ಕಾರ್ಯ ಮರೆತ ಪತ್ರಕರ್ತರಿಂದ ಸಮಾಜಕ್ಕೆ ಅಪಾಯ: ವಿಷಾದ

ಚಿತ್ತಾಪುರ: ಪತ್ರಕರ್ತರಲ್ಲಿ ಕಾರ್ಯನಿರತ ಪತ್ರಕರ್ತರು ಮತ್ತು ಕಾರ್ಯಮರೆತ ಪತ್ರಕರ್ತರು ಎಂಬ ಎರಡು ಭಾಗಗಳಿದ್ದು ಕಾರ್ಯ ಮರೆತ ಪತ್ರಕರ್ತರು ದೇಶಕ್ಕೆ ಅಪಾಯಕಾರಿ ಎಂದು ಲೇಖಕ, ಪ್ರಗತಿಪರ ಚಿಂತಕ ಶಿವಸುಂದರ ಬೆಂಗಳೂರು ಅವರು ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಅವರು, ಭಗತ್ ಸಿಂಗ್, ನೇತಾಜಿ, ಕಮ್ಯುನಿಸ್ಟ್ ಹೋರಾಟಗಾರರು ಕಂಡಿರುವ ಕನಸಿನ ಭಾರತ ಕಟ್ಟಬೇಕಾಗಿದೆ. ಬಂಡವಾಳ ಶಾಹಿ ವ್ಯವಸ್ಥೆ ನಿರನಾಮವಾಗಿ ಸಮಾಜವಾದದ ಅನಿವಾರ್ಯತೆಯಿದೆ.

ಆಳುವ ಪಕ್ಷ ಮಳೆ ಬರುತ್ತಿದೆ ಎನ್ನುತ್ತಿದೆ, ವಿರೋಧ ಪಕ್ಷ ಮಳೆ ಬರುತ್ತಿಲ್ಲ ಎನ್ನುತ್ತಿದೆ. ಈ ಹೇಳಿಕೆಯ ಸತ್ಯ ಬಿಚ್ಚಿಡಬೇಕಾದ ಪತ್ರಕರ್ತ ಕಿಡಿಕಿಯನ್ನು ತೆಗೆದು ನೋಡಿ ಸತ್ಯದಿಂದ ಕೂಡಿದ ವರದಿಯನ್ನು ಪ್ರಕಟಿಸಬೇಕು ಇದು ಪತ್ರಕರ್ತರನ ಮುಖ್ಯ ಜವಾಬ್ದಾರಿಯಾಗಿದೆ.

ಸ್ವಾತಂತ್ರ್ಯಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವ ಗುಂಪೊಂದು ಇತ್ತು. ಈಗ ಬಹುತೇಕ ಅವರೇ ದೇಶ ಆಳುತ್ತಿದೆ. ವಿರೋಧ ಪಕ್ಷದ ಮತ್ತು ಆಡಳಿತ ಪಕ್ಷದ ಹೇಳಿಕೆ ಬರೆದರೆ ಪತ್ರಕರ್ತರ ಜವಾಬ್ದಾರಿ ಮುಗಿಯುವುದಿಲ್ಲ. ತನ್ನ ಮನಸಿನ ಕಿಟಕಿ ತೆರೆದು ನೋಡಬೇಕು. ತನಗೆ ಕಂಡಿದ್ದನ್ನು ಬರೆಯಬೇಕು ಎಂದರು.

