ಕಲಬುರಗಿ : ನಗರದ ಕರುನಾಡ ವಿಜಯ ಸೇನೆಯ ಜಿಲ್ಲಾ ಕಾರ್ಯಲಯದಲ್ಲಿ ಕರುನಾಡ ವಿಜಯ ಸೇನೆಯ ಜಿಲ್ಲಾ ಮಹಿಳಾ ಘಟಕ ಹಾಗೂ ಕಲಬುರಗಿ ತಾಲೂಕು ಘಟಕ ನೂತನ ಪದಾಧಿಕಾರಿಗಳನ್ನು ಸೇನೆಯ ಜಿಲ್ಲಾಧ್ಯಕ್ಷ ಪೃಥ್ವಿರಾಜ ಎಸ್. ರಾಂಪುರ ರವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.
ಪೃಥ್ವಿರಾಜ ಎಸ್. ರಾಂಪುರ ಮಾತನಾಡುತ್ತಾ ಕರುನಾಡ ವಿಜಯ ಸೇನೆ ಸಂಘಟನೆ ಕನ್ನಡದ ನೆಲ ಜಲ ಭಾಷೆ ಕನ್ನಡದ ಸಂಸ್ಕøತಿಕ ಉಳಿವಿಗಾಗಿ ಹಾಗೂ ಕನ್ನಡಿಗರಿಗೆ ಮೊದಲ ಆದ್ಯತೆ ಕೊಡಬೇಕೆ ಸಮಾಜದಲ್ಲಿ ಬದುಕುತ್ತಿರುವ ಬಡ ನಿರ್ಗತಿಕರು ಪರವಾಗಿ ಸಂಘಟನೆ ನಿರಂತರವಾಗಿ ಕೆಲಸ ಮಾಡುತ್ತಾ ಬರುತ್ತಿದೆ ಕರುನಾಡ ವಿಜಯಸೇನೆ ಇದು ಒಂದು ಕೇವಲ ಸಂಘಟನೆ ಅಲ್ಲ ಇದು ಒಂದು ಕರ್ನಾಟಕ ರಾಜ್ಯದಲ್ಲಿ ದೊಡ್ಡ ಶಕ್ತಿ ಇವತ್ತಿನ ದಿನಗಳಲ್ಲಿ ಈ ರಾಜ್ಯದ ಕನ್ನಡಿಗರಿಗಾಗಿ ರಾಜ್ಯದ ಸಂಸ್ಕೃತಿಕ ಕಾರ್ಯಕ್ರಮಗಳು ಕರುನಾಡ ವಿಜಯಸೇನೆ ಸಂಘಟನೆ ಈ ರಾಜ್ಯಕ್ಕೆ ಅಪಾರ ಕೊಡುಗೆಗಳನ್ನು ಕೊಟ್ಟಿದೆ.
ವಿಜಯಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್ ಅವರು ಸರಕಾರಿ ಶಾಲೆಗಳು ಉಳಿಯಬೇಕು ಸರಕಾರಿ ಶಾಲೆಗಳಿಗೆ ಹೆಚ್ಚಿನ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಬೇಕೆ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳ ತರ ಅಂದ ಚೆಂದ ಕಾಣಬೇಕೆಂದು ವಿಜಯಸೇನೆ ಸ್ಥಾಪನೆಗೊಂಡ ನಂತರ ಅವರ ಮೊಟ್ಟ ಮೊದಲ ಕಾರ್ಯಕ್ರಮ ಸರಕಾರಿ ಶಾಲೆಗಳಿಗೆ ಬಣ್ಣದ ರಂಗೇರಿಸುವ ಮುಖಾಂತರ ಈಗಾಗಲೇ ವಿಜಯಸೇನೆ ರಾಜ್ಯದಲ್ಲಿ ಸುಮಾರು 500 ಸರಕಾರಿ ಶಾಲೆಗಳಿಗೆ ಬಣ್ಣದ ರಂಗೇರಿಸಿ ಅಂದ ಚಂದ ಕಾಣುವ ಹಾಗೆ ಮಾಡಿದೆ ವಿಜಯಸೇನೆ ಈಗಲೂ ಕೂಡ ಈ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ.
