ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾಲಕರ ಪಾತ್ರ ಮುಖ್ಯ

0
29

ಶಹಾಬಾದ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆ ಜತೆಗೆ ಉತ್ತಮ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರ ಮತ್ತು ಪಾಲಕರ ಪಾತ್ರ ಪ್ರಮುಖವಾಗಿದೆ ಎಂದು ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ್ ಹೇಳಿದರು.

ಅವರು ನಗರದ ಸೆಂಟ್ ಥಾಮಸ್ ಶಾಲೆಯಲ್ಲಿ ಆಯೋಜಿಸಲಾದ ಗಣಿತ ದಿನಾಚರಣೆಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಮಕ್ಕಳು ಬಿಳಿ ಹಾಳೆಯ ಹಾಗಿದ್ದಂತೆ.ಅವರಲ್ಲಿ ಈ ವಯಸ್ಸಿನಲ್ಲಿಯೇ ಒಳ್ಳೆಯ ವಿಚಾರಗಳನ್ನು ಬಿತ್ತಿದರೇ ಅವೆಲ್ಲವೂ ಅವರಲ್ಲಿ ಮೂಡುತ್ತವೆ.ಆದರೆ ಮಕ್ಕಳಲ್ಲಿ ಸಂಸ್ಕಾರ, ಮೌಲ್ಯಗಳು ಕಳೆದು ಹೋಗುತ್ತಿವೆ.ಕಾರಣ ಟಿ.ವಿ ಹಾಗೂ ಮೋಬೈಗಳ ಹಾವಳಿಯಿಂದ. ಆದ್ದರಿಂದ ಮಕ್ಕಳಿಗೆ ಟಿ.ವಿ ಹಾಗೂ ಮೋಬೈಗಳನ್ನು ನೀಡದೇ, ಅವರತ್ತ ಸ್ವಲ್ಪ ಗಮನಿಸಿದರೇ ಮುಂಬರುವ ದಿನಗಳಲ್ಲಿ ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ.ಆ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪಾಲಕರು ಕರ್ತವ್ಯ ನಿರ್ವಹಿಸಿಬೇಕೆಂದು ಮನವಿ ಮಾಡಿದರು.

ಶಾಲೆಯ ಸಂಯೋಜಕ ಫಾದರ್ ಜೆರಾಲ್ಡ್ ಸಾಗರ್ ಮಾತನಾಡಿ, ಮಕ್ಕಳ ರಕ್ಷಣಾ ಸಮಿತಿಯ, ಫೋಸ್ಕೋ ಮಕ್ಕಳ ರಕ್ಷಣಾ ಸಮಿತಿ ರಚನೆ ಮಾಡಿ ಅವರ ಕರ್ತವ್ಯಗಳನ್ನು ತಿಳಿಸಿದರು.ಅಲ್ಲದೇ ಎಲ್ಲರಿಗೂ ಪ್ರಮಾಣ ವಚನ ಭೋಧಿಸಿದರು.

ಇದೇ ಸಂದರ್ಭದಲ್ಲಿ ಗಣಿತ ವಿಷಯ ನಮ್ಮ ಜೀವನದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ ಎಂಬುದರ ಬಗ್ಗೆ ಕಿರು ನಾಟಕವನ್ನು ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಸಂಯೋಜಕ ಫಾದರ್ ಜೆರಾಲ್ಡ್ ಸಾಗರ್, ಮುಖ್ಯಗುರುಗಳಾದ ಸಿಸ್ಟರ್ ಅನಸ್ಥಾಷಿಯಾ, ಅತಿಥಿಗಳಾಗಿ ವಿರೇಶ ಬೇಲೂರ್, ಗ್ರಾಮ ಲೆಕ್ಕಿಗ ಶ್ರೀಮಂತ,ಮಲ್ಕಣ್ಣ ಮುದ್ದಾ, ಸಿಡಿಪಿಓ ಕಚೇರಿಯ ಸಂಗಮ್ಮ, ಮಹ್ಮದ್ ಅಜಾದ್, ಮೋನಿಕಾ ಶರ್ಮಾ, ಶಿಲ್ಪಾ ರ‍್ಯಾಪನೂರ್,ಮಕ್ಕಳ ರಕ್ಷಣಾ ಸಮಿತಿಯ ಸದಸ್ಯರಾದ ಡಾ.ಕಿಶನ್‌ಜಾಧವ, ಫೋಸ್ಕೋ ಮಕ್ಕಳ ರಕ್ಷಣಾ ಸದಸ್ಯರಾದ ಅಮರ ಜಾ, ಆಂತರಿಕ ಜಾಗೃತಿ ಸಭೆಯ ಸದಸ್ಯ ಅಮರ ಹದನೂರ್, ಅನೀತಾ, ಇಮ್ಯಾನುವೆಲ್, ಸಮೀರ್ ಜಾಧವ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here