ಕಲಬುರಗಿ: ಜಾತಿ, ಧರ್ಮ, ವರ್ಣ ವ್ಯವಸ್ಥೆಯಲ್ಲಿ ಸಿಲುಕಿಸಿ
ತಾಯ್ತನ, ಅಂತಃಕರಣ, ಹೃದಯವಂತಿಕೆಗೆ ಗಾಯಗೊಳಿಸಿರುವ ಈ ದಿನಮಾನಗಳಲ್ಲಿ ಬುದ್ದ, ಶರಣ, ಸೂಫಿ ತತ್ವಪದಕಾರರ ಸೌಹಾರ್ಧ ವಿಚಾರಗಳೆಂಬ ದಿವ್ಯ ನಾಡ ಔಷದಗಳನ್ನು ನೀಡಬೇಕಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕವಯತ್ರಿ ಡಾ. ಫರ್ವಿನ್ ಸುಲ್ತಾನ್ ಅವರ ಶರಣರ ನಾಡಿನ ಸೂಫಿ ಮಾರ್ಗ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಬೌದ್ಧ, ಮಹಾವೀರ,ಶರಣ, ಸೂಫಿ ಮಾರ್ಗ ಎಲ್ಲವೂ ಒಂದೇ. ಸ್ವತ್ತು ಸೊಕ್ಕಾಗದ ಮುನ್ನ ( ಹಣ, ಆಸ್ತಿಯ ಜೊತೆಗೆ ಜಾತಿ, ಧರ್ಮ) ಅಹಂಕಾರ ನೀಗಿಸಿಕೊಳ್ಳಬೇಕು ಎಂಬುದನ್ನು ಸೂಫಿ ಮಾರ್ಗ ಹೇಳಿ ಕೊಡುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಚಿಂತಕಿ ಡಾ. ಮೀನಾಕ್ಷಿ ಬಾಳಿ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶ ಹರಿ, ಹಜರತ್ ಪರಂಪರೆಯ ನಾಡಾಗಿದೆ. ಈ ಮೂರನ್ನೂ ಏಕೀರ್ಭವಿಸಿಕೊಂಡು ಸೌಹಾರ್ದತೆ ಸಾರುವಂತಿದೆ. ನಮ್ಮದು ಬಹು ಸಂಸ್ಕೃತಿಯ ನಾಡಾಗಿದ್ದು, ಏಕ ಸಂಸ್ಕೃತಿ ಹೇರುವ ಆಟ ಇಲ್ಲಿ ನಡೆಯದು ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಆಶಯ ಭಾಷಣ ಮಾಡಿದರು. ಲೇಖಕಿ ಫರ್ವಿನ್ ಸುಲ್ತಾನ್ ಮಾತನಾಡಿದರು.ಡಾ. ಡಿಎನ್. ಪಾಟೀಲ ನಿರೂಪಿಸಿದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಹೂಗಾರ, ದೇಸಿ ಪುಸ್ತಕ ಪ್ರಕಾಶನದ ಸೃಷ್ಟಿ ನಾಗೇಶ, ಸಮುದಾಯ ಜಿಲ್ಲಾಧ್ಯಕ್ಷ ಡಾ. ದತ್ತಾತ್ರೇಯ ಇಕ್ಕಳಕಿ, ಜಿಲ್ಲಾ ಕಸಾಪ ಗೌರವಾಧ್ಯಕ್ಷರಾದ ಧರ್ಮಣ್ಣ ಧನ್ನಿ, ಶಿವರಾಜ ಅಂಡಗಿ ವೇದಿಕೆಯಲ್ಲಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…