ವಿಶ್ವಾಸ ತುಂಬುವ ಸ್ವಾದಿಷ್ಟ ಹರ್ಮನ್ ಚಹಾಕ್ಕೆ ಚಹಾ ಪ್ರಿಯರು ಸ್ಪಂದಿಸಲಿ. ಮುಂದಿನ ದಿನಗಳಲ್ಲಿ ಕಲ್ಬುರ್ಗಿ ವಿಮಾನ ನಿಲ್ದಾಣ ಕೆ ಕೆ ಆರ್ ಟಿ ಸಿ ಬಸ್ ನಿಲ್ದಾಣಗಳಲ್ಲಿ ನೂತನ ಮಳಿಗೆ ಪ್ರಾರಂಭಿಸುವಂತಾ ಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಸಾರಂಗ್ ಮೆಹ್ತಾ ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ಮೇಘ ಮೆಹ್ತಾ ,ರಜನಿ ಮೆಹ್ತಾ,ಅಕ್ಷತಾ ಮೆಹ್ತಾ , ರಿಷಬ್ ಮೆಹ್ತಾ ,ಪ್ರಮೋದ್ ಪೆದ್ದರ್ ಪೇಟ, ಅಯೂಬ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…