ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ

0
21

ಸುರಪುರ: ದೀರ್ಘಕಾಲದವರೆಗೆ ತಾಯಿ ಮಗುವಿಗೆ ಎದೆ ಹಾಲುಣಿಸಿದರೆ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಜತೆಗೆ ಇಬ್ಬರೂ ಆರೋಗ್ಯವಂತರಾಗಿರುತ್ತಾರೆ. ಎದೆ ಹಾಲಿನಿಂದ ತಾಯಿ, ಮಗುವಿನ ಬಾಂಧವ್ಯ ವೃದ್ಧಿಯಾಗುತ್ತದೆ ಎಂದರು.

ನಗರದ ಅಂಗನವಾಡಿ ಕೇಂದ್ರ-1 ರಲ್ಲಿ ವಿಶ್ವ ಸ್ತನ್ಯಪಾನ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದ ಅವರು, ಸ್ತನ್ಯಪಾನದಿಂದ ತಾಯಿ ಮತ್ತು ಮಗು ಇಬ್ಬರ ಆರೋಗ್ಯವು ಉತ್ತಮವಾಗುತ್ತದೆ. ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನವಾದು ಆದ್ದರಿಂದ ತಾಯಂದಿರಲ್ಲಿ ಜಾಗೃತಿ ಮೂಡಿಸಲು ಸರಕಾರ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.

Contact Your\'s Advertisement; 9902492681

ಮಗು ಜನಿಸಿದ ನಂತರ ಬರುವ ಪ್ರಥಮವಾಗಿ ಬರುವ ಹಳದಿ ಬಣ್ಣದ ಗಟ್ಟಿ ಹಾಲು 3-4 ದಿನಗಳವರೆಗೂ ಇದ್ದು ಈ ಹಾಲು ಮಗುವಿಗೆ ಸ್ವಾಭಾವಿಕ ಲಸಿಕೆಯಾಗಿರುತ್ತದೆ. ಮಗುವಿನ ಬೆಳವಣಿಗೆಗೆ ಬೇಕಾಗುವ ಎಲ್ಲ ಪೋಷಕಾಂಶಗಳನ್ನು ಹೊಂದಿರುತ್ತದೆ ಮತ್ತು ಮಗುವಿಗೆ ಜಾಂಡೀಸ್ ಕಾಯಿಲೆಯಿಂದ ರಕ್ಷಿಸುತ್ತದೆ. ತಾಯಿಯ ರಕ್ತಹೀನತೆಯಿಂದ ರಕ್ಷಿಸುತ್ತದೆ. ಸ್ತನ ಮತ್ತು ಗರ್ಭ ಕ್ಯಾನ್ಸರ್ ತಡೆಗಟ್ಟುತ್ತದೆ ಎಂದು ತಿಳಿಸಿದರು.

ಹಸನಾಪುರ ಪಿಎಚ್‍ಸಿಯ ಡಾ.ಇಮ್ತಿಯಾಜ್, ಆರೋಗ್ಯ ನಿರೀಕ್ಷಣಾಧಿಕಾರಿ ಶಿವಶರಣಯ್ಯ, ಆರೋಗ್ಯ ಇಲಾಖೆ ಜಯ ಕೆ.ಪವಾರ್, ಮಲ್ಲಪ್ಪ ಗೋಗಿ, ಸುರೇಶ, ರೇಖಾ, ರಶೀದ್, ಅಂಗನವಾಡಿ ಮೇಲ್ವಿಚಾರಕಿ ಜಯಶ್ರೀ ಪಾಟೀಲ್ ಸೇರಿ ಅಂಗನವಾಡಿ, ಆಶಾ ಕಾಯಕರ್ತೆಯರು, ಬಾಣಂತಿಯರು ಇದ್ದರು.

ಕುಷ್ಠ ರೋಗ ಪತ್ತೆ ಹಚ್ಚುವ ಅಂದೋಲನ : ಕಳೆದ ತಿಂಗಳಿಂದ ಆಗಸ್ಟ್ 14 ರವರೆಗೆ ಕುಷ್ಠ ರೋಗ ಪತ್ತೆ ಹಚ್ಚುವ ಅಂದೋಲನ ನಡೆಯುತ್ತಿದೆ. ಆಶಾ ಕಾರ್ಯಕರ್ತೆಯರು ಮತ್ತು ಸ್ವಯಂ ಸೇವಕ ಪುರುಷರು ಮನೆ ಮನೆ ತೆರಳಿ ಕುಷ್ಠ ರೋಗ ಲಕ್ಷಣಗಳಾದ ತಿಳಿ ಬಿಳಿ ತಾಮ್ರ ಬಣ್ಣದ ಸ್ಪರ್ಷ ಜ್ಞಾನವಿಲ್ಲದ ಮಚ್ಚೆಗಳು, ದೇಹದ ಮೇಲೆ ಗಂಟುಗಳು, ಕೈ, ಕಾಲುಗಳಲ್ಲಿ ಬಹು ದಿನದ ಗಾಯ, ಕೈ,ಕಾಲುಗಳ ಬೆರಳುಗಳು ಮಡಚಿಕೊಂಡಿರುವುದು, ಕಣ್ಣಿನ ರೆಪ್ಪೆಗಳು ಮುಚ್ಚುವಲ್ಲಿ ತೊಂದರೆ ಇಂತಹ ಲಕ್ಷಣಗಳು ಕಂಡು ಬಂದರೆ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಟಿಎಚ್‍ಒ ಡಾ.ಆರ್‍ವಿಎನ್ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here