ಜಾಗತಿಕ ತಾಪಮಾನದಿಂದ ನಾಶವಾಗುತ್ತಿರುವ ಅಂಬಾನಿ, ಅದಾನಿ ಮಾಡಿರುವ ಭೂ ಗರ್ಭವನ್ನು ಎಣೆದು ತೆಗೆದಿರುವ ತೈಲಗಳಿಂದ ಪರಿಸರ ನಾಶವಾಗುತ್ತಿರಲು ಪ್ರಮುಖ ಕಾರಣವಾಗಿದೆ. ಬುದ್ಧಿ ಜೀವಿಗಳಿಗೆ, ರಾಜಕಾರಣಿಗಳನ್ನು ಬೆಳೆಸುವ ಮೂಲಕ ಮಾನವ ಸಂಪನ್ಮೂಲಕ್ಕೆ ಮಾಡುತ್ತಿರುವ ದ್ರೋಹವಾಗಿದೆ. ಶ್ರಮಹಾಕಿ ದುಡಿಯುವ ಈ ದೇಶದ ಜನರನ್ನು ನಾವುಗಳು ಶೋಷಣೆಗೆ ತಳ್ಳಲ್ಪಡಲಾಗುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪತ್ರಿಕಾ ರಂಗದ ಪಾತ್ರ ಬಹಳ ಮಹತ್ವದ್ದಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಉಪಾಸನ ಸ್ವಾತಂತ್ರ್ಯ ಉಳಿಸಲು ನಾವು ಕಂಕಣ ಬದ್ಧರಾಗಿಬೇಕು ಎಂದರು.

ಶರಣಬಸವೇಶ್ವರ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಸುನಿತಾ ಬಿ.ಪಾಟೀಲ ಮಾತನಾಡಿ, ಧ್ವನಿ ಇಲ್ಲದವರಿಗೆ ಧ್ವನಿಯಾಗಿದ್ದ ಪತ್ರಿಕಾ ರಂಗಕ್ಕೆ, ಗ್ರಾಮೀಣ ಮಟ್ಟದ ಪರ್ತಕರ್ತರ ಕೊಡುಗೆ ಅಪಾರವಾಗಿದೆ. ಸಂಬಳ ಇಲ್ಲದೆ ಸಮಾಜ ಸೇವೆಯಲ್ಲಿ ಕಾರ್ಯಪ್ರವೃತರಾಗಿರುವ ಇವರ ತ್ಯಾಗಕ್ಕೆ ಅಭಿನಂದನೆಗಳು ಹೇಳಲೆಬೇಕು ಎಂದರು.

ಶಿಕ್ಷಣ ಪ್ರೇಮಿ ನಾಗರಡ್ಡಿಗೌಡ ಕರದಾಳ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಿವೈಎಸ್ಪಿ ಶಂಕರಗೌಡ ಪಾಟೀಲ, ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ರವಿಂದ್ರ ಸಜ್ಜನಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಸಂಘದ ಅಧ್ಯಕ್ಷ ಸಿದ್ದರಾಜ ಮಲಕಂಡಿ ಸಭೆ ಅಧ್ಯಕ್ಷತೆ ವಹಿಸಿದ್ದರು.

ಡಾ.ಸಾಯಬಣ್ಣಾ ಗುಡುಬಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಡಾ.ಶಿವರಂಜನ್ ಸತ್ಯಂಪೇಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಚಿತ್ತಾಪುರ ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ವಾಡಿ ಪುರಸಭೆ ಮುಖ್ಯಾಧಿಕಾರಿ ಸಿ.ಫಕೃದ್ದೀನ್ ಸಾಬ್, ನರೇಗಾ ಯೋಜನೆ ಸಹಾಯಕ ನಿರ್ದೇಶಕ ಪಂಡಿತ್ ಸಿಂಧೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿಕ್ರಮ್ ನಿಂಬರ್ಗಾ ನಿರೂಪಿಸಿದರು. ಪತ್ರಕರ್ತ ಜಗದೇವ ದಿಗ್ಗಾವಂಕರ್ ಸ್ವಾಗತಿಸಿದರು. ನಾಗಯ್ಯ ಸ್ವಾಮಿ ಅಲ್ಲೂರು ವಂದಿಸಿದರು.