ತದನಂತರ ನ್ಯಾಯಾಲಯದ ತಿರ್ಪು ಕೇವಲ ಆಂಗ್ಲ ಭಾಷೆಯಲ್ಲಿ ಆದೇಶ ಇರುತ್ತಾ ಇತ್ತು ಅದನ್ನು ವಿಜಯಸೇನೆ ಗಮನಕ್ಕೆ ತೆಗೆದುಕೊಂಡು ಇನ್ನು ಮುಂದೆ ನ್ಯಾಯಾಲಯದ ತರ್ಪು ಕನ್ನಡದಲ್ಲಿ ಇರಬೇಕೆಂದು ಹೋರಾಟ ಮಾಡುವ ಮುಖಾಂತರ ಸರಕಾರಕ್ಕೆ ಒತ್ತಾಯಿಸಿ ಹೋರಾಟ ಮಾಡಿದ ನಂತರ ಸರಕಾರ ಎಚ್ಚೆತ್ತುಕೊಂಡು ಕರ್ನಾಟಕ ನ್ಯಾಯಾಲಯದ ತಿರ್ಫಘನ್ನು ಕನ್ನಡದಲ್ಲಿ ನೀಡಬೇಕೆಂದು ಆದೇಶ ಹೊರಡಿಸಿತ್ತು.
ಇದು ವಿಜಯಸೇನೆ ಹೋರಾಟದ ಪ್ರತಿಫಲವಾಗಿದೆ ಕೇವಲ ಹೋರಾಟಕ್ಕೆ ಮೀಸಲಾಗಾದೆ (ಕೊರೋನಾ) ಕೋವಿಡ್ ಮಹಾಮಾರಿಯಿಂದ ಲಾಕ್ ಡೌನ್ ಪರಿಣಾಮದಿಂದ ದೇಶವೆ ನಲೋಗಿ ಹೋದಾಗ ಈ ದೇಶದ ಜನರಿಗೆ ಜೀವದ ಭಯದ ವಾತಾವರಣ ಸೃಷ್ಟಿ ಆದರು ಕೂಡ ವಿಜಯಸೇನೆ ರಾಜ್ಯ ಪದಾಧಿಕಾರಿಗಳು ತಮ್ಮ ಪ್ರಾಣವನ್ನು ಲೆಕ್ಕಿಸದೆ ರಾಜ್ಯದ ಸುಮಾರು 5000 ಕುಟುಂಬಗಳಿಗೆ ಆಹಾರ ಕಿಟ್ಟುಗಳನ್ನು ವಿತರಣೆ ಮಾಡಿರುತ್ತಾರೆ ಹೀಗೆ ವಿಜಯಸೇನೆ ಕೊಡುಗೆಗಳು ಅಪ್ಪಾರವಾಗಿ ಈ ರಾಜ್ಯದ ಕುಟುಂಬಗಳಿಗೆ ನೀಡಿದೆ ಇದೆ.
ಬೆಂಗಳೂರಿನ ಮಹಾ ಜನತೆಗೆ ಮಹಾಜನತೆಯ ಒಳಿತಿಗಾಗಿ ಬೆಂಗಳೂರಿನ ಜನತೆ ಕುಡಿಯುವ ನೀರಿಗಾಗಿ ಮೇಕೆದಾಟು ಆಣೆ ಕಟ್ಟಿಗಾಗಿ ರಾಮನಗರದಿಂದ ವಿಧಾನಸೌಧದ ವರೆಗೆ ಸಾವಿರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿ ಬೃಹತ್ ಪ್ರತಿಭಟನೆ ಮಾಡುವ ಮುಖಾಂತರ ಸರಕಾರಕ್ಕೆ ಎಚ್ಚರಗೆ ನೀಡಿದ್ದು ಇದೇ ವಿಜಯಸೇನೆ ಅದು ಅಲ್ಲದೆ ಕನ್ನಡ ನಾಡಿನ ಹನುಮನಿಗೆ ಕನ್ನಡಿಗರಿಂದ ಉತ್ಸವ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದು,್ದ ರಾಜ್ಯ ಯುವ ಘಟಕ ಅಧ್ಯಕ್ಷ ಆರ್ ಎಸ್ ಮಹೇಶ್ ರವರ ನೇತೃತ್ವದಲ್ಲಿ ನಡೆದ ಕರ್ಯಕ್ರಮ ಅತ್ಯಂತ ಅದ್ದೂರಿಯಾಗಿ ಯಶಸ್ವಿಗೊಂಡಿತು.
