ಜನತಂತ್ರ ಪರಿಕಲ್ಪನೆ ಕೊಟ್ಟವರು ಬಸವಣ್ಣ: ಡಾ. ಜೆ. ಎಸ್. ಪಾಟೀಲ

ಕಲಬುರಗಿ: ಪ್ರಜೆಗಳು ಪ್ರಭುಗಳಂತೆ ಇರುವುದೇ ಪ್ರಜಾಪ್ರಭುತ್ವ” ಎಂಬ ಮಾತಿಗೆ ನಾಂದಿ ಹಾಡಿದವರು ಭಕ್ತಿ ಭಂಡಾರಿ ಬಸವಣ್ಣ. ಇಡೀ ಜಗತ್ತಿಗೆ ಮೊಟ್ಟ ಮೊದಲ ಬಾರಿಗೆ ಜನತಂತ್ರ ಸಂಸದೀಯ ಪರಿಕಲ್ಪನೆಯನ್ನು ಕೊಟ್ಟವರು ಬಸವಣ್ಣನವರು ಎಂದು ವಿಜಯಪುರದ ಸಾಂಸ್ಕೃತಿಕ ಚಿಂತಕ ಡಾ. ಜೆ. ಎಸ್. ಪಾಟೀಲ ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ಸರಣಿ ಉಪನ್ಯಾಸ ಮಾಲೆಯ “ಬಸವವಾದ ಮತ್ತು ಸಂವಿಧಾನದ ಆಶಯಗಳು” ಎಂಬ ವಿಷಯದ ಮೇಲೆ ಅವರು ಮಾತನಾಡಿ ಬಸವವಾದನ್ನು ನಮಗೆ ಅರ್ಥ ಆಗಬೇಕು ಆದರೆ ನಾವು ಮೊದಲು ಸಂವಿಧಾನವನ್ನು ಓದಬೇಕು. ಆಗ ಬಸವಣ್ಣ ಅರ್ಥ ಆಗುತ್ತಾರೆ ಎಂದರು.

ಯಾರು ಈ ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ಹುಟ್ಟು ಹಾಕಿದರೋ ಅದೇ ಮನೆಯಲ್ಲಿಯೇ ಬಸವಣ್ಣನ ಜನನ ಆಗಿದೆ. ಬಸವಣ್ಣ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಅನೇಕ ತಂತ್ರಗಳನ್ನು ಮಾಡಿ ಶರಣರಿಗೆ ಲಿಂಗ ದೀಕ್ಷೆಯನ್ನು ನೀಡಿದ. ಭಾರತದ ನೆಲದಲ್ಲಿ ಅನೇಕ ವಾದಗಳನ್ನು ಬಹಳ ವರ್ಷಗಳಿಂದ ಮನುವಾದದ ವಿರುದ್ಧ ನಿರಂತರವಾಗಿ ಹೋರಾಟ ನಡೆಯುತ್ತಲೇ ಇದೆ.

ಈ ಸಮಾಜದಲ್ಲಿ ಅನಾದೀ ಕಾಲದಿಂದಲೂ ಅಸಮಾನತೆಗಳು ತಾಂಡವಾಡುತ್ತಲೆ ಇದೆ ಜಾತಿ ವ್ಯವಸ್ಥೆಯನ್ನು ಸಂವಿಧಾನ ಜಾರಿಗೆ ಬಂದು ಇಷ್ಟು ವರ್ಷ ಕಳೆದರೂ ಇನ್ನೂ ಅದು ಜೀವಂತವಾಗಿ ಉಳಿದಿದೆ. ಬಸವಣ್ಣ 12ನೇ ಶತಮಾನದಲ್ಲಿಯೇ ಲಿಂಗ ಸಮಾನತೆಯನ್ನು ಮಾಡಿದರು.

ಯಾಕೆಂದರೆ ಪುರೋಹಿತಶಾಹಿಗಳು ಹಾಕಿರುವ ವ್ಯವಸ್ಥೆಯನ್ನು ಬದಲಾವಣೆ ಮಾಡುವುದೇ ಬಸವಣ್ಣನ ಚಳವಳಿಯ ಆಶವಾಗಿತ್ತು. ಆದರೆ ಇಂದು ಅದೇ ಪುರೋಹಿತಶಾಹಿಗಳು ಭಾರತವನ್ನು ಮರಳಿ ಶಿಲಾಯುಗಕ್ಕೆ ತೆಗೆದುಕೊಂಡು ಹೋಗುವ ವ್ಯವಸ್ಥೆ ಈ ದೇಶದಲ್ಲಿ ನಡಿತಾ ಇದೆ. ಅದನ್ನು ಬಸವಾದಿಗಳು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಾದಗಳು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್. ಟಿ. ಫೋತೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಬಸವಣ್ಣ ಯಾವೊಂದು ವರ್ಗಕ್ಕೆ ಸೀಮಿತವಾಗಿಲ್ಲ ಅವರು ಸಾಂಸ್ಕೃತಿಕ ನಾಯಕ ಮತ್ತು ಈ ನಾಡಿನ ಆಸ್ತಿ ಆಗಿದ್ದಾರೆ.

