ಕಲಬುರಗಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದಬ್ಬಾಳಿಕೆ ಮತ್ತು ದಾಳಿ ಆಗ್ತಿವೆ. ಬಾಂಗ್ಲಾ ಅಷ್ಟೇ ಅಲ್ಲ. ಮಣಿಪುರ, ಕಾಶ್ಮೀರ ಅಷ್ಟೇ ಅಲ್ಲ.. ವಿಶ್ವದ ಎಲ್ಲೆ ಹಿಂದೂಗಳ ಮೇಲೆ ದಾಳಿಯಾದರೆ ನಾವು ಹೋರಾಟ ಮಾಡುತ್ತೇವೆಯೆಂದು ಶ್ರೀರಾಮಸೇನೆ ಮುಖಂಡ ಹಾಗೂ ರಾಷ್ಟ್ರೀಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಇನ್ನೂ ಸೇಡಂಗೆ ಯಾಕೆ ಹೋಗಿದ್ದು. ಮಣಿಪುರಕ್ಕೆ ಹೋಗಿ ಪ್ರತಿಭಟನೆ ಮಾಡಿಯೆಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಶ್ರೀ ಸಿದ್ದಲಿಂಗ ಸ್ವಾಮೀಜಿ, ಮಣಿಪುರಕ್ಕೆ ಹೋಗಿ ಪ್ರತಿಭಟನೆ ಮಾಡುವರು ಮಾಡ್ತಾರೆ. ಅವರಿಗೆ ವಿಮಾನದ ಟಿಕೆಟ್ ತೆಗೆಸುತ್ತಾರೆ. ಆದರೆ ನಮಗೆ ಅಲ್ಲಿ ಹೋಗಿ ಬರೋ ಶಕ್ತಿ ಇಲ್ಲ.. ಹೀಗಾಗಿ ನಾವು ಇರೋ ಸ್ಥಳದಲ್ಲೆ ಪ್ರತಿಭಟನೆ ಮಾಡ್ತಿವಿ ಅಂತಾ ಹೇಳಿದರು.
ಇದೆ ವೇಳೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರು ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಜಿಲ್ಲೆಯಾದ್ಯಂತ ಭ್ರಷ್ಟಾಚಾರ ಪ್ರಕರಣಗಳು ಅಧಿಕಾರಿಗಳು ಹಗಲು ದರೋಡೆ ನಡೆಸಿದ್ದಾರೆ ಎಂದು ಕಿಡಿಕಾರಿದ ಅವರು, ಜೇವರ್ಗಿ ತಾಲೂಕಿನ ಅನ್ನಭಾಗ್ಯ ಯೋಜನೆಯ ಸಹಾಯಕ ನಿರ್ದೇಶಕಿ ಮಹಾದೇವಿ ಶಿವಶಿಂಪಿ ಅವರು, ಆಹಾರ ಅಂಚಿಕೆ ಮಾಡುವುದರಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಮಾಡಿದ್ದು ಲಕ್ಷಾಂತರ ರೂಪಾಯಿ ಲಪಟಾಯಿಸಿದ್ದಾರೆ ಎಂದು ಆರೋಪಿಸಿದರು.
ಮಾತೆತ್ತಿದರೆ ಕಾನೂನಿನ ಪಾಠ ಹೇಳುವ ಪ್ರೀಯಾಂಕ್ ಖರ್ಗೆ ಅವರು, ಬೂಲ್ಡೋಜರ್ ಬಾಬಾ ಆಗಲು ಹೋರಟಿದ್ದಾರ. ತಮ್ಮ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಮನೆಯೇ ಕಾನೂನು ಬಾಹಿರವಾಗಿದೆ. ಅವರದೇ ಪೀಪಲ್ಸ್ ಎಜ್ಯೂಕೇಷನ್ ಸೋಸೈಟಿ ಕಟ್ಟಡವೇ ಕಾನೂನು ಬಾಹಿರವಾಗಿದೆ. ಅದನ್ನು ಡೇಮೋಲಿಸ್ ಯಾವಾಗ ಮಾಡ್ತಿರಾ ಎಂದು ಪ್ರಶ್ನಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…