emedialine

Recent Posts

ಕಲ್ಯಾಣ ಕರ್ನಾಟಕ ಉತ್ಸವ 18 ರಂದು ಆಚರಿಸಲು ಆಗ್ರಹ

ಕಲಬುರಗಿ:"ಕಲ್ಯಾಣ ಕರ್ನಾಟಕ ಉತ್ಸವ" ವನ್ನು ಸೆಪ್ಟೆಂಬರ್ "18" ರಂದು ಆಚರಿಸಲು ಕರ್ನಾಟಕ ಯುವಜನ ಒಕ್ಕೂಟ(ರಿ) ಮತ್ತು "ಕಲ್ಯಾಣ ಕರ್ನಾಟಕ ಪ್ರತ್ಯೇಕ…

10 hours ago

ಸಚಿವ ಸಂಪುಟ ಸಭೆಯ ಮೂಲಕ ಚಿಂಚೋಳಿ ಸಕ್ಕರೆ ಕಾರ್ಖಾನೆ ಪುನಃ ಪ್ರಾರಂಭಕ್ಕೆ ಮನವಿ

ಕಲಬುರಗಿ: ಸಚಿವ ಸಂಪುಟ ಸಭೆಯ ಮೂಲಕ ಚಿಂಚೋಳಿ ಸಕ್ಕರೆ ಕಾರ್ಖಾನೆ ಪುನಃ ಪ್ರಾರಂಭ ಮಾಡುವ ತೀರ್ಮಾನ ಕೈಗೊಳಬೇಕೆಂದು ಕಾಳಗಿ ತಾಲೂಕ…

10 hours ago

ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಣಯ ಕೈಗೊಳ್ಳುವ ನಿರೀಕ್ಷೆ ಇದೆ: ಭೀಮನಗೌಡ ಪರಗೊಂಡ

ಕಲಬುರಗಿ: ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯಂದು ಹತ್ತು ವರ್ಷಗಳ ನಂತರ ಬಹುನಿರೀಕ್ಷಿಯ ಸಚಿವ ಸಂಪುಟ ಕಲಬುರಗಿಯಲ್ಲಿ ನಡೆಯುತ್ತಿರುವುದು ಈ ಭಾಗದ…

10 hours ago

10 ವರ್ಷಗಳ ನಂತರ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ: ಡಾ. ಅಜಯಸಿಂಗ್

ಕಲಬುರಗಿ, ಕಳೆದ ಹತ್ತು ವರ್ಷಗಳ ನಂತರ ಕಲಬುರಗಿಯಲ್ಲಿ ಪ್ರಥಮ ಬಾರಿಗೆ ಇಂದು ಸೆಪ್ಟಂಬರ್ 17ರಂದು ರಾಜ್ಯ ಸಚಿವ ಸಂಪುಟ ಸಭೆ…

12 hours ago

ಕೆಐಡಿಸಿಸಿ ಕಪ್ ಕ್ರಿಕೆಟ್ ಟೋರ್ನಮೆಂಟ್ ಸೀಸನ್ 3 ಲಾಂಛನ ಬಿಡುಗಡೆಗೊಳಿಸಿದ ಸಿಎಂ ಸಿದ್ದರಾಮಯ್ಯ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಸುಪ್ರಸಿದ್ದ ಟಿವಿ ಛಾನೆಲ್ ಎಸ್ ಎಸ್ ವಿ ಟಿವಿ ಮತ್ತು ಜೈ ಭೀಮ್ ಟಿವಿ…

13 hours ago

ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾರ್ವಜನಿಕರು ಸಹಕರಿಸಿ: ಶಾಸಕ ಡಾ.ಅಜಯ್ ಸಿಂಗ್

ಕಲಬುರಗಿ: ಪ್ಲಾಸ್ಟಿಕ್ ನಿಷೇಧಕ್ಕೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಹಕರಿಸಿದಾಗ ಮಾತ್ರ ನಗರವನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾಧ್ಯವಿದೆ ಎಂದು…

13 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420