ಹಳ್ಳಿಗಳಲ್ಲಿ ದಲಿತರಷ್ಟು ಬಸವ ತತ್ವಗಳನ್ನು ಅಪ್ಪಿಕೊಂಡಷ್ಟು ಯಾರು ಅಪ್ಪಿಕೊಂಡಿಲ್ಲ. ಪ್ರತಿಯೊಬ್ಬ ದಲಿತನೂ ಬಸವ ತತ್ವವನ್ನು ಪಾಲನೆ ಮಾಡುತ್ತಾರೆ ಎಂದು ಅವರು ಹೇಳಿದರು. ಈ ಸರಣಿ ಉಪನ್ಯಾಸ ಮಾಲೆಯ ಕಾರ್ಯಕ್ರಮದಲ್ಲಿ ಸಾಹಿತಿ ಆರ್. ಕೆ ಹುಡಗಿ, ಶ್ರೀಮತಿ ರೇಣುಕಾ ಸಿಂಗೆ, ಪ್ರಭುಲಿಂಗ ಮಹಾಗಾಂವಕರ್ ಹಾಜರಿದ್ದರು. ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾವಂತರು ಎಷ್ಟೇ ಉನ್ನತ ಸ್ಥಾನಕ್ಕೆ ಹೋದರು ಅದು ನಮಗೆ ಅಂಟಿದ ಅಸ್ಪೃಶ್ಯತೆ ಹೋಗುತ್ತಿಲ್ಲ. ಕೊನೆಗೆ ಜಾತಿಯ ಆಧಾರದ ಮೇಲೆ ಅವರನ್ನು ಗುರುತಿಸುವುದು. – ಪ್ರೊ, ಎಚ್. ಟಿ. ಫೋತೆ, ನಿರ್ದೇಶಕರು. ಕನ್ನಡ ಅಧ್ಯಯನ ಸಂಸ್ಥೆಯ ಗುಲ್ಬರ್ಗ ವಿಶ್ವವಿದ್ಯಾಲಯ.

emedialine

Recent Posts

ಅತಿವೃಷ್ಟಿ ಬೆಳೆ ಹಾನಿ ಪರಿಹಾರ ಕೊಡಿ: ಮುಖ್ಯಮಂತ್ರಿಗಳಿಗೆ ಪ್ರಾಂತ ರೈತ ಸಂಘದ ಆಗ್ರಹ

ಕಲಬುರಗಿ: ಅತಿವೃಷ್ಟಿ ಮಳೆಯಿಂದ ಹಾನಿಯಾದ ಉದ್ದು, ಹೆಸರು, ತೊಗರಿ ಬೆಳೆ ನಷ್ಟವಾಗಿದ್ದು, ಉತ್ಪಾದನೆ ಆಧಾರದಲ್ಲಿ ಪರಿಹಾರ ಕೊಡುವಂತೆ ಹಾಗೂ ಕಬ್ಬಿನ ಬಾಕಿ…

11 hours ago

ಯುವಜನ ಒಕ್ಕೂಟದಿಂದ 76 ನೇ ಕಲ್ಯಾಣ ಕರ್ನಾಟಕ ಸ್ವಾತಂತ್ರೋತ್ಸವ ಆಚರಣೆ

ಕಲಬುರಗಿ: ಸರದಾರ ವಲ್ಲಭಭಾಯಿ ಪಟೇಲ ರ ಮೂರ್ತಿಗೆ ಮಾಲಾರ್ಪಣೆ ಮತ್ತು ರಾಷ್ಟ್ರೀಯ ಗೀತೆ ವಾಚಿಸುವ ಮೂಲಕ ನೈಜ ಕ. ಕ.…

11 hours ago

ಸೆ.19 ರಂದು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

ಚಿತ್ತಾಪುರ: ಪಟ್ಟಣದ ಕ್ರೀಡಾಂಗಣದಲ್ಲಿ 2024-25 ನೇ ಸಾಲಿನ ಚಿತ್ತಾಪುರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆ.19 ರಂದು ಆಯೋಜಿಸಲಾಗಿದೆ ಎಂದು…

11 hours ago

ಕೆಎಎಸ್‌ಎಸ್‌ಐಎಗೆ ನಿಜಾಮೋದ್ದಿನ್ ಚಿಸ್ತಿ ನಾಮನಿರ್ದೇಶನ

ಚಿತ್ತಾಪುರ: ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘಕ್ಕೆ 2024-25 ನೇ ಸಾಲಿಗಾಗಿ ಆಡಳಿತ ಮಂಡಳಿಗೆ ವಿಶೇಷ ಆಹ್ವಾನಿತರಾಗಿ ಸೈಯದ್ ನಿಜಾಮೋದ್ದಿನ್…

11 hours ago

ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ಸಮಾಧಾನವಿದೆ, ತೃಪ್ತಿಯಿಲ್ಲ: ಬಿಆರ್ ಪಾಟೀಲ

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಿದ ಸಮಾಧಾನ ಇದೆ. ಆದರೆ, ಅದರಲ್ಲಿ ತೆಗೆದುಕೊಂಡ ನಿರ್ಣಯಗಳು ತೃಪ್ತಿಯಿಲ್ಲ…

12 hours ago

ವಕ್ಫ್ ಬೋರ್ಡ್ ಆಸ್ತಿ ಒತ್ತುವರಿ ನಿಯಂತ್ರಣಕ್ಕೆ ಕಂಪೌಂಡ್ ನಿರ್ಮಾಣ; ಬಿ.ಜೆಡ್.ಜಮೀರ್ ಅಹ್ಮದ್ ಖಾನ್

ಕಲಬುರಗಿಯಲ್ಲಿ ವಕ್ಫ್ ಅದಾಲತ್ ಕಲಬುರಗಿ; ರಾಜ್ಯದಲ್ಲಿರುವ ವಕ್ಫ್ ಆಸ್ತಿ ಸಂರಕ್ಷಣೆಗೆ ಮಂಡಳಿ ಮುಂದಾಗಿದ್ದು, ಪ್ರತಿ ಆಸ್ತಿ ಸುತ್ತ ರಾಜ್ಯ ವಕ್ಫ್…

12 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420