ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ

ಕಲಬುರಗಿ; ನಗರದ ಎಐಟಿಸಿ ಕಚೇರಿಯ ಹತ್ತಿರದ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (CPI) ನಗರ ಹಾಗೂ ತಾಲ್ಲೂಕಾ ಸಮಾವೇಶ ಜರುಗಿತು.

ಈ ಸಂದರ್ಭದಲ್ಲಿ ಪದ್ಮಾವತಿ ಮಾಲಿಪಾಟೀಲ ಮಾತನಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರವು ರೈತ ಹಾಗೂ ಕಾರ್ಮಿಕರ ವಿರುದ್ಧ ಕಾನೂನುಗಳನ್ನು ತಿದ್ದುಪಡಿ ಮಾಡಿ ಕಾರ್ಮಿಕರಿಗೆ ಮೂಲೆಗುಂಪು ಮಾಡುತ್ತಿವೆ.ಎ ಐ ಟಿ ಯು ಸಿ ಸಂಘಟನೆಯು ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿರುವದು. ಈ ಸಂಘಟನೆಯು ಕಾರ್ಮಿಕ ಪರವಾದ ಚಳುವಳಿಗಳನ್ನು ರೂಪಿಸಿ ನ್ಯಾಯ ಒದಗಿಸಿ ಕೊಟ್ಟಿರುವುದು ಹೆಮ್ಮೆಯ ವಿಷಯ. ಸ್ವತಂತ್ರ ಹೋರಾಟದಲ್ಲಿಯೂ ಸ್ವಾತಂತ್ರ್ಯ  ಪಡೆಯಲು ಬಹು ಮುಖ್ಯ ಪಾತ್ರ ವಹಿಸಿದೆ. ಇಂಥ ಐತಿಹಾಸಿಕ ಸಂಘಟನೆಯಲ್ಲಿರುವುದು  ತಮ್ಮೆಲ್ಲರ ಸೌಭಾಗ್ಯ. ಸಂಘಟನೆಯ ಸಿದ್ಧಾಂತದೊಂದಿಗೆ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ಮಾಡಿ ಸರ್ವರಿಗೂ ನ್ಯಾಯ ಒದಗಿಸಿಕೊಡಬೇಕೆಂದು ಮಾರ್ಮಿಕವಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ಎಚ್ಎಸ್ ಪತಕಿ ವಹಿಸಿದರು. ಮುಖ್ಯ ಅತಿಥಿಗಳಾಗಿ ಹೋರಾಟಗಾರರಾದ ಪ್ರಭುದೇವ ಯಳಸಂಗಿ, ಸಿದ್ದಪ್ಪ ಪಾಲ್ಕಿ, ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ, ಶಿವಲಿಂಗಮ್ಮ ಲೇಂಗಟಿಕರ, ಅನಿತಾ ಭಕರೆ, ಯಶೋಧಾ ರಾಠೋಡ, ಮೊಹಮ್ಮದ ಹುಸೇನ, ಶರಣಮ್ಮ ಪೂಜಾರಿ, ತಿಪ್ಪಣ್ಣ ಎಂಪುರೆ ಆಗಮಿಸಿದರು. ಭಾರತ ಕಮ್ಯುನಿಸ್ಟ್ ಪಕ್ಷದ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಡಾ.ಮಹೇಶಕುಮಾರ ರಾಠೋಡ, ರೈತ ಹೋರಾಟಗಾರರಾದ ಮೌಲಾ ಮುಲ್ಲಾ ಸಮಾವೇಶಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರು, ಟೇಲರಿಂಗ್ ಕಾರ್ಮಿಕರು, ಅಂಗನವಾಡಿ, ಬಿಸಿಊಟ, ಆಟೋ ಯೂನಿಯನ್, ಕೆ ಎಸ್ ಆರ್ ಟಿ ಸಿ ಕಾರ್ಮಿಕರು ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ತಾಲೂಕಾ ಹಾಗೂ ನಗರ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಿವಲಿಂಗಮ್ಮ ಲೆಂಗಟಿಕರ, ಉಪಾಧ್ಯಕ್ಷರಾಗಿ ಓಂಕಾರ, ಅನಿತಾ ಭಕರೆ, ನಾಗಮ್ಮ ಗುಡ್ಡಾ, ಕಾರ್ಯದರ್ಶಿಯಾಗಿ ತಿಪ್ಪಣ್ಣ ಎಂಪೂರೆ, ಸಹ ಕಾರ್ಯದರ್ಶಿಗಳಾಗಿ ಮೊಮ್ಮದ್ ಹುಸೆನ, ಸಾಬಮ್ಮ ಹೊನ್ನಕಿರಣಿಗಿ, ಸುಜಾತ ದೊಡ್ಮನಿ, ಖಜಾಂಚಿಯಾಗಿ ಶರಣಮ್ಮ ಪೂಜಾರಿ, ಕಾನೂನು ಸಲಹೆಗಾರರಾಗಿ ನ್ಯಾಯವಾದಿಗಳಾದ ಹಣಮಂತರಾಯ ಎಸ. ಅಟ್ಟೂರ, ಭೀಮಾಶಂಕರ ಮಾಡ್ಯಾಳ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ಸಂಘಟನೆಯ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಯಿತು.

