ಸುರಪುರ: ದೀರ್ಘಕಾಲದವರೆಗೆ ತಾಯಿ ಮಗುವಿಗೆ ಎದೆ ಹಾಲುಣಿಸಿದರೆ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಜತೆಗೆ ಇಬ್ಬರೂ ಆರೋಗ್ಯವಂತರಾಗಿರುತ್ತಾರೆ. ಎದೆ ಹಾಲಿನಿಂದ ತಾಯಿ, ಮಗುವಿನ ಬಾಂಧವ್ಯ ವೃದ್ಧಿಯಾಗುತ್ತದೆ ಎಂದರು.
ನಗರದ ಅಂಗನವಾಡಿ ಕೇಂದ್ರ-1 ರಲ್ಲಿ ವಿಶ್ವ ಸ್ತನ್ಯಪಾನ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದ ಅವರು, ಸ್ತನ್ಯಪಾನದಿಂದ ತಾಯಿ ಮತ್ತು ಮಗು ಇಬ್ಬರ ಆರೋಗ್ಯವು ಉತ್ತಮವಾಗುತ್ತದೆ. ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನವಾದು ಆದ್ದರಿಂದ ತಾಯಂದಿರಲ್ಲಿ ಜಾಗೃತಿ ಮೂಡಿಸಲು ಸರಕಾರ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.
ಮಗು ಜನಿಸಿದ ನಂತರ ಬರುವ ಪ್ರಥಮವಾಗಿ ಬರುವ ಹಳದಿ ಬಣ್ಣದ ಗಟ್ಟಿ ಹಾಲು 3-4 ದಿನಗಳವರೆಗೂ ಇದ್ದು ಈ ಹಾಲು ಮಗುವಿಗೆ ಸ್ವಾಭಾವಿಕ ಲಸಿಕೆಯಾಗಿರುತ್ತದೆ. ಮಗುವಿನ ಬೆಳವಣಿಗೆಗೆ ಬೇಕಾಗುವ ಎಲ್ಲ ಪೋಷಕಾಂಶಗಳನ್ನು ಹೊಂದಿರುತ್ತದೆ ಮತ್ತು ಮಗುವಿಗೆ ಜಾಂಡೀಸ್ ಕಾಯಿಲೆಯಿಂದ ರಕ್ಷಿಸುತ್ತದೆ. ತಾಯಿಯ ರಕ್ತಹೀನತೆಯಿಂದ ರಕ್ಷಿಸುತ್ತದೆ. ಸ್ತನ ಮತ್ತು ಗರ್ಭ ಕ್ಯಾನ್ಸರ್ ತಡೆಗಟ್ಟುತ್ತದೆ ಎಂದು ತಿಳಿಸಿದರು.
ಹಸನಾಪುರ ಪಿಎಚ್‍ಸಿಯ ಡಾ.ಇಮ್ತಿಯಾಜ್, ಆರೋಗ್ಯ ನಿರೀಕ್ಷಣಾಧಿಕಾರಿ ಶಿವಶರಣಯ್ಯ, ಆರೋಗ್ಯ ಇಲಾಖೆ ಜಯ ಕೆ.ಪವಾರ್, ಮಲ್ಲಪ್ಪ ಗೋಗಿ, ಸುರೇಶ, ರೇಖಾ, ರಶೀದ್, ಅಂಗನವಾಡಿ ಮೇಲ್ವಿಚಾರಕಿ ಜಯಶ್ರೀ ಪಾಟೀಲ್ ಸೇರಿ ಅಂಗನವಾಡಿ, ಆಶಾ ಕಾಯಕರ್ತೆಯರು, ಬಾಣಂತಿಯರು ಇದ್ದರು.
ಕುಷ್ಠ ರೋಗ ಪತ್ತೆ ಹಚ್ಚುವ ಅಂದೋಲನ : ಕಳೆದ ತಿಂಗಳಿಂದ ಆಗಸ್ಟ್ 14 ರವರೆಗೆ ಕುಷ್ಠ ರೋಗ ಪತ್ತೆ ಹಚ್ಚುವ ಅಂದೋಲನ ನಡೆಯುತ್ತಿದೆ. ಆಶಾ ಕಾರ್ಯಕರ್ತೆಯರು ಮತ್ತು ಸ್ವಯಂ ಸೇವಕ ಪುರುಷರು ಮನೆ ಮನೆ ತೆರಳಿ ಕುಷ್ಠ ರೋಗ ಲಕ್ಷಣಗಳಾದ ತಿಳಿ ಬಿಳಿ ತಾಮ್ರ ಬಣ್ಣದ ಸ್ಪರ್ಷ ಜ್ಞಾನವಿಲ್ಲದ ಮಚ್ಚೆಗಳು, ದೇಹದ ಮೇಲೆ ಗಂಟುಗಳು, ಕೈ, ಕಾಲುಗಳಲ್ಲಿ ಬಹು ದಿನದ ಗಾಯ, ಕೈ,ಕಾಲುಗಳ ಬೆರಳುಗಳು ಮಡಚಿಕೊಂಡಿರುವುದು, ಕಣ್ಣಿನ ರೆಪ್ಪೆಗಳು ಮುಚ್ಚುವಲ್ಲಿ ತೊಂದರೆ ಇಂತಹ ಲಕ್ಷಣಗಳು ಕಂಡು ಬಂದರೆ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಟಿಎಚ್‍ಒ ಡಾ.ಆರ್‍ವಿಎನ್ ತಿಳಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…