ಬಿಸಿ ಬಿಸಿ ಸುದ್ದಿ

ಆದೀಶ್ವರ ಕಂಪನಿಯ ಕಾರ್ಯ ಉತ್ತಮವಾದದ್ದು: ದರ್ಶನಾಪುರ

ಶಹಾಪುರ : ಗ್ರಾಹಕರ ಬೇಡಿಕೆಗೆ ತಕ್ಕಂತೆ ಉತ್ತಮ ಗುಣಮಟ್ಟದ ಗೃಹಬಳಕೆ ವಸ್ತುಗಳನ್ನು ತಯಾರಿಸಿ ಮಾರುಕಟ್ಟೆಗೆ ಒದಗಿಸುವ ಏಕೈಕ ಅದೀಶ್ವರ ಕಂಪನಿ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ನಗರದ ಆದೀಶ್ವರ ಎಲೆಕ್ಟ್ರೋ ವರ್ಡ್ನಲ್ಲಿ ಆಯೋಜಿಸಿದ ಗೃಹೋಪಯೋಗಿ ಉಪಕರಣ “ಹೈಯರ್” ನ್ಯೂ ಮಾಡೆಲ್ಸ್ ವಾಷಿಂಗ್ ಮಷೀನ್ ಗ್ರಾಂಡ್ ಲಾಂಚಿಂಗ್ ಮಾಡಿ ಮಾತನಾಡಿದರು.ಉತ್ತಮ ಗುಣಮಟ್ಟದ ಈ ವಾಷಿಂಗ್ ಮಷೀನ್ ಬಳಕೆ ಗ್ರಾಹಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು

ಇನ್ನೋರ್ವ ಮುಖ್ಯ ಅತಿಥಿಗಳಾದ ಡಾ. ಶರಣು ಬಿ.ಗದ್ದುಗೆ ಮಾತನಾಡಿ ಶಹಾಪುರ ನಗರ ವಹಿವಾಟು ಮತ್ತು ವ್ಯಾಪಾರಕ್ಕಾಗಿ ಪ್ರಖ್ಯಾತಿಯನ್ನು ಪಡೆದಿದೆ,ಆದ್ದರಿಂದ ಹೈಯರ್ ವಾಷಿಂಗ್ ಮಷೀನ್ ಹೊಸ ಮಾದರಿಯ ಯಂತ್ರವನ್ನು ಶಹಾಪುರ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಡುಗಡೆಗೊಳಿಸುತ್ತಿರುವುದು ನಮ್ಮ ನಿಮ್ಮೆಲ್ಲರಿಗೂ ಸಂತೋಷದ ವಿಷಯ ಎಂದು ತಿಳಿಸಿದರು.

ಆದೀಶ್ವರ ಕಂಪನಿಯ ಮುಖ್ಯಸ್ಥರಾದ ಪ್ರಶಾಂತ್ ಲಕಾಡೆ ಮಾತನಾಡಿ ಹೊಸ ತಂತ್ರಜ್ಞಾನ ಬಳಕೆ ಮಾಡಿ ಹೈಯರ್ ವಾಷಿಂಗ್ ಮಷೀನ್ ಹಾಗೂ ಕ್ಯೂ ಎಲ್ ಈ ಡಿ ಹೊಸ ತಂತ್ರಜ್ಞಾನದ ಟಿವಿಯ ಪ್ರಸ್ತುತ ಆಕಾರ ಮತ್ತು ವಿನ್ಯಾಸವನ್ನು ಅದ್ಭುತವಾಗಿದ್ದು,10 ಕೆಜಿ ಬಟ್ಟೆಗಳು ತೊಳೆದು ಸಂಪೂರ್ಣವಾಗಿ ಡ್ರೈ ಮಾಡುತ್ತದೆ, ಅಲ್ಲದೆ ವಿಥೌಟ್ ರಿಮೋಟ್ ನಿಂದ ಟಿವಿ ಬಳಕೆ ಮಾಡಬಹುದುದೆಂದು ಇವುಗಳ ಕಾರ್ಯ ಕ್ಷಮತೆ ಗ್ರಾಹಕರಿಗೆ ಬಹಳ ಇಷ್ಟವಾಗಿರುವುದರಿಂದ ಮಾರುಕಟ್ಟೆಯಲ್ಲಿ ಇದರ ಬೇಡಿಕೆ ಹೆಚ್ಚಾಗಿದೆ ಎಂದು ತಿಳಿಸಿದರು.

ಚಟ್ನಳ್ಳಿಯ ಪರಮ ಪೂಜ್ಯ ಶ್ರೀ ವಿಶ್ವಾರಾದ್ಯಾ ದೇವರು ದಿವ್ಯ ಸಾನಿಧ್ಯ ವಹಿಸಿದ್ದರು, ಈ ಸಮಾರಂಭದ ವೇದಿಕೆಯ ಮೇಲೆ,ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿನ್ನೂರ,ನಗರಸಭೆ ಸದಸ್ಯ ಶಿವಕುಮಾರ್ ತಳವಾರ, ಶಿಕ್ಷಕ ಮೇಘನಾಥ್ ಬೆಳ್ಳಿ,ಹಾಗೂ ಆದೀಶ್ವರ ಕಂಪನಿಯ ಅಧಿಕಾರಿಗಳಾದ ಮನೋಜ್ ಎನ್, ವಿಶ್ವನಾಥ ಕುಲಕರ್ಣಿ,ಲಕ್ಷ್ಮಿಕಾಂತ ಕೆ, ರಾಚಯ್ಯ ಹಿರೇಮಠ, ಬಸನಗೌಡ, ಶರತ್ ಪರ್ವತ್ ರೆಡ್ಡಿ,ಸೇರಿದಂತೆ ಇತರರು ಉಪಸಿತರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

8 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

10 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

17 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

17 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

18 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago