ಶಹಾಬಾದ: ನಗರದ ಡಾ. ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ 78 ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಆಯೋಜಿಸಲಾದ ಬೃಹತ್ ರಕ್ತದಾನ ಶಿಬಿರದಲ್ಲಿ ಸುಮಾರು 151 ಜನರು ರಕ್ತದಾನ ಮಾಡುವ ಮೂಲಕ ಶಹಾಬಾದನ ನಗರದಲ್ಲಿ ದಾಖಲೆ ನಿರ್ಮಿಸಿದ್ದಾರೆ. ವಿಜಯಕುಮಾರ ಹಳ್ಳಿ ನೇತೃತ್ವದಲ್ಲಿ ನಗರದ ಸರಕಾರಿ ಬಾಲಕರ ಪ್ರೌಢಶಾಲೆಯ ಆವರಣದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಈ ದಾಖಲೆ ನಿರ್ಮಿಸಲಾಯಿತು.
ನಗರದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಗುರುವಾರದಂದು ಬೆಳಿಗ್ಗೆಯಿಂದ ಆರಂಭವಾದ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ತಾಲೂಕಿನ ವಿವಿಧ ಗ್ರಾಮಗಳ ಯುವಕರು ಉತ್ಸಾಹದಿಂದ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕಾ ತಹಸೀಲ್ದಾರ ಜಗದೀಶ ಚೌರ್,ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಸಾಮಾಜಿಕ ಸೇವೆಯನ್ನು ಮುಂದುವರೆಸಿಕೊಂಡು ಹೋಗಬೇಕು.ಇಂತಹ ಕಾರ್ಯಗಳು ನಿರಂತರವಾಗಿ ನಡೆಯಬೇಕೆಂದು ನಮ್ಮೆಲ್ಲರ ಆಶಯ ಎಂದರು.ಅಲ್ಲದೇ 200 ಗಿಡಗಳನ್ನು ಹಚ್ಚುವ ಸಂಕಲ್ಪ ತೊಟ್ಟಿರುವುದಲ್ಲದೇ ಈಗಾಗಲೇ ಚಾಲನೆ ನೀಡಿರುವುದು ಅತ್ಯಂತ ಖುಷಿ ನೀಡಿದೆ.ನಿಮಗೆಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ನಗರಸಭೆಯ ಪೌರಾಯುಕ್ತ ಡಾ. ಕೆ.ಗುರಲಿಂಗಪ್ಪ ಮಾತನಾಡಿ,ಉತ್ತಮ ಆರೋಗ್ಯಕ್ಕೆ ರಕ್ತದಾನ ಅತ್ಯಂತ ಅವಶ್ಯಕ.ಆದ್ದರಿಂದ ಈ ನಿಟ್ಟಿನಲ್ಲಿ ಅರ್ಹರಾದವರೆಲ್ಲರೂ ಕಡ್ಡಾಯವಾಗಿ ರಕ್ತದಾನ ಮಾಡಬೇಕು.ರಕ್ತದಾನ ಮಾಡುವುದರಿಂದ ದೇಹದ ರಕ್ತ ಶುದ್ಧಿಕರಣವಾಗುತ್ತದೆ. ರಕ್ತದಾನದಿಂದ ವ್ಯಕ್ತಿ ನಿಶಕ್ತನಾಗುತ್ತಾನೆ ಎಂಬುದು ತಪ್ಪು ಕಲ್ಪನೆ.ರಸ್ತೆ ಅಪಘಾತ ಇತ್ಯಾದಿ ಸಂದರ್ಭಗಳಲ್ಲಿ ಅದೇಷ್ಟೋ ವ್ಯಕ್ತಿಗಳು ರಕ್ತ ಸಿಗದೇ ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ.