ಶಹಾಬಾದ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆ ಜತೆಗೆ ಉತ್ತಮ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರ ಮತ್ತು ಪಾಲಕರ ಪಾತ್ರ ಪ್ರಮುಖವಾಗಿದೆ ಎಂದು ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ್ ಹೇಳಿದರು.
ಅವರು ನಗರದ ಸೆಂಟ್ ಥಾಮಸ್ ಶಾಲೆಯಲ್ಲಿ ಆಯೋಜಿಸಲಾದ ಗಣಿತ ದಿನಾಚರಣೆಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮಕ್ಕಳು ಬಿಳಿ ಹಾಳೆಯ ಹಾಗಿದ್ದಂತೆ.ಅವರಲ್ಲಿ ಈ ವಯಸ್ಸಿನಲ್ಲಿಯೇ ಒಳ್ಳೆಯ ವಿಚಾರಗಳನ್ನು ಬಿತ್ತಿದರೇ ಅವೆಲ್ಲವೂ ಅವರಲ್ಲಿ ಮೂಡುತ್ತವೆ.ಆದರೆ ಮಕ್ಕಳಲ್ಲಿ ಸಂಸ್ಕಾರ, ಮೌಲ್ಯಗಳು ಕಳೆದು ಹೋಗುತ್ತಿವೆ.ಕಾರಣ ಟಿ.ವಿ ಹಾಗೂ ಮೋಬೈಗಳ ಹಾವಳಿಯಿಂದ. ಆದ್ದರಿಂದ ಮಕ್ಕಳಿಗೆ ಟಿ.ವಿ ಹಾಗೂ ಮೋಬೈಗಳನ್ನು ನೀಡದೇ, ಅವರತ್ತ ಸ್ವಲ್ಪ ಗಮನಿಸಿದರೇ ಮುಂಬರುವ ದಿನಗಳಲ್ಲಿ ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ.ಆ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪಾಲಕರು ಕರ್ತವ್ಯ ನಿರ್ವಹಿಸಿಬೇಕೆಂದು ಮನವಿ ಮಾಡಿದರು.
ಶಾಲೆಯ ಸಂಯೋಜಕ ಫಾದರ್ ಜೆರಾಲ್ಡ್ ಸಾಗರ್ ಮಾತನಾಡಿ, ಮಕ್ಕಳ ರಕ್ಷಣಾ ಸಮಿತಿಯ, ಫೋಸ್ಕೋ ಮಕ್ಕಳ ರಕ್ಷಣಾ ಸಮಿತಿ ರಚನೆ ಮಾಡಿ ಅವರ ಕರ್ತವ್ಯಗಳನ್ನು ತಿಳಿಸಿದರು.ಅಲ್ಲದೇ ಎಲ್ಲರಿಗೂ ಪ್ರಮಾಣ ವಚನ ಭೋಧಿಸಿದರು.
ಇದೇ ಸಂದರ್ಭದಲ್ಲಿ ಗಣಿತ ವಿಷಯ ನಮ್ಮ ಜೀವನದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ ಎಂಬುದರ ಬಗ್ಗೆ ಕಿರು ನಾಟಕವನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಸಂಯೋಜಕ ಫಾದರ್ ಜೆರಾಲ್ಡ್ ಸಾಗರ್, ಮುಖ್ಯಗುರುಗಳಾದ ಸಿಸ್ಟರ್ ಅನಸ್ಥಾಷಿಯಾ, ಅತಿಥಿಗಳಾಗಿ ವಿರೇಶ ಬೇಲೂರ್, ಗ್ರಾಮ ಲೆಕ್ಕಿಗ ಶ್ರೀಮಂತ,ಮಲ್ಕಣ್ಣ ಮುದ್ದಾ, ಸಿಡಿಪಿಓ ಕಚೇರಿಯ ಸಂಗಮ್ಮ, ಮಹ್ಮದ್ ಅಜಾದ್, ಮೋನಿಕಾ ಶರ್ಮಾ, ಶಿಲ್ಪಾ ರ‍್ಯಾಪನೂರ್,ಮಕ್ಕಳ ರಕ್ಷಣಾ ಸಮಿತಿಯ ಸದಸ್ಯರಾದ ಡಾ.ಕಿಶನ್‌ಜಾಧವ, ಫೋಸ್ಕೋ ಮಕ್ಕಳ ರಕ್ಷಣಾ ಸದಸ್ಯರಾದ ಅಮರ ಜಾ, ಆಂತರಿಕ ಜಾಗೃತಿ ಸಭೆಯ ಸದಸ್ಯ ಅಮರ ಹದನೂರ್, ಅನೀತಾ, ಇಮ್ಯಾನುವೆಲ್, ಸಮೀರ್ ಜಾಧವ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…