ಬಿಸಿ ಬಿಸಿ ಸುದ್ದಿ

ಎರಡನೇ ದಿನಕ್ಕೆ ಕಾಲಿಟ್ಟ ಶಾಸಕರ ನಗರದ ಪರಿಯಟಣೆ

ಸುರಪುರ: ಗಾಂಧಿಜಿ ಅವರ ೧೫೦ ನೇ ಜನ್ಮ ಶತಮಾನೋತ್ಸವದ ಅಂಗವಾಗಿ ಬುಧವಾರ ಶಾಸಕ ನರಸಿಂಹ ನಾಯಕ (ರಾಜುಗೌಡ) ಹಮ್ಮಿಕೊಂಡಿದ್ದ ಪಾದಯಾತ್ರೆಯು ಎರಡನೆ ದಿನಕ್ಕೆ ಕಾಲಿಟ್ಟಿದೆ ಪ್ರತಿ ಬಡಾವಣೆಯಲ್ಲು ಸಮಸ್ಯಗಳ ಮಹಾಪುರವೆ ಹರಿದು ಬಂದಿದೆ ಸರ್ವೆ ಸಾಮಾನ್ಯವಾಗಿ ಹಲವು ವಾರ್ಡಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಚರಂಡಿ ವ್ಯವಸ್ಥೆ, ರಸ್ತೆಗಳ ದುರಸ್ಥೀಕರಣ ಮತ್ತು ಅಗಲಿಕರಣದ ಮತ್ತು ಸ್ಟ್ರೀಟ ಲೈಟನ ಸಮಸ್ಯೆಗಳು ಕಂಡುಬಂದವು.

ಸತ್ಯಂಪೇಟ ಬಡಾವಣೆಯ ಎರಡುವಾರ್ಡಗಳಲ್ಲಿ ಚರಂಡಿ ವ್ಯವಸ್ಥೆಯು ಸಂಪೂರ್ಣವಾಗಿ ಹದಗೆಟ್ಟಿದೆ ನಗರಸಭೆ ವ್ಯಾಪ್ತಿಯಲ್ಲಿ ಬಂದು ಹಲವು ವರ್ಷವಾದರು ನಗರಸಭೆ ಅಧಿಕಾರಿಗಳು ವಾರ್ಡಗಳಿಗೆ ಕಸವಿಲೆವಾರಿ ಮತ್ತು ಚರಂಡಿಯ ವ್ಯವಸ್ಥೆಯನ್ನು ಸರಿಪಡಿಸುವಂತೆ ಸಾರ್ವಜನಕರು ಮನವಿಯನ್ನು ಸಲ್ಲಿಸಿದರು.ಇನ್ನು ದಿವಳಗುಡ್ಡ ವಾರ್ಡನಲ್ಲಿ ಕುಡಿಯುವ ನೀರಿನ ತೊಂದರೆ ವ್ಯಾಪಕವಾಗಿ ಕಾಡುತ್ತಿದೆ ಸಾರ್ವಜನಿಕರು ಹಲವುಬಾರಿ ನಗರಸಭೆ ಅಧಿಕಾರಿಗಳಗಮನಕ್ಕೆ ತಂದರು ಯಾವುದೆ ರೀತಿಯ ಪರಿಹಾರ ಕಂಡಿಲ್ಲ ತಾತ್ಕಾಲಿಕವಾಗಿ ಟ್ಯಾಂಕರ ಮುಖಾಂತರ ನೀರು ಸರಬರಾಜು ಮಾಡಲು ತಿಳಿಸಿದರು ಸಹ ಯಾವುದೆ ಪ್ರಯೋಜನವಾಗಿಲ್ಲ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯಯನ್ನು ಬಗೆಹರಿಸಲು ಮನವಿ ಮಾಡಿಕೊಂಡರು, ರಂಗಂಪೇಟ ಮತ್ತು ತಿಮ್ಮಾಪುರ ವಾರ್ಡಗಳಲ್ಲಿ ರಸ್ತೆ ಸಮಸ್ಯೆಯು ವ್ಯಾಪಕವಾಗಿದೆ ವಾಹನಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ ರಂಗಂಪೇಟ ಮಾರ್ಕಟ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ ಇದನ್ನು ರಸ್ತೆ ದುರಸ್ಥಿ ಮಾಡಲು ಹಲವಾರುಬಾರಿ ಮನವಿ ಮಾಡಿದರು ಸಹ ಸ್ಪಂದನೆ ಸಿಗುತ್ತಿಲ್ಲವೆಂದು ಜನರು ತಮ್ಮ ಅಳನ್ನು ತೊಡಿಕೊಂಡರು.

ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಮೂಲಭೂತ ಸೌಕರ್ಯಗಳನ್ನು ಪರಿಹರಿಸುವ ದೃಷ್ಠಿಯಿಂದ ಈಗಾಗಲೆ ಒಂದು ತಂಡವನ್ನು ರಚನೆಮಾಡಲಾಗಿದೆ ತಂಡವು ಕ್ಷೇತ್ರದ ಪ್ರತಿಗ್ರಾಮಗಳಿಗೆ ತೆರಳಿ ಅಲ್ಲಿಯ ಸಮಸ್ಯಗಳಿಗೆ ಯಾವ ರೀತಿಯಾಗಿ ಪರಿಹಾರನೀಡುವ ಕುರಿತು ವರದಿಯನ್ನು ತಯಾರಿಸುತ್ತಿದ್ದಾರೆ ಅದರಂತೆ ತಾಲೂಕಿನ ಪ್ರತಿ ಗ್ರಾಮದಲ್ಲಿರುವ ಮೂಲಭೂತಗಳ ಸೌಕರ್ಯಗಳ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ(ತಾತಾ), ಜಿಪಂ ಮಾಜಿ ಸದಸ್ಯ ಸುರೇಶ ಸಜ್ಜನ, ಎಪಿಎಮ್‌ಸಿ ಸದಸ್ಯ ದುರ್ಗಪ್ಪ ಗೋಗಿಕೇರಾ, ನಗರಸಭೆ ಸದಸ್ಯ ಮಹ್ಮದ ಗೌಸ್, ಮುಖಂಡರಾದ ದೊಡ್ಡದೇಸಾಯಿ, ಪ್ರಕಾಶ ಸಜ್ಜನ, ರಾಜುಪುಲ್ಸೆ, ಪೌರಾಯುಕ್ತ ಬಸವರಾಜ ಶಿವಪೂಜೆ, ಎಈಈ ಗುಪ್ತಾ ಸೇರಿದಂತೆ ನಗರಸಭೆಯ ಸದಸ್ಯರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

15 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

15 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago