ಬಿಸಿ ಬಿಸಿ ಸುದ್ದಿ

ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟ ಗೂಢಾಚಾರಿಗಳ ವಿಶೇಷ ಕಾರ್ಯಕ್ರಮ ನ್ಯೂಸ್​ಫಸ್ಟ್​ನಲ್ಲಿ

ಇವತ್ತು ನಾವು ನೀವು ಸುರಕ್ಷಿತವಾಗಿ ಇದ್ದೀವಿ ಅಂದ್ರೆ ನಮಗೋಸ್ಕರ ಮತ್ಯಾರೋ ತಮ್ಮ ಪ್ರಾಣವನ್ನ ಒತ್ತೆಯಿಟ್ಟು ಹೋರಾಡ್ತಿದ್ದಾರೆ. ಗಡಿಯಲ್ಲಿ ನಿಂತು ಸಾವಿನ ಜೊತೆ ಸರಸ ಆಡ್ತಿದ್ದಾರೆ. ಸಮವಸ್ತ್ರದಲ್ಲಿ ಹೋರಾಡ್ತಿರೋ ಯೋಧರು ಒಂದು ಕಡೆಯಾದ್ರೆ, ತಾವು ಯಾರು ಅನ್ನೋದನ್ನ ಜಗತ್ತಿಗೂ ಹೇಳದೇ ತಮ್ಮ ಕುಟುಂಬದವರಿಗೂ ಗೊತ್ತಿಲ್ಲದೇ ಹೋರಾಡ್ತಿರೋರು ಮತ್ತೊಂದು ಕಡೆ. ಹುಟ್ಟ ಊರು ಬಿಟ್ಟು ಬೇಱವುದೋ ದೇಶದಲ್ಲಿ ಗೂಡಚಾರಿಗಳಾಗಿ ಕೆಲಸ ಮಾಡ್ತಾ ದೇಶ ಸೇವೆ ಮಾಡ್ತಿದ್ದಾರೆ.

ಪ್ರತಿಕ್ಷಣವೂ ಚಾಲೆಂಜ್​ ಆಗಿರುವಂತಹ ಸನ್ನಿವೇಶದಲ್ಲೇ ಬದುಕಿದ ಸೀಕ್ರೆಟ್​ ಏಜೆಂಟ್​​ಗಳ ಕುರಿತ ವಿಶೇಷ ಸೀರೀಸ್​ ಶನಿವಾರದಿಂದ ನ್ಯೂಸ್​ಫಸ್ಟ್​​ನಲ್ಲಿ ಪ್ರಸಾರವಾಗಲಿದೆ. ಏಜೆಂಟ್​​ 001 ಹೆಸರಿನ ಈ ಕಾರ್ಯಕ್ರಮ ಪ್ರತಿ ಶನಿವಾರ ಸಂಜೆ 7 ಗಂಟೆಗೆ ಹಾಗೂ ಭಾನುವಾರ ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಇಷ್ಟವಾಗುವಂತಹ ಕಾರ್ಯಕ್ರಮ ಇದಾಗಿದೆ.

ಹಲವು ಪುಸ್ತಕಗಳು ಹಾಗೂ ದಾಖಲೆಗಳನ್ನು ಅಧ್ಯಯನ ಮಾಡಿ ನಿಖರ ಮಾಹಿತಿ ಸಂಗ್ರಹಿಸಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಅತ್ಯುತ್ತಮ ಗುಣಮಟ್ಟದಿಂದ ಕಾರ್ಯಕ್ರಮ ನಿರ್ಮಾಣ ಮಾಡಲಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಗೂ ಇಷ್ಟವಾಗುವಂತಹ ವಿಷಯಗಳನ್ನು ಇದು ಒಳಗೊಂಡಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ವಿಷಯಗಳನ್ನ ತಿಳಿಸಿಕೊಡುವ ನಿಟ್ಟಿನಲ್ಲಿ ಇದನ್ನ ರೂಪಿಸಲಾಗಿದೆ.

ಇದಕ್ಕೂ ಮೊದಲು ಚುನಾವಣಾ ಸಂದರ್ಭದಲ್ಲಿ ದಿ ಲೀಡರ್​ ಎಂಬ ವಿಶೇಷ ಕಾರ್ಯಕ್ರಮ ನ್ಯೂಸ್​ಫಸ್ಟ್​​ನಲ್ಲಿ ಪ್ರಸಾರವಾಗಿತ್ತು. ದೇಶ ಕಟ್ಟಿದ್ದ ಪ್ರಧಾನಮಂತ್ರಿಗಳು ಅವರು ಎದುರಿಸಿದ ಸವಾಲುಗಳು ಅವರು ಮಾಡಿದ ಸಾಧನೆ ಕುರಿತ ಲೀಡರ್​ ಕಾರ್ಯಕ್ರಮಕ್ಕೆ ರಾಜ್ಯದ ಜನರಿಂದ ಅಭೂತಪೂರ್ವ ಯಶಸ್ಸು ದೊರೆತಿತ್ತು.

ನ್ಯೂಸ್​ಫಸ್ಟ್​​ನ ಎಂಡಿ ಹಾಗೂ ಸಿಇಒ ಆಗಿರುವ ಎಸ್.ರವಿಕುಮಾರ್​ ​ ಅವರು ಲೀಡರ್​ ಕಾರ್ಯಕ್ರಮದ ನಿರೂಪಣೆ ಮಾಡಿದ್ದರು. ಸದ್ಯ ಏಜೆಂಟ್​ 001 ಕಾರ್ಯಕ್ರಮವನ್ನ ಸಹ ಅವರೇ ನಿರೂಪಣೆ ಮಾಡುತ್ತಿದ್ದಾರೆ. ​

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

17 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago