ಮಹನೀಯರ ತ್ಯಾಗ, ಬಲಿದಾನದ ಫಲವಾಗಿ ಸ್ವಾತಂತ್ರ್ಯ ಲಭಿಸಿದೆ

ಶಹಾಬಾದ:ಈ ದೇಶಕ್ಕೆ ಮಹಾತ್ಮಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸತ್ಯ, ಅಹಿಂಸೆ, ಪ್ರಾಮಾಣಿಕತೆಯ ಹೋರಾಟಗಳಿಂದ ಮತ್ತು ಹಲವಾರು ಮಹನೀಯರ ತ್ಯಾಗ, ಬಲಿದಾನದ ಫಲವಾಗಿ ಸ್ವಾತಂತ್ರ್ಯ ಲಭಿಸಿದೆ ಎಂದು ತಹಸೀಲ್ದಾರ ಜಗದೀಶ ಚೌರ್ ಹೇಳಿದರು.

ಅವರು ಗುರುವಾರ ತಾಲೂಕಾಢಳಿತ ವತಿಯಿಂದ ನಗರದ ಸರಕಾರಿ ಬಾಲಕರ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಲಾದ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನೆರೆವೇರಿಸಿ ಮಾತನಾಡಿದರು.

ಈ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮಗಾಂಧೀಜಿಯವರ ನೇತೃತ್ವದಲ್ಲಿ ಅನೇಕ ಮಹಾನ ಹೋರಾಟಗಾರರ ಹೋರಾಟದ ಫಲವಾಗಿ 1947ರ ಆಗಸ್ಟ್ 15ರಂದು ನಮ್ಮೆಲ್ಲರಿಗೂ ಸ್ವಾತಂತ್ರ್ಯ ದೊರೆಯಿತು.

ಈ ಸ್ವಾತಂತ್ರ್ಯದ ಹಿಂದೆ ಲಕ್ಷಾಂತರ ಜನರ ಕಣ್ಣೀರಿದೆ. ನಮ್ಮ ಪೂರ್ವಜರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರುಗಳ ಆದ್ಯ ಕರ್ತವ್ಯವಾಗಿದೆ. ಈ ಸ್ವಾತಂತ್ರ್ಯದ ಮೂಲ ಉದ್ದೇಶಕ್ಕೆ ಧಕ್ಕೆಯಾಗದಂತೆ ನಾವುಗಳೆಲ್ಲಾ ದೇಶದ ಭದ್ರತೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಬೇಕು. ಸಾಮಾಜಿಕ ನ್ಯಾಯ, ಸಮಾನತೆ, ಕೋಮು ಸೌಹಾರ್ದತೆ, ಸರ್ವರಿಗೂ ಶಿಕ್ಷಣ, ವಿವಿಧತೆಯಲ್ಲಿ ಏಕತೆ, ಸಹಭಾಳ್ವೆ, ಸರ್ವರಿಗೂ ಸಮಪಾಲು, ಮುಂತಾದ ಆದರ್ಶ ಮೌಲ್ಯಗಳನ್ನು ಸಾಕಾರಗೊಳಿಸಲು ರೂಪವಾಗಿರುವ ಮತ್ತು ಸ್ವಾತಂತ್ರ್ಯದ ಆಶಯಗಳನ್ನು ಅನುμÁ್ಠನಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ. ದೇಶದ ಸಮಗ್ರತೆಗೆ ಭಂಗ ತರುವಂಥ ದುಷ್ಟಶಕ್ತಿಗಳ ವಿರುದ್ಧ ಸಂಘಟಿತ ಹೋರಾಟಮಾಡಬೇಕಿದೆ ಎಂದರು.

ಡಿವಾಯ್‍ಎಸ್‍ಪಿ ಶಂಕರಗೌಡ ಪಾಟೀಲ ಮಾತನಾಡಿ, ಸ್ವಾತ್ರ್ಯಂತ್ರಕೋಸ್ಕರ ತ್ಯಾಗ ಬಲಿದಾನ ಮಾಡಿದ ಮಹಾತ್ಮರನ್ನು ನೆನೆಯಬೇಕಿದೆ ಅಲ್ಲದೆ ಅವರ ಮಾರ್ಗದರ್ಶನದಲ್ಲಿ ನಮ್ಮ ಯುವ ಜನತೆ ಸಾಗಬೇಕಿದೆ, ಇಂದಿನ ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮವನ್ನು ಮಕ್ಕಳ ಪೆÇೀಷಕರು ಹಾಗೂ ಶಿಕ್ಷಕರು ಬೆಳೆಸಬೇಕಾಗಿದೆ.

