ಕಲಬುರಗಿ; ನಗರದ ಎಐಟಿಸಿ ಕಚೇರಿಯ ಹತ್ತಿರದ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (CPI) ನಗರ ಹಾಗೂ ತಾಲ್ಲೂಕಾ ಸಮಾವೇಶ ಜರುಗಿತು.
ಈ ಸಂದರ್ಭದಲ್ಲಿ ಪದ್ಮಾವತಿ ಮಾಲಿಪಾಟೀಲ ಮಾತನಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರವು ರೈತ ಹಾಗೂ ಕಾರ್ಮಿಕರ ವಿರುದ್ಧ ಕಾನೂನುಗಳನ್ನು ತಿದ್ದುಪಡಿ ಮಾಡಿ ಕಾರ್ಮಿಕರಿಗೆ ಮೂಲೆಗುಂಪು ಮಾಡುತ್ತಿವೆ.ಎ ಐ ಟಿ ಯು ಸಿ ಸಂಘಟನೆಯು ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿರುವದು. ಈ ಸಂಘಟನೆಯು ಕಾರ್ಮಿಕ ಪರವಾದ ಚಳುವಳಿಗಳನ್ನು ರೂಪಿಸಿ ನ್ಯಾಯ ಒದಗಿಸಿ ಕೊಟ್ಟಿರುವುದು ಹೆಮ್ಮೆಯ ವಿಷಯ. ಸ್ವತಂತ್ರ ಹೋರಾಟದಲ್ಲಿಯೂ ಸ್ವಾತಂತ್ರ್ಯ ಪಡೆಯಲು ಬಹು ಮುಖ್ಯ ಪಾತ್ರ ವಹಿಸಿದೆ. ಇಂಥ ಐತಿಹಾಸಿಕ ಸಂಘಟನೆಯಲ್ಲಿರುವುದು ತಮ್ಮೆಲ್ಲರ ಸೌಭಾಗ್ಯ. ಸಂಘಟನೆಯ ಸಿದ್ಧಾಂತದೊಂದಿಗೆ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ಮಾಡಿ ಸರ್ವರಿಗೂ ನ್ಯಾಯ ಒದಗಿಸಿಕೊಡಬೇಕೆಂದು ಮಾರ್ಮಿಕವಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ಎಚ್ಎಸ್ ಪತಕಿ ವಹಿಸಿದರು. ಮುಖ್ಯ ಅತಿಥಿಗಳಾಗಿ ಹೋರಾಟಗಾರರಾದ ಪ್ರಭುದೇವ ಯಳಸಂಗಿ, ಸಿದ್ದಪ್ಪ ಪಾಲ್ಕಿ, ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ, ಶಿವಲಿಂಗಮ್ಮ ಲೇಂಗಟಿಕರ, ಅನಿತಾ ಭಕರೆ, ಯಶೋಧಾ ರಾಠೋಡ, ಮೊಹಮ್ಮದ ಹುಸೇನ, ಶರಣಮ್ಮ ಪೂಜಾರಿ, ತಿಪ್ಪಣ್ಣ ಎಂಪುರೆ ಆಗಮಿಸಿದರು. ಭಾರತ ಕಮ್ಯುನಿಸ್ಟ್ ಪಕ್ಷದ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಡಾ.ಮಹೇಶಕುಮಾರ ರಾಠೋಡ, ರೈತ ಹೋರಾಟಗಾರರಾದ ಮೌಲಾ ಮುಲ್ಲಾ ಸಮಾವೇಶಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರು, ಟೇಲರಿಂಗ್ ಕಾರ್ಮಿಕರು, ಅಂಗನವಾಡಿ, ಬಿಸಿಊಟ, ಆಟೋ ಯೂನಿಯನ್, ಕೆ ಎಸ್ ಆರ್ ಟಿ ಸಿ ಕಾರ್ಮಿಕರು ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ತಾಲೂಕಾ ಹಾಗೂ ನಗರ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಿವಲಿಂಗಮ್ಮ ಲೆಂಗಟಿಕರ, ಉಪಾಧ್ಯಕ್ಷರಾಗಿ ಓಂಕಾರ, ಅನಿತಾ ಭಕರೆ, ನಾಗಮ್ಮ ಗುಡ್ಡಾ, ಕಾರ್ಯದರ್ಶಿಯಾಗಿ ತಿಪ್ಪಣ್ಣ ಎಂಪೂರೆ, ಸಹ ಕಾರ್ಯದರ್ಶಿಗಳಾಗಿ ಮೊಮ್ಮದ್ ಹುಸೆನ, ಸಾಬಮ್ಮ ಹೊನ್ನಕಿರಣಿಗಿ, ಸುಜಾತ ದೊಡ್ಮನಿ, ಖಜಾಂಚಿಯಾಗಿ ಶರಣಮ್ಮ ಪೂಜಾರಿ, ಕಾನೂನು ಸಲಹೆಗಾರರಾಗಿ ನ್ಯಾಯವಾದಿಗಳಾದ ಹಣಮಂತರಾಯ ಎಸ. ಅಟ್ಟೂರ, ಭೀಮಾಶಂಕರ ಮಾಡ್ಯಾಳ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ಸಂಘಟನೆಯ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಯಿತು.