ಟಿಎಪಿಸಿಎಂ ಅಧ್ಯಕ್ಷರಾಗಿ ಪಾಟೀಲ್ ಅವಿರೋಧ ಆಯ್ಕೆ

ಕಲಬುರಗಿ: ಸಹಕಾರಿ ಕ್ಷೇತ್ರದ ಇಲ್ಲಿನ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ (ಟಿಎಪಿಸಿಎಂ) ಸಂಘದ ಅಧ್ಯಕ್ಷರಾಗಿ ಶರಣಬಸಪ್ಪ ಜಗದೀಶ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಸಂಗಮೇಶ್ವರ ಕರಬಸಪ್ಪಚೋರಗಸ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೋಮವಾರ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧವಾಗಿ ಆಯ್ಕೆ ನಡೆಯಿತು.

ನಿರ್ದೇಶಕರುಗಳಾದ ಅಯ್ಯುಬ ಪಟೇಲ್ ತಾವರಗೇರಾ, ಶರಣಕುಮಾರ ಅಂಬಲಗಿ, ಶಿವಪುತ್ರಪ್ಪ ಹತಗುಂದಿ, ಅಮರ ಪಾಟೀಲ್, ದಾಸಮಯ್ಯ ವಡ್ಡನಕೇರಿ, ಝಾಕೀರ ಹುಸೇನ್, ಮಹಾದೇವಿ ಸಿಂಗೆ, ಸರಸ್ವತಿ ಗುರಾಗೋಳ, ಮನೋಹರ ತುಳಜಪ್ಪ, ವಿಠಲ ಚಂದ್ರಶಾ, ರವೀಂದ್ರಕುಮಾರ ಕಲ್ಲೂರ ಪಾಲ್ಗೊಂಡಿದ್ದರು.

ಕಳೆದ ಸೆ.1 ರಂದು ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆದಿತ್ತು. ಈಗ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯನ್ನು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಅಧಿಕಾರಿಗಳಾದ ಪ್ರಮೋದ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.

ವಿಜಯೋತ್ಸವದ: ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ನಂತರ ವಿಜಯೋತ್ಸವ ನಡೆಯಿತು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶರಣಬಸಪ್ಪ ಪಾಟೀಲ್ ಅಷ್ಠಗಿ, ಪ್ರಮುಖರಾದ ಹರ್ಷವರ್ಧನ ಗುಗಳೆ, ಶಿವಕುಮಾರ ಪಾಟೀಲ್ ಜಮಗಾ, ಶಿವಕುಮಾರ ಉಪ್ಪಿನ, ಶ್ರೀಮಂತರಾವ ದಳಪತಿ ಮುಂತಾದವರು ವಿಜಯೋತ್ಸವದಲ್ಲಿ ಹಾಜರಿದ್ದರು.

emedialine

Recent Posts

ಕಲ್ಯಾಣ ಕರ್ನಾಟಕ ಉತ್ಸವ 18 ರಂದು ಆಚರಿಸಲು ಆಗ್ರಹ

ಕಲಬುರಗಿ:"ಕಲ್ಯಾಣ ಕರ್ನಾಟಕ ಉತ್ಸವ" ವನ್ನು ಸೆಪ್ಟೆಂಬರ್ "18" ರಂದು ಆಚರಿಸಲು ಕರ್ನಾಟಕ ಯುವಜನ ಒಕ್ಕೂಟ(ರಿ) ಮತ್ತು "ಕಲ್ಯಾಣ ಕರ್ನಾಟಕ ಪ್ರತ್ಯೇಕ…

10 hours ago

ಸಚಿವ ಸಂಪುಟ ಸಭೆಯ ಮೂಲಕ ಚಿಂಚೋಳಿ ಸಕ್ಕರೆ ಕಾರ್ಖಾನೆ ಪುನಃ ಪ್ರಾರಂಭಕ್ಕೆ ಮನವಿ

ಕಲಬುರಗಿ: ಸಚಿವ ಸಂಪುಟ ಸಭೆಯ ಮೂಲಕ ಚಿಂಚೋಳಿ ಸಕ್ಕರೆ ಕಾರ್ಖಾನೆ ಪುನಃ ಪ್ರಾರಂಭ ಮಾಡುವ ತೀರ್ಮಾನ ಕೈಗೊಳಬೇಕೆಂದು ಕಾಳಗಿ ತಾಲೂಕ…

10 hours ago

ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಣಯ ಕೈಗೊಳ್ಳುವ ನಿರೀಕ್ಷೆ ಇದೆ: ಭೀಮನಗೌಡ ಪರಗೊಂಡ

ಕಲಬುರಗಿ: ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯಂದು ಹತ್ತು ವರ್ಷಗಳ ನಂತರ ಬಹುನಿರೀಕ್ಷಿಯ ಸಚಿವ ಸಂಪುಟ ಕಲಬುರಗಿಯಲ್ಲಿ ನಡೆಯುತ್ತಿರುವುದು ಈ ಭಾಗದ…

11 hours ago

10 ವರ್ಷಗಳ ನಂತರ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ: ಡಾ. ಅಜಯಸಿಂಗ್

ಕಲಬುರಗಿ, ಕಳೆದ ಹತ್ತು ವರ್ಷಗಳ ನಂತರ ಕಲಬುರಗಿಯಲ್ಲಿ ಪ್ರಥಮ ಬಾರಿಗೆ ಇಂದು ಸೆಪ್ಟಂಬರ್ 17ರಂದು ರಾಜ್ಯ ಸಚಿವ ಸಂಪುಟ ಸಭೆ…

12 hours ago

ಕೆಐಡಿಸಿಸಿ ಕಪ್ ಕ್ರಿಕೆಟ್ ಟೋರ್ನಮೆಂಟ್ ಸೀಸನ್ 3 ಲಾಂಛನ ಬಿಡುಗಡೆಗೊಳಿಸಿದ ಸಿಎಂ ಸಿದ್ದರಾಮಯ್ಯ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಸುಪ್ರಸಿದ್ದ ಟಿವಿ ಛಾನೆಲ್ ಎಸ್ ಎಸ್ ವಿ ಟಿವಿ ಮತ್ತು ಜೈ ಭೀಮ್ ಟಿವಿ…

13 hours ago

ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾರ್ವಜನಿಕರು ಸಹಕರಿಸಿ: ಶಾಸಕ ಡಾ.ಅಜಯ್ ಸಿಂಗ್

ಕಲಬುರಗಿ: ಪ್ಲಾಸ್ಟಿಕ್ ನಿಷೇಧಕ್ಕೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಹಕರಿಸಿದಾಗ ಮಾತ್ರ ನಗರವನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾಧ್ಯವಿದೆ ಎಂದು…

14 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420