ಈ ದೇಶದಲ್ಲಿ ಮಹಾತ್ಮಗಾಂಧೀಜಿಯವರ ಗ್ರಾಮಸ್ವರಾಜ್ಯದ ಆದರ್ಶದ ಕನಸುಗಳಾದ ಸಾಮಾಜಿಕನ್ಯಾಯ, ಸಮಾನತೆ, ಕೋಮುಸೌಹಾರ್ದತೆ, ಸರ್ವರಿಗೂ ಶಿಕ್ಷಣ, ಸಹಜೀವನ, ಸಹಬಾಳ್ವೆ, ಸರ್ವರಿಗೂ ಸಮಪಾಲು ಮುಂತಾದ ಆದರ್ಶ ಮೌಲ್ಯಗಳ ಸಾಕಾರ ರೂಪವಾಗಿರುವ ಸ್ವಾತಂತ್ರ್ಯದ ಆಶಯಗಳನ್ನು ಈಡೇರಿಸಲು ನಾವೆಲ್ಲಾ ಶ್ರಮಿಸಬೇಕಾಗಿದೆ ಎಂದರು.

ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ,ಪಿಐ ನಟರಾಜ ಲಾಡೆ, ತಾಪಂ ಇಓ ಮಲ್ಲಿನಾಥ ರಾವೂರ ವೇದಿಕೆಯ ಮೇಲಿದ್ದರು.

ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ, ಡಾ.ರಶೀದ್ ಮರ್ಚಂಟ್, ಕಂದಾಯ ಅಧಿಕಾರಿ ಹಣಮಂತರಾವ ಪಾಟೀಲ,ಗ್ರಾಮ ಲೆಕ್ಕಿಗರಾದ ಶ್ರೀಮಂತ, ಶಿವಾನಂದ, ಏಮನಾಥ ರಾಠೋಡ,ಜಗಪ್ಪ ಹೊಸಮನಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.

emedialine

Recent Posts

ರಾವೂರ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಲಬುರಗಿ: ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ವಿವೇಕಾನಂದ ಪ್ರಾಥಮಿಕ ಮತ್ತು ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳು ತಾಲೂಕ…

32 mins ago

ಜೀ಼ ಕನ್ನಡದ ಸರಿಗಮಪ ಆಡಿಷನ್ ಕಲಬುರಗಿಯಲ್ಲಿ ಇದೇ ಶನಿವಾರದಂದು

  ನಿಮ್ಮ ಕನಸಿಗೆ ರೆಕ್ಕೆ ಕಟ್ಟಲು ನಿಮ್ಮೂರಿಗೂ ಬರ್ತಿದೆ ಸರಿಗಮಪ ಆಡಿಷನ್, ತನ್ನ ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು…

1 hour ago

ಅತಿವೃಷ್ಟಿ ಬೆಳೆ ಹಾನಿ ಪರಿಹಾರ ಕೊಡಿ: ಮುಖ್ಯಮಂತ್ರಿಗಳಿಗೆ ಪ್ರಾಂತ ರೈತ ಸಂಘದ ಆಗ್ರಹ

ಕಲಬುರಗಿ: ಅತಿವೃಷ್ಟಿ ಮಳೆಯಿಂದ ಹಾನಿಯಾದ ಉದ್ದು, ಹೆಸರು, ತೊಗರಿ ಬೆಳೆ ನಷ್ಟವಾಗಿದ್ದು, ಉತ್ಪಾದನೆ ಆಧಾರದಲ್ಲಿ ಪರಿಹಾರ ಕೊಡುವಂತೆ ಹಾಗೂ ಕಬ್ಬಿನ ಬಾಕಿ…

13 hours ago

ಯುವಜನ ಒಕ್ಕೂಟದಿಂದ 76 ನೇ ಕಲ್ಯಾಣ ಕರ್ನಾಟಕ ಸ್ವಾತಂತ್ರೋತ್ಸವ ಆಚರಣೆ

ಕಲಬುರಗಿ: ಸರದಾರ ವಲ್ಲಭಭಾಯಿ ಪಟೇಲ ರ ಮೂರ್ತಿಗೆ ಮಾಲಾರ್ಪಣೆ ಮತ್ತು ರಾಷ್ಟ್ರೀಯ ಗೀತೆ ವಾಚಿಸುವ ಮೂಲಕ ನೈಜ ಕ. ಕ.…

13 hours ago

ಸೆ.19 ರಂದು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

ಚಿತ್ತಾಪುರ: ಪಟ್ಟಣದ ಕ್ರೀಡಾಂಗಣದಲ್ಲಿ 2024-25 ನೇ ಸಾಲಿನ ಚಿತ್ತಾಪುರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆ.19 ರಂದು ಆಯೋಜಿಸಲಾಗಿದೆ ಎಂದು…

13 hours ago

ಕೆಎಎಸ್‌ಎಸ್‌ಐಎಗೆ ನಿಜಾಮೋದ್ದಿನ್ ಚಿಸ್ತಿ ನಾಮನಿರ್ದೇಶನ

ಚಿತ್ತಾಪುರ: ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘಕ್ಕೆ 2024-25 ನೇ ಸಾಲಿಗಾಗಿ ಆಡಳಿತ ಮಂಡಳಿಗೆ ವಿಶೇಷ ಆಹ್ವಾನಿತರಾಗಿ ಸೈಯದ್ ನಿಜಾಮೋದ್ದಿನ್…

14 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420