ಹೈದರಾಬಾದ್ ಕರ್ನಾಟಕ

ಸರ್ವಾಧ್ಯಕ್ಷರಾಗಿ ಹಿರಿಯ ಲೇಖಕಿ ಪ್ರಮೀಳಾ ಜಾನಪ್ಪಗೌಡ ಆಯ್ಕೆ

ಕಲಬುರಗಿ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಆಗಷ್ಟ್ ಕೊನೆಯ ವಾರದಲ್ಲಿ ಹಮ್ಮಿಕೊಳ್ಳಲುದ್ದೇಶಿಸಲಾಗಿರುವ ತಾಲೂಕಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಪ್ರಮೀಳಾ ಜಾನಪ್ಪಗೌಡ ಅವರನ್ನು ಆಯ್ಕೆ ಮಾಡಲಾಗಿದೆ ಕಸಾಪ ತಾಲೂಕಾಧ್ಯಕ್ಷ ಗುರುಬಸಪ್ಪ ಎಸ್ ಸಜ್ಜನಶೆಟ್ಟಿ ತಿಳಿಸಿದ್ದಾರೆ.

ನಗರದ ಕನ್ನಡ ಭವನದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇತ್ತೀಚೆಗೆ ನಡೆಸಿದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಇವರನ್ನು ಸರ್ವಾನುಮತದಿಂದ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರ ಮಾರ್ಗದರ್ಶನದಲ್ಲಿ ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಓದು ಒಕ್ಕಾಲು ಬುದ್ದಿ ಮುಕ್ಕಾಲು ಎಂಬ ಗಾದೆ ಮಾತಿನಂತೆ ಲೇಖಕಿ ಪ್ರಮೀಳಾ ಜಾನಪ್ಪಗೌಡ ರವರು ಶಾಲೆಯಲ್ಲಿ ಓದಿದ್ದು ಕಡಿಮೆ. ಬದುಕಿನ ಶಾಲೆಯಲ್ಲಿ ಕಲಿತಿದ್ದೇ ಹೆಚ್ಚು. ಅಧ್ಯಯನದಿಂದ ವಿಷಯ ಸಂಗ್ರಹವಾಗುತ್ತದೆ. ಸಂಸ್ಕಾರದಿಂದ ಬುದ್ದಿ ಬಲ ಪಡುತ್ತದೆ. ಗಳಿಸಿದ ವಿದ್ಯೆ ಪಡೆದುಕೊಂಡ ಬುದ್ದಿ ಮನುಷ್ಯ ಜೀವನದಲ್ಲಿ ಹಾಸು ಹೊಕ್ಕಾದಾಗ ಆ ಮನುಷ್ಯ ವಿದ್ಯಾವಂತ, ಬುದ್ಧಿವಂತ ಉತ್ತಮ ಸಂಸ್ಕಾರ ಪಡೆದ ಸುಸಂಸ್ಕøತ ವ್ಯಕ್ತಿ ಪ್ರಮೀಳಾ ಜಾನಪ್ಪಗೌಡ ಅವರಾಗಿದ್ದಾರೆ.

ಪ್ರಮೀಳಾ ಜಾನಪ್ಪಗೌಡ ಅವರಿಗೆ ಜಾನಪದ ತ್ರಿಪದಿ, ಶರಣ ವಚನಗಳ ಕಡೆ ಹೆಚ್ಚಿನ ಒಲವು ಇರುವ ಕಾರಣಕ್ಕಾಗಿ, ಅಂತೆಯೇ ಅವರು ರಚಿಸಿದ ಪ್ರಮುಖವಾದವಗಳಲ್ಲೊಂದಾದ ಲೆಕ್ಕವಿಲ್ಲ ಗೆಜ್ಜೆ ಕುಣಿದಾಗ ಎಂಬ ಕೃತಿ ಜನಮನ್ನಣೆ ಪಡೆದುಕೊಂಡಿದೆ. ಇವರ ಹರಿತವಾದ ವಿಚಾರಧಾರೆ, ಜೀವನ ಮೌಲ್ಯಗಳನ್ನು ತೂಗಿ ನೋಡುವ ಲೌಕಿಕ ಶಕ್ತಿ ಇವರ ಅನೇಕ ಕೃತಿಗಳಲ್ಲಿ ಹರಿದುಬಂದಿರುವುದರಿಂದ ಇವರ ಸಾಹಿತ್ಯ ಕೃತಿಗಳು ಓದುಗರ ಗಮನ ಸೆಳೆದಿವೆ.