ವಿಜಯ ಸೇನೆ ಕರ್ಯಕ್ರಮಗಳು ಇಷ್ಟೇ ಅಲ್ಲದೆ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪುತ್ರ ಗಣಧಾಳ್ ರವರ ನೇತೃತ್ವದಲ್ಲಿ ರಾಯಚೂರಿನ ಲಿಂಗಸುಗೂರ ತಾಲೂಕಿನಲ್ಲಿ 101 ಜೋಡಿಗಳಿಗೆ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಅತ್ಯಂತ ಯಶಸ್ವಿಕೊಂಡಿತ್ತು ಇಷ್ಟಲ್ಲದೆ ಬೃಹತ್ ಸಮಾವೇಶ ಕಾರ್ಯಕ್ರಮ, ಕಲಾಬ್ರಹ್ಮ ಪ್ರಶಸ್ತಿ ಪ್ರಧಾನ, ರಾಯಣ್ಣ ಉತ್ಸವ, ಕನ್ನಡ ಸಂಸ್ಕೃತಿಕ ಹಬ್ಬ, ಕೆಂಪೇಗೌಡರ ಜಯಂತಿ, ಅತ್ಯುತ್ತಮ ಶಿಕ್ಷಕರಿಗೆ ವಿದ್ಯಾವಾರಿಧಿ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಕದಂಬ ಕನ್ನಡಿಗ ಪ್ರಶಸ್ತಿ ಹೀಗೆ ಹಲವಾರು ಕಾರ್ಯಕ್ರಮ ಈ ರಾಜ್ಯದಲ್ಲಿ ಮಾಡುತ್ತಾ ಬಂದಿದೆ ಎಂದು ಜಿಲ್ಲಾಧ್ಯಕ್ಷ ಪೃಥ್ವಿರಾಜ ಎಸ್ ರಾಂಪುರ ಅವರು ನೂತನ ಪದಾಧಿಕಾರಿಗಳಿಗೆ ಹೇಳುವ ಮುಖಾಂತರ ಸಂಘಟನೆಯ ಹೋರಾಟಗಳು ಹಾಗೂ ಕಾರ್ಯಕ್ರಮಗಳು ಈ ರಾಜ್ಯದ ಕನ್ನಡಿಗರಿಗೆ ಕೊಡುಗೆಗಳ ಬಗ್ಗೆ ಹೇಳಿದರು.
ನಂತರ ಕಲಬುರಗಿ ತಾಲೂಕು ಅಧ್ಯಕ್ಷರನ್ನಾಗಿ ಕಲ್ಯಾಣಿ ಎಸ್. ತಳವಾರ್, ಮಹಿಳಾ ಘಟಕ ಜಿಲ್ಲಾಧ್ಯಕ್ಷರಾಗಿ ನಿರ್ಮಲಾ ಎಂ. ತಳವಾರ್, ತಾಲೂಕು ಗೌರವಾಧ್ಯಕ್ಷರನ್ನಾಗಿ ಅಲ್ಲಿಸಾ ಅಗಸಿಮನಿ, ತಾಲೂಕು ಉಪಾಧ್ಯಕ್ಷರಾಗಿ ಪ್ರಭುಲಿಂಗ ಎ ತಳವಾರ್ ಇವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಯುವ ಘಟಕ ಅಧ್ಯಕ್ಷ ನಾಗರಾಜ ಮೈತ್ರಿ, ನಗರ ಅಧ್ಯಕ್ಷ ರಾಜು ಎಚ್ ಗುಂಟ್ರಳ, ರಾಜೇಂದ್ರ ಟೈಗರ್, ಸತೀಶ್ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…