ಬಿಸಿ ಬಿಸಿ ಸುದ್ದಿ

ಕೃಷಿ ಜಾತ್ರೆಯಲ್ಲಿ ಕೃಷಿ ವಿದ್ಯಾರ್ಥಿಗಳಿಂದ ಸಾಲದ ಹೊರೆ ನಾಟಕ ಪ್ರದರ್ಶನ

ಕಲಬುರಗಿ: ಕೃಷಿ ಮಹಾವಿದ್ಯಾಲಯ, ಕಲಬುರಗಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಡಾ. ರಾಜಶೇಖರ ಟಿ. ಬಸನಾಯಕ, ಕಾರ್ಯಕ್ರಮ ಸಂಯೋಜಕರು, ರಾ. ಸೇ. ಯೋ, ರೈತರ ಆತ್ಮಹತ್ಯೆ ಆಗದಂತೆ ಜಾಗೃತಿ ಮೂಡಿಸುವುದಕ್ಕಾಗಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮುಂದಾಳತ್ವದಲ್ಲಿ ನಡೆದ 27, 28 ಮತ್ತು 29 ಜುಲೈ, 2024ರಂದು ನಡೆದ ಕೃಷಿ ಜಾತ್ರೆಯಲ್ಲಿ ಸಾವಿರಾರು ರೈತರೆದುರು ಸಾಲದ ಹೊರೆಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ, ಕೃಷಿ ವಿಜ್ಞಾನಿಗಳ ಸಲಹೆಯಂತೆ ಸಾವಯವ ಕೃಷಿ ಮಾಡಿ ಸಾಧನೆ ಮಾಡಬಹುದು” ಎಂಬುವುದನ್ನು ಜನರ ಮನ ಮುಟ್ಟುವಂತೆ ತಿಳಿಸಲಾಯಿತು.

ನಾಟಕದ ವಿಶೇಷತೆಯಾಗಿ ಮಲ್ಲಿಕಾರ್ಜುನ ಪ್ರಥಮ ವರ್ಷದ ವಿದ್ಯಾರ್ಥಿ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿಗಳ ಪಾತ್ರವನ್ನು ಅವರ ಪ್ರತಿಬಿಂಬವಾಗಿ ಮತ್ತು ಅತ್ಯಂತ ನೈಜವಾಗಿ ಶ್ರೀಗಳೇ ಬಂದು ಖುದ್ದಾಗಿ ತಿಳುವಳಿಕೆ ನೀಡಿ ಮಾಡಿದ ಅಭಿನಯ ನೆರೆದ ಜನರನ್ನು ಮಂತ್ರಮುಗ್ಧರನ್ನಾಗಿ ಮಾಡಿತು.

ಗೋಪಾಲ ಭಾಯಿ ಸುತಾರಿಯಾ ಅವರ ಪಾತ್ರವನ್ನು ಮಾಡಿರುವ ಶ್ರೀ ಅಭಿಷೇಕ ಎ. ಕುಲಕರ್ಣಿ ಅವರು ಗೋಕೃಪಾ ಅಮೃತದ ಕುರಿತು ಮಾಹಿತಿಯನ್ನು ನೀಡಿದ್ದು ಜನರ ಮೆಚ್ಚುಗೆ ಪಡೆಯಿತು.

ಒಟ್ಟಾರೆಯಾಗಿ ಕೃಷಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಬದುಕಿನಲ್ಲಿರುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬೇಕು ಯಾವುದೇ ಕಾರಣಕ್ಕೂ ಸಾವನ್ನಪ್ಪದೇ ಸವಾಲುಗಳನ್ನು ಸ್ವೀಕರಿಸಿ ಬದುಕಬೇಕೆಂಬುದನ್ನು ನಾಟಕದ ಮೂಲಕ ತಿಳಿಸಿಕೊಟ್ಟರು.

ನಾಟಕದ ಕೊನೆಯಲ್ಲಿ ರೈತರಾದ ನಾವು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಆತ್ಮಹತ್ಯೆ ಮಹಾಪಾಪ” ಎಂಬುವುದನ್ನು ಬೋಧಿಸಲಾಯಿತು.

ಈ ನಾಟಕವನ್ನು ಶ್ರೀ ರಾಘವೇಂದ್ರ ಹಳಿಪೇಟ, ವಿಶೇಷ ನಾಟಕ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಭೀಮನಹಳ್ಳಿ, ತಾ: ಚಿತ್ತಾಪುರ ಇವರು ನಿರ್ದೇಶನ ಮಾಡಿದರು.

ಈ ಸಂದರ್ಭದಲ್ಲಿ ಡಾ. ಮಹಾಲಿಂಗಪ್ಪ ಎಮ್. ಧನೋಜಿ, ಡೀನ್ (ಕೃಷಿ) ಹಾಜರಿದ್ದು, ರೈತರ ಆತ್ಮಹತ್ಯೆ ತಡೆಯುವುದು ಸರಕಾರದ ಕೆಲಸವಲ್ಲ ಅದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಲ್ಲರೂ ಸೇರಿ ರೈತರನ್ನು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಬಲಪಡಿಸೋಣವೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶಶಿಕಾಂತ ಬಿ. ಪಾಟೀಲ್, ಗೌರವ ಕಾರ್ಯದರ್ಶಿಯಾದ ಮಂಜುನಾಥ ಜೇವರ್ಗಿ, ಕೃಷಿ ಉಪ ಸಮಿತಿಯ ಅಧ್ಯಕ್ಷರಾದ ಜಗದೀಶ ಗಾಜರೆ ಮತ್ತು ಇತರೆ ಪದಾಧಿಕಾರಿಗಳು ಮತ್ತು ಡಾ. ಸೌಮ್ಯ ಹಾಜರಿದ್ದರು.

ಕೃಷಿ ವಿದ್ಯಾರ್ಥಿಗಳ ನಾಟಕ ಜನ ಮನ ಸೆಳೆಯಿತು. ಕೆ ಕೆ ಸಿ ಸಿ ವತಿಯಿಂದ ನಾಟಕ ತಂಡಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

11 hours ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

11 hours ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

11 hours ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

11 hours ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

11 hours ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

11 hours ago