ಅಂಥ ಸಂದರ್ಭದಲ್ಲಿ ನಾವು ನೀಡಿದ ರಕ್ತ ಒಂದು ಜೀವ ಉಳಿಸುತ್ತದೆ ಎಂದರೇ ಅದಕ್ಕಿಂತ ದೊಡ್ಡ ಸೇವೆ ಮತ್ತೊಂದಿಲ್ಲ.ಈ ನಿಟ್ಟಿನಲ್ಲಿ ತಪ್ಪು ಕಲ್ಪನೆ ತೊರೆದು ನಮ್ಮ ಆರೋಗ್ಯದ ಜತೆಗೆ ಇನ್ನೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕ ಮಾನವೀಯತೆ ಮೆರೆಯಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕಲಬುರಗಿ ಜಿಮ್ಸ್ ಆಸ್ಪತ್ರೆಯ ರಕ್ತದಾನ ಕೇಂದ್ರದ ವೈದ್ಯರು ಹಾಗೂ ಅವರ ತಂಡ ಆಗಮಿಸಿ ಸುಮಾರು 151 ಜನರ ರಕ್ತದಾನ ಸಂಗ್ರಹಣೆ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ರಘುವೀರಸಿಂಗ ಠಾಕೂರ, ಕಿರಣಕುಮಾರ ಚವ್ಹಾಣ, ಪಿ.ಎಸ್.ಮೇತ್ರೆ, ಮಹ್ಮದ್ ಬಾಕರ್, ಸಾಹೇಬಗೌಡ ಬೋಗುಂಡಿ.ಡಾ.ಅಹ್ಮದ್ ಪಟೇಲ್, ಶರಣು ಪಗಲಾಪೂರ,ಅಮೀತ ಹಳ್ಳಿ, ರಾಹುಲ್ ಸಜ್ಜನ್,ಶಮಸ್ ಮರ್ಚಂಟ್,ಮಲ್ಲಿಕಾರ್ಜುನ ಕಟ್ಟಮನಿ ಸೇರಿದಂತೆ ನೂರಾರು ಯುವಕರು ಇದ್ದರು.
ತಾಲೂಕಿನ ಡಾ. ಬಿ.ಆರ್.ಅಂಬೇಡ್ಕರ್ ಯುವಕ ಸಂಘದಿಂದ ಬೃಹತ್ ರಕ್ತದಾನ ಶಿಬಿರ ಆಯೋಜಿಸಿ ರಕ್ತದಾನ ಸಂಗ್ರಹಿಸುವ ಕಾರ್ಯ ಶ್ಲಾಘನೀಯ.ಇಂತಹ ಸಮಾಜಮುಖಿ ಕೆಲಸಕ್ಕೆ ಮುಂದಾದ ವಿಜಯಕುಮಾರ ಹಳ್ಳಿ ಹಾಗೂ ಅವರ ಗೆಳೆಯರ ಬಳಗಕ್ಕೆ ಅಭಿನಂದನೆ ಸಲ್ಲಿಸುವುದಾಗಿದೆ.- ಡಾ.ಜಗದೀಶ.ಎಮ್.ಕಟ್ಟಿ ಆರೋಗ್ಯ ಅಧಿಕಾರಿ ಜಿಮ್ಸ್ ಆಸ್ಪತ್ರೆ ಕಲಬುರಗಿ.
ಮೊದಲನೇ ಬಾರಿ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು,ನಿರೀಕ್ಷೆಗೂ ಮೀರಿ ಜನರು ರಕ್ತದಾನ ಮಾಡಿದ್ದಾರೆ.ಇದರಿಂದ ಅತ್ಯಂತ ಸಂತೋಷವಾಗಿದೆ.ಅಲ್ಲದೇ ಈ ಶಿಬಿರಕ್ಕೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ, ಮಾರ್ಗದರ್ಶನ ಮಾಡಿದ ಹಿತೈಷಿಗಳಿಗೆ ಧನ್ಯವಾದ ಅರ್ಪಿಸುವೆ.ಅಲ್ಲದೇ ಈ ಶಿಬಿರ ಇನ್ನೂ ಸಾಮಾಜಿಕ ಕಾರ್ಯ ಮಾಡಲು ಪ್ರೇರಣಾದಾಯಕವಾಗಿದೆ.- ವಿಜಯಕುಮಾರ ಹಳ್ಳಿ ಶಿಬಿರದ ಆಯೋಜಕರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…