ಇವರ ಪ್ರಮುಖ ಕೃತಿಗಳಾದ ಬದುಕು ಸಾಗಲಿ, ನಿರ್ಧಾರ, ಮನುಜ, ಬರೆದೆನವ್ವ ಕವನ ಸೇರಿ ಸುಮಾರು ಒಂಭತ್ತಕ್ಕೂ ಹೆಚ್ಚು ಮೌಲಿಕ ಕೃತಿಗಳು ರಚಿಸಿದ್ದಾರೆ. ಇವರ ಅನೇಕ ಕೃತಿಗಳಿಗೆ ಗುಲಬರ್ಗ ವಿಶ್ವವಿದ್ಯಾಲಯವು ರಾಜ್ಯೋತ್ಸವ ಗೌರವ ಪುರಸ್ಕಾರ ಪಡೆದುಕೊಂಡಿವೆ.
ಪ್ರಮೀಳಾ ಜಾನಪ್ಪಗೌಡರು ಕಾದಂಬರಿಕಾರ್ತಿ, ಕಥೆಗಾರ್ತಿ, ಕವಯತ್ರಿಯೂ ಆಗಿರುವ ಲೇಖಕಿ ಯವರು ವಿಭಿನ್ನ ಶೈಲಿಯ ಕೃತಿ ರಚನೆಗಳಿಂದ ವಿಶೇಷರಾಗಿ ತೋರುತ್ತಾರೆ. ಬದುಕಿನ ಗಾಢ ಅನುಭವ ಮತ್ತು ಅವರು ರೂಢಿಸಿಕೊಂಡು ವೀಕ್ಷಿಸುವ ವಿಭಿನ್ನ ದೃಷ್ಟಿಕೋನ. ಅದನ್ನು ಸಾಹಿತ್ಯಕ್ಕೆ ಭಟ್ಟಿಯಿಳಿಸುವ ಚಾಕಚಕ್ಯತೆ ಇವರ ಸಾಹಿತ್ಯದಲ್ಲಿ ಬಹು ಆಳವಾಗಿ ಕಂಡು ಬರುತ್ತವೆ.

ಸಭೆಯಲ್ಲಿ ತಾಲೂಕಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ವಿಶ್ವನಾಥ ಯನಗುಂಟಿ, ವಿಶಾಲಾಕ್ಷಿ ಮಾಯಣ್ಣವರ್, ಕೋಶಾಧ್ಯಕ್ಷ ಕುಪೇಂದ್ರ ಬರಗಾಲಿ, ಪ್ರಮುಖರಾದ ಪ್ರಭವ ಪಟ್ಟಣಕರ್, ಮಲ್ಲಿಕಾರ್ಜುನ ಇಬ್ರಾಹಿಂಪುರ, ಕವಿತಾ ಕವಳೆ, ಸುನೀತಾ ಮಾಳಗಿ, ಭಾಗ್ಯಶ್ರೀ ಮರಗೋಳ, ಶರಣು ಹಾಗರಗುಂಡಗಿ, ರೇವಯ್ಯಾ ಸ್ವಾಮಿ ಶ್ರೀನಿವಾಸ ಸರಡಗಿ, ರೇವಣಸಿದ್ದಪ್ಪ ಎಸ್ ಗುಂಡಗುರ್ತಿ, ಕುಶಾಲ ಧರ್ಗಿ, ಬಸವರಾಜ ತೋಟದ, ಮಂಜುನಾಥ ಕಂತೆಗೋಳ, ವಿಜಯಕುಮಾರ ಹಾಬನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮಾದರಿ ಸಮ್ಮೇಳನವನ್ನು ನಡೆಸಲು ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಈಗಾಗಲೇ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು ಅಧ್ಯಕ್ಷರಾಗಿ ವಿನೋದ ಪಾಟೀಲ ಸರಡಗಿ, ಕಾಯಾಧ್ಯಕ್ಷರಾಗಿ ರಾಘವೇಂದ್ರ ಕಲ್ಯಾಣಕರ್ ಅವರನ್ನು ನೇಮಕ ಮಾಡಲಾಗಿದೆ. ಕಲೆ, ಸಾಹಿತ್ಯ, ಕನ್ನಡಿಗರ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ವಿಷಯಗಳನ್ನೊಳಗೊಂಡ ಸಮ್ಮೇಳನವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

12 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

21 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

21 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

22 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago