ಕಲಬುರಗಿ: ನಗರದ ಹೊರವಲಯದ ಕಪನೂರ ಕೈಗಾರಿಕೆ ಪ್ರದೇಶದ ಪಕ್ಕದ ವಾರ್ಡ ನ.2 ರ ಸಿದ್ಧಾರೂಡ ಬಡಾವಣೆಗೆ ಮೂಲ ಸೌಕರ್ಯ ಒದಗಿಸುವಂತೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಗೆ ಅಥವಾ ತಾಜ ಸುಲ್ತಾನಪೂರ ಗ್ರಾಮ ಪಂಚಾಯಿತಿಗೆ ಒಳಪಡಿಸುವಂತೆ ಆಗ್ರಹಿಸಿ ಇಂದು ಕನ್ನ ಭೂಮಿ ಜಾಗೃತಿ ಸಮಿತಿ ವತಿಯಿಂದ ಜಿಲ್ಲಾಧಿಕಾಗಳ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು.
ಈ ಪ್ರದೇಶ ಅತ್ತ ಪಾಲಿಕೆ ವ್ಯಾಪ್ತಿಗೆ ಒಳಪಡೆದ ಇತ್ತ ಯಾವುದೇ ಗ್ರಾಮ ಪಂಚಾಯತ ವ್ಯಾಪ್ತಿಗೆ ಸೇರದೆ ಅತಂತ್ರ ಪರಿಸ್ಥಿತಿಯ ಸಾರ್ವಜನಿಕರು ಬದುಕುತ್ತಿದ್ದಾರೆಎಂದು ದೂರಿದರು.ಇಲ್ಲಿ ಸುಮಾರು 350 ಮನೆಗಳು 1700 ಕ್ಕೂ ಹೆಚ್ಚು ಜನಸಂಖ್ಯೆ ವಾಸಿಸುತ್ತಿದ್ದಾರೆ.
ಇಲ್ಲಿ ಹೆಚ್ಚಾಗಿ ಪ.ಜಾತಿ, ಪ.ಪಂಗಡ, ಹಿಂದುಳಿದ, ವರ್ಗ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಸಮುದಾಯಗಳ ಜನರು ಇಲ್ಲಿ ವಾಸವಾಗಿದ್ದಾರೆ.ಅಲ್ಲಿ ಸರಕಾರಿ ಶಾಲೆ ಇದ್ದು ಈ ಶಾಲೆಯಲ್ಲಿ 95 ಜನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಅದು ಉತ್ತರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತಿದ್ದು, ಪಾಲಿಕೆ ಸದಸ್ಯರು ಹಾಗೂ ಶಾಸಕರಿಗೆ ಸೌಲಭ್ಯ ಕೇಳುವಂತಿಲ್ಲ. ಈ ಮೊದಲು ಸದರಿ ಪ್ರದೇಶವು ತಾಜಸುಲ್ತನಪೂರ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಟ್ಟಿತ್ತು, ನಂತರ ಕಪನೂರ ಗ್ರಾಮ ಪಂಚಾಯತಗೆ ಸೇರಿತ್ತು, ಸದರಿ ಕಪನೂರವರು ಗ್ರಾ.ಪಂ.ವು ಕಲಬುರಗಿ ಮಹಾನಗರ ಪಾಲಿಕೆಗೆ ಒಳಪಟ್ಟಿದ್ದು, ಆದರೆ ಸದರಿ ಪ್ರದೇಶದ ಸಿದ್ಧಾರೂಢ ಕಾಲೋನಿ ಮಾತ್ರ ಅತಂತ್ರವಾಗಿ ಉಳಿದಿದೆ.
ಇದರಿಂದ ಅಲ್ಲಿನ ಸಾರ್ವಜನಿಕರು ತಮ್ಮ ಸಮಸ್ಯೆಗಳು ಯಾರ ಹತ್ತಿರ ಹೇಳಿಕೊಳ್ಳಬೇಕೆಂಬುವುದೇ ತೋಚದಾಗಿದೆ. ಇದರಿಂದ ಸದರಿ ಪ್ರದೇಶದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡು ಸಾರ್ವಜನಿಕರ ಅನೇಕ ಬೇಡಿಕೆಗಳು ಎಲಮರೆ ಕಾಯಿದಂತೆ ತಪ್ಪಿಹೋಗುತ್ತಿವೆ. ಈ ನಮ್ಮ ಪ್ರದೇಶವನ್ನು ಕಲಬುರಗಿ ಮಹಾನಗರ ಪಾಲಿಕೆಗೆ ವ್ಯಾಪ್ತಿಗೆ ಅಥವಾ ತಾಜಸುಲ್ತಾನಪೂರ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡಿಸಿದ್ದಲ್ಲಿ ನಾವು ಎಲ್ಲರೂ ಅದರ ತೆರಿಗೆ ಪಾವತಿ ಮಾಡಲು ಸಿದ್ಧರಿರುತ್ತೇವೆ ಎಂದರು.
ಸಾರ್ವಜನಿಕರ ಬೇಡಿಕೆಗೆ ಜಿಲ್ಲಾ ದಂಡಾಧಿಕಾರಿಗಳಾದ ತಾವು ಕೂಡಲೇ ಕ್ರಮ ಕೈಕೊಂಡು ಇದರ ಸಮಸ್ಯೆ ಬಗೆ ಹರಿಸಿಕೊಟ್ಟು ಇವರಿಗೆ ಒಂದು ನೆಲೆ ನಿಲ್ಲುವಂತೆ ಮಾಡಿ ಮುಂದಿನ ಚಟುವಟಿಕೆಗೆ ಅನುವು ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.
ಒಂದು ವೇಳೆ ಕ್ರಮ ಕೈಕೊಳ್ಳದೆ ಹೋದಲ್ಲಿ ನಮ್ಮ ಸಂಘಟನೆಯ ಜೊತೆಗೆ ಸಮಸ್ತ ಬಡಾವಣೆಯ ನಾಗರೀಕರೊಂದಿಗೆ ಕೂಡಿ ಕಲಬುರಗಿ- ಹುಮನಾಬಾದ ರಸ್ತೆ ತಡೆ ನಡೆಸಿ ಉಗ್ರ ರೂಪದ ಹೋರಾಟ ಮಾಡಿ ಮೇಲಾಧಿಕಾರಿಗಳ ಗಮನಕ್ಕೆ ತರಬೇಕಾಗುತ್ತದೆಂದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕನ್ನಡ ಭೂಮಿ ಜಾಗೃತಿ ಸಮಿತಿಯ ವಕ್ತಾರರಾದ ಆನಂದ ತೆಗನೂರ, ಹಾಗೂ ಬಡಾವಣೆಯ ನಾಗರೀಕರಾದ ಆಶೀಫ ಮಿಯಾ,ಶರಣು ಮೇತ್ರೆ, ಬಂಗಾರಪ್ಪಾ ಗುತ್ತೇದಾರ, ಜಗನ್ನಾಥ ಪಿ.ಕೆ,ಜಗನ್ನಾಥ ಜಮಾದಾರ, ಇಮಾಮಶಾ ದರವೇಶ ,ಶ್ರೀಕಾಂತ ತೊಂಡಿ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…