ಅಭಿವೃಧ್ಧಿಗಾಗಿ ಶ್ರಮಿಸಿದ ಎಲ್ಲರಿಗೂ ನನ್ನ ಸೆಲ್ಯೂಟ್: ಶಾಸಕ ಆರ್.ವಿ ನಾಯಕ

ಸುರಪುರ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರಲ್ಲಿ ನಮ್ಮ ಸುರಪುರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಸೇರಿ ಎಲ್ಲಾ ಹೋರಾಟಗಾರರಿಗೆ ಹಾಗೂ ನಮ್ಮ ಸುರಪುರ ಕ್ಷೇತ್ರದ ಅಭಿವೃಧ್ಧಿಗಾಗಿ ಶ್ರಮಿಸಿದ ನಮ್ಮ ತಂದೆಯವರಾದ ರಾಜಾ ವೆಂಕಟಪ್ಪ ನಾಯಕ,ಮಾವನವರಾದ ರಾಜಾ ಮದನಗೋಪಾಲ ನಾಯಕ ಸೇರಿ ಇಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ ಎಲ್ಲರಿಗೂ ನನ್ನ ಸೆಲ್ಯೂಟ್ ಸಲ್ಲಿಸುವುದಾಗಿ ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.

ನಗರದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿ ತಾಲೂಕ ಆಡಳಿತ ದಿಂದ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ನಾನುಕೂಡ ಕ್ಷೇತ್ರದ ಅಭಿವೃಧ್ದಿಗೆ ಶ್ರಮಿಸುವೆ,ಅಲ್ಲದೆ ಅಭಿವೃಧ್ಧಿ ಎಂದರೆ ಕೇವಲ ಬಿಲ್ಡಿಂಗ್ ಕಟ್ಟುವುದು ಮಾತ್ರವಲ್ಲ,ಸ್ವಚ್ಛ ಪರಿಸರ,ಮರಗಳ ಬೆಳೆಸುವುದು ಕೂಡ ಮುಖ್ಯವಾಗಿದೆ.ಜನರಿಗೆ ಆರೋಗ್ಯ ಮುಖ್ಯ ಅದಕ್ಕಾಗಿ ಮರಗಳನ್ನು ಬೆಳೆಸಬೇಕು.ನನ್ನ ಈ ಮನವಿಯಂತೆ ತಾವೆಲ್ಲರು ಪರಿಸರ ಬೆಳೆಸಿದರೆ ಅದರಿಂದ ನಾನು ಶಾಸಕನಾಗಿದ್ದಕ್ಕೂ ಸಾರ್ಥಕವಾಗಲಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್ ಅಂಬೇಡ್ಕರ್‍ರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ಧ್ವಜಾರೋಹಣ ನೆರವೇರಿಸಿದರು.ಅಲ್ಲದೆ ಪೊಲೀಸ್,ಗೃಹರಕ್ಷಕ ದಳ,ಎನ್.ಸಿ.ಸಿ,ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಗೌರವ ವಂದನೆ ಸ್ವೀಕರಿಸಿದರು.

ನಂತರ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಗೋಪಣ್ಣ ಯಾದವ್,ಪತ್ರಿಕಾ ರಂಗದಲ್ಲಿ ಸಾಧನೆಗೈದ ಕ್ಷೀರಲಿಂಗಯ್ಯ ಬೋನ್ಹಾಳ,ಪುರುಷೋತ್ತಮ ದೇವತ್ಕಲ್,ಸಾಮಾಜಿಕ ಭದ್ರತೆಗಾಗಿ ಸೇವೆ ನೀಡಿರುವ ಭೀಮರಾಯ ಯಾದವ್ ಮಂಗಳೂರ,ಸಮಾಜ ಸೇವೆಯಲ್ಲಿ ಅನ್ವರ ಜಮಾದಾರ ಸೇರಿದಂತೆ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ತಹಸಿಲ್ದಾರ್ ಕೆ.ವಿಜಯಕುಮಾರ ಹಾಗೂ ಪ್ರಾಸ್ತಾವಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ಭಾರತ ಸ್ವಾತಂತ್ರ್ಯ ಹೋರಾಟದ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ಬಾಳೆ ಬೆಳೆಯಲ್ಲಿ ಕೃಷಿ ಮಾಡಿದ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಪ್ರಮಾಣ ಪತ್ರ ನೀಡಿ ಸನ್ಮಾನಿಸಿದರು.ನಂತರ ನಗರದ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.ರಾಜಶೇಖರ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು,ಕ್ಷೇತ್ರ ಸಮನ್ವಯಾಧಿಕಾರಿ ಪಂಡೀತ ನಿಂಬೂರ ಸ್ವಾಗತಿಸಿದರು,ಕಲಾವಿದ ಶರಣಕುಮಾರ ಜಾಲಹಳ್ಳಿ ವಂದಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ತಾ.ಪಂ ಇಓ ಬಸವರಾಜ ಸಜ್ಜನ್,ಡಿವೈಎಸ್ಪಿ ಜಾವಿದ್ ಇನಾಂದಾರ್,ಸಮಾಜ ಕಲ್ಯಾಣಾಧಿಕಾರಿ ಶೃತಿ,ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಹ್ಮದ್ ಸಲೀಂ,ಬಿಸಿಎಂ ಅಧಿಕಾರಿ ತಿಪ್ಪಾರಡ್ಡಿ,ಟಿಹೆಚ್‍ಓ ಡಾ.ಆರ್.ವಿ.ನಾಯಕ, ಜಿ.ಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ವಜ್ಜನ್,ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಾಧಿಕಾರದ ಉಪಾಧ್ಯಕ್ಷ ರಮೇಶ ದೊರೆ ಆಲ್ದಾಳ,ನಯೋಪ್ರಾ ಅಧ್ಯಕ್ಷ ಪ್ರಕಾಶ ಗುತ್ತೇದಾರ,ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ,ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ,ಪಿಡಬ್ಲ್ಯೂಡಿ ಎಇಇ ಎಸ್.ಜಿ.ಪಾಟೀಲ,ಗ್ಯಾನಚಂದ್ ಜೈನ್,ಉಪ ಖಜಾನೆ ಅಧಿಕಾರಿ ಸಣ್ಣಕೆಪ್ಪ ಕೊಂಡಿಕಾರ್,ಪಿ.ಐ ಆನಂದ ವಾಗಮೊಡೆ,ಬಿಆರ್‍ಪಿ ಖಾದರ ಪಟೇಲ್ ಸೇರಿದಂತೆ ನಗರಸಭೆ ಸದಸ್ಯರು ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.