emedialine

Recent Posts

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಗಮನ ಸೆಳೆದ ಚೇತನ ಬಿ.ಕೋಬಾಳ್ ಸಂಗೀತ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ( ಸಮಾಜ ಕಲ್ಯಾಣ ಇಲಾಖೆ…

9 hours ago

15ರಂದು ಮಾನವ ಸರಪಳಿ: ನಾಳೆ ಪೂರ್ವ ಭಾವಿ ಸಭೆ

ಶಹಾಬಾದ :ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15ರಂದು ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ತಾಲೂಕಿನ ಪ್ರೌಢಶಾಲಾ ಮುಖ್ಯ…

9 hours ago

ಸೆಪ್ಟೆಂಬರ್ 17ರಂದು ವಿಮೋಚನಾ ದಿನ ರದ್ದುಪಡಿಸಿ, ಪ್ರಜಾಸತ್ತಾತ್ಮಕ ದಿನ ಆಚರಿಸಿ: ಕೆ ನೀಲಾ

ಕಲಬುರಗಿ: ಹೈದ್ರಾಬಾದ್ ಕರ್ನಾಟಕದಲ್ಲಿ ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತಿರುವ ವಿಮೋಚನಾ ದಿನವಲ್ಲ, ಅದು ವಿಲೀನಿಕರಣದ ಅಥವಾ ಪ್ರಜಾಸತ್ತಾತ್ಮಕ ದಿನವಾಗಿದ್ದು, ವಿಮೋಚನಾ…

10 hours ago

ಸಮಿತಿಗಳ ಕಾರ್ಯ ಪರಾಮರ್ಶಿಸಿದ ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ

ಕಲಬುರಗಿ; ಕಲಬುರಗಿಯಲ್ಲಿ ಇದೇ ಸೆ.17 ರಂದು ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದ್ದರಿಂದ ಸಭೆ ಯಶಸ್ಸಿಗೆ ರಚಿಸಲಾಗಿರುವ ವಿವಿಧ ಸಮಿತಿಗಳ…

12 hours ago

SC/STಗೆ ಪಾಲಿಕೆಯಿಂದ ವಿತರಣೆಯಾಗದ ಸಂಸ್ಕೃತಿ ಸಮಾಗ್ರಿ: ಸಚಿನ ಶಿರವಾಳ ಬೇಸರ

ಕಲಬುರಗಿ: ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸಮುದಾಯದ ಫಲಾನುಭವಿಗಳಿಗೆ ವಿತರಿಸಬೇಕಾಗಿರುವ ಸಾಮಗ್ರಿಗಳಾದ ಕ್ರಿಕೆಟ್ ಸೈಟ್‍ ಗಳಾದ, ಬ್ಯಾಂಡ್ ಸೆಟ್‍ಗಳು ಮತ್ತು…

12 hours ago

ಶಬರಿಮಲೈ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ: ದಸ್ತಿಗೆ ಸನ್ಮಾನ

ಕಲಬುರಗಿ: ನಗರದ ಸುಲ್ತಾನಪುರ ಕ್ರಾಸ್ ಬಳಿ ಇರುವ ಬಂಡಕ್ ಹಾಗೂ ಬೆಣ್ಣೂರು ಸನ್ನಿಧಾನದಲ್ಲಿ ಅಯ್ಯಪ್ಪ ಸ್ವಾಮಿ ಇರುಮುಡಿ ಪೂಜೆ ಹಾಗೂ…

13 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420