ಸುರಪುರ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರಲ್ಲಿ ನಮ್ಮ ಸುರಪುರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಸೇರಿ ಎಲ್ಲಾ ಹೋರಾಟಗಾರರಿಗೆ ಹಾಗೂ ನಮ್ಮ ಸುರಪುರ ಕ್ಷೇತ್ರದ ಅಭಿವೃಧ್ಧಿಗಾಗಿ ಶ್ರಮಿಸಿದ ನಮ್ಮ ತಂದೆಯವರಾದ ರಾಜಾ ವೆಂಕಟಪ್ಪ ನಾಯಕ,ಮಾವನವರಾದ ರಾಜಾ ಮದನಗೋಪಾಲ ನಾಯಕ ಸೇರಿ ಇಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ ಎಲ್ಲರಿಗೂ ನನ್ನ ಸೆಲ್ಯೂಟ್ ಸಲ್ಲಿಸುವುದಾಗಿ ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.
ನಗರದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿ ತಾಲೂಕ ಆಡಳಿತ ದಿಂದ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ನಾನುಕೂಡ ಕ್ಷೇತ್ರದ ಅಭಿವೃಧ್ದಿಗೆ ಶ್ರಮಿಸುವೆ,ಅಲ್ಲದೆ ಅಭಿವೃಧ್ಧಿ ಎಂದರೆ ಕೇವಲ ಬಿಲ್ಡಿಂಗ್ ಕಟ್ಟುವುದು ಮಾತ್ರವಲ್ಲ,ಸ್ವಚ್ಛ ಪರಿಸರ,ಮರಗಳ ಬೆಳೆಸುವುದು ಕೂಡ ಮುಖ್ಯವಾಗಿದೆ.ಜನರಿಗೆ ಆರೋಗ್ಯ ಮುಖ್ಯ ಅದಕ್ಕಾಗಿ ಮರಗಳನ್ನು ಬೆಳೆಸಬೇಕು.ನನ್ನ ಈ ಮನವಿಯಂತೆ ತಾವೆಲ್ಲರು ಪರಿಸರ ಬೆಳೆಸಿದರೆ ಅದರಿಂದ ನಾನು ಶಾಸಕನಾಗಿದ್ದಕ್ಕೂ ಸಾರ್ಥಕವಾಗಲಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್ ಅಂಬೇಡ್ಕರ್‍ರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ಧ್ವಜಾರೋಹಣ ನೆರವೇರಿಸಿದರು.ಅಲ್ಲದೆ ಪೊಲೀಸ್,ಗೃಹರಕ್ಷಕ ದಳ,ಎನ್.ಸಿ.ಸಿ,ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಗೌರವ ವಂದನೆ ಸ್ವೀಕರಿಸಿದರು.
ನಂತರ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಗೋಪಣ್ಣ ಯಾದವ್,ಪತ್ರಿಕಾ ರಂಗದಲ್ಲಿ ಸಾಧನೆಗೈದ ಕ್ಷೀರಲಿಂಗಯ್ಯ ಬೋನ್ಹಾಳ,ಪುರುಷೋತ್ತಮ ದೇವತ್ಕಲ್,ಸಾಮಾಜಿಕ ಭದ್ರತೆಗಾಗಿ ಸೇವೆ ನೀಡಿರುವ ಭೀಮರಾಯ ಯಾದವ್ ಮಂಗಳೂರ,ಸಮಾಜ ಸೇವೆಯಲ್ಲಿ ಅನ್ವರ ಜಮಾದಾರ ಸೇರಿದಂತೆ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ತಹಸಿಲ್ದಾರ್ ಕೆ.ವಿಜಯಕುಮಾರ ಹಾಗೂ ಪ್ರಾಸ್ತಾವಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ಭಾರತ ಸ್ವಾತಂತ್ರ್ಯ ಹೋರಾಟದ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಾಳೆ ಬೆಳೆಯಲ್ಲಿ ಕೃಷಿ ಮಾಡಿದ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಪ್ರಮಾಣ ಪತ್ರ ನೀಡಿ ಸನ್ಮಾನಿಸಿದರು.ನಂತರ ನಗರದ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.ರಾಜಶೇಖರ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು,ಕ್ಷೇತ್ರ ಸಮನ್ವಯಾಧಿಕಾರಿ ಪಂಡೀತ ನಿಂಬೂರ ಸ್ವಾಗತಿಸಿದರು,ಕಲಾವಿದ ಶರಣಕುಮಾರ ಜಾಲಹಳ್ಳಿ ವಂದಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ತಾ.ಪಂ ಇಓ ಬಸವರಾಜ ಸಜ್ಜನ್,ಡಿವೈಎಸ್ಪಿ ಜಾವಿದ್ ಇನಾಂದಾರ್,ಸಮಾಜ ಕಲ್ಯಾಣಾಧಿಕಾರಿ ಶೃತಿ,ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಹ್ಮದ್ ಸಲೀಂ,ಬಿಸಿಎಂ ಅಧಿಕಾರಿ ತಿಪ್ಪಾರಡ್ಡಿ,ಟಿಹೆಚ್‍ಓ ಡಾ.ಆರ್.ವಿ.ನಾಯಕ, ಜಿ.ಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ವಜ್ಜನ್,ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಾಧಿಕಾರದ ಉಪಾಧ್ಯಕ್ಷ ರಮೇಶ ದೊರೆ ಆಲ್ದಾಳ,ನಯೋಪ್ರಾ ಅಧ್ಯಕ್ಷ ಪ್ರಕಾಶ ಗುತ್ತೇದಾರ,ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ,ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ,ಪಿಡಬ್ಲ್ಯೂಡಿ ಎಇಇ ಎಸ್.ಜಿ.ಪಾಟೀಲ,ಗ್ಯಾನಚಂದ್ ಜೈನ್,ಉಪ ಖಜಾನೆ ಅಧಿಕಾರಿ ಸಣ್ಣಕೆಪ್ಪ ಕೊಂಡಿಕಾರ್,ಪಿ.ಐ ಆನಂದ ವಾಗಮೊಡೆ,ಬಿಆರ್‍ಪಿ ಖಾದರ ಪಟೇಲ್ ಸೇರಿದಂತೆ ನಗರಸಭೆ ಸದಸ್ಯರು ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.