emedialine

Recent Posts

ಕಾಳಗಿ ತಲುಪಿದ ವಿಕಾಸ ಪಥ ಯಾತ್ರೆ

ಕಾಳಗಿ: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ವಿಕಾಸ ಪಥ ಯಾತ್ರೆಗೆ ಅದ್ದೂರಿ ಸ್ವಾಗತ ನೀಡಲಾಯಿತು. 7ನೇ ಭಾರತ ವಿಕಾಸ ಸಂಗಮದ (ಭಾರತ…

4 hours ago

ಕಲಬುರಗಿ ಕಸಾಪ ದಿಂದ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ 15 ರಂದು

ಕಲಬುರಗಿ: ಸುಭದ್ರ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಜಿಲ್ಲೆಯ ಆಯ್ದ ಶಿಕ್ಷಕರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ…

4 hours ago

ಕೆಬಿಎನ ವಿವಿಯಲ್ಲಿ ಒಂದು ದಿನದ ಕಾರ್ಯಾಗಾರ

ಕಲಬುರಗಿ: ಸ್ಥಳೀಯ ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಇಂಜಿನಿಯರಿಂಗ ನಿಕಾಯದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗ ಮತ್ತು ಕಂಪ್ಯೂಟರ್ ಸೈನ್ಸ್…

7 hours ago

ಹನಿಟ್ರ್ಯಾಪ್ ಆರೋಪಿಗಳು ಸ್ವಯಂ ಶರಣಗಾತರಾಗಿಲ್ಲ: ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ

ಕಲಬುರಗಿ: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ರಾತ್ರಿ ಆರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಆ ಆರೋಪಿಗಳು ಸ್ವಯಂ ಪ್ರೇರಿತರಾಗಿ ಶರಣಾಗತರಾಗಿಲ್ಲ.…

15 hours ago

ಚಿಂಚೋಳಿಯಲ್ಲಿ ಬೀದರ್ ಸಂಸದರಿಗೆ ಅಭಿನಂದನಾ ಸಮಾರಂಭ: ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಭರವಸೆ

ಚಿಂಚೋಳಿ: ನನ್ನ ಗೆಲುವಿಗೆ ಶ್ರಮಿಸಿದ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೆ ನಾನು ಚಿರರುಣಿಯಾಗಿರುತ್ತೇನೆ. ಅತಿ ಹೆಚ್ಚು ಮತಗಳಿಂದ ನನಗೆ ಲೋಕಸಭೆಗೆ ಕಳುಹಿಸಿದ್ದು,…

16 hours ago

ಚಿಂಚೋಳಿ ಪುರಸಭೆ ನೂತನ ಅಧ್ಯಕ್ಷರಾಗಿ ಟೈಗರ್, ಉಪಾಧ್ಯಕ್ಷರಾಗಿ ಸುಲ್ತಾನಬೇಗಂ ಆಯ್ಕೆ

ಚಿಂಚೋಳಿ: ಅವಳಿ ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆನಂದ್ ತಂದೆ ನಾಗೇಂದ್ರಪ್ಪ ಟೈಗರ್,…

16 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420