ಹೈದರಾಬಾದ್ ಕರ್ನಾಟಕ

ಎರಡನೇ ದಿನದ ಪ್ರಥಮ ದಲಿತ ಚಳವಳಿ ಸಾಹಿತ್ಯ ಸಮ್ಮೇಳನಕ್ಕೆ ತೆರೆ

ಕಲಬುರಗಿ: ಹೋರಾಟದ ಸಾಗರಕ್ಕೆ ಡಾ. ಡಿ.ಜಿ. ಸಾಗರ ಅವರ ಮಹಾ ಸಾಗರವೇ ಆಗಿದ್ದಾರೆ. ನೋವು, ಅವಮಾನ ಸಹಿಸಿ ಬಹು ಎತ್ತರಕ್ಕೆ ಬೆಳೆದ ಡಾ. ಡಿ.ಜಿ. ಸಾಗರ ಅವರು ಈ ನಾಡಿನ ಆಸ್ತಿಯಾಗಿದ್ದಾರೆ. ಅವರ ಹೋರಾಟಗಳಿಂದ ಪ್ರಭಾವಿತರಾದ ಅನೇಕರು ಫಲನುಭವಿಗಳಾಗಿದ್ದೇವೆ. ಆದರೆ ನಾವು ಹುಟ್ಟಿ ಬಂದ ಸಮುದಾಯ ವನ್ನು ನಿರ್ಲಕ್ಷಿಸಿ, ತಪ್ಪು ದಾರಿಯೆತ್ತ ಸಾಗಿದ್ದೇವೆ. ಆದರೆ ಸಾಗರ ಅವರ ವ್ಯಕ್ತಿತ್ವದ ಮಾತೃ ಹೃದಯಿಗಳಾಗಬೇಕು. ಜತೆಗೆ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಗುಲಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಡಾ. ಎಚ್.ಟಿ. ಪೋತೆ ಸಲಹೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೊದಲ ಬಾರಿಗೆ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಆಯೋಜಿಸಿದ ಎರಡನೇ ದಿನದ ಪ್ರಥಮ ದಲಿತ ಚಳವಳಿ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷರ ಬದುಕು ಮತ್ತು ಚಳವಳಿ ಕುರಿತು ಅವರು ಮಾತನಾಡಿದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಪರಿಷತ್ತು ಹೊಸ ಪ್ರಯೋಗವೆಂಬಂತೆ ಹಮ್ಮಿಕೊಂಡಿರುವ ದಲಿತ ಚಳವಳಿ ಸಾಹಿತ್ಯ ಸಮ್ಮೇಳನ ನೊಂದ ಜನರಿಗೆ ಹೊಸ ಭರವಸೆ ಮೂಡಿಸಿದಂತಾಗಿದೆ. ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸುವುದರ ಜತೆಗೆ ಕನ್ನಡಿಗರ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಪರಿಷತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಪ್ರಮುಖರಾದ ಧರ್ಮಣ್ಣ ಎಚ್ ಧನ್ನಿ, ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂದಿ, ಮಂಜುನಾಥ ಅಣ್ಣಯ್ಯಾ, ರವಿ ಮದನಕರ್, ವಿಜಯಕುಮಾರ ಸೋನಾರೆ, ಡಾ. ಮಲ್ಲಿಕಾರ್ಜುನ ಶೆಟ್ಟಿ, ಡಾ. ಬಾಬುರಾವ ಶೇರಿಕಾರ, ಧರ್ಮರಾಯ ಜವಳಿ, ನಿತೀನ್ ಕೋಸಗಿ, ಗುರುಬಸಪ್ಪ ಸಜ್ಜನಶೆಟ್ಟಿ, ಶರಣಬಸಪ್ಪ ಕೋಬಾಳ, ಸೋಮಶೇಕರ ನಂದಿಧ್ವಜ ಇತರರು ವೇದಿಕೆ ಮೇಲಿದ್ದರು.

ನಂತರ ನಡೆದ ಚಿಂತನ-ಮಂಥನ ಗೋಷ್ಠಿಯಲ್ಲಿ ಸಂವಿಧಾನ ಮತ್ತು ಸಮಕಾಲೀನ ತಲ್ಲಣಗಳು ಕುರಿತು ಮಾತನಾಡಿದ ಹಿರಿಯ ಚಿಂತಕ ಡಾ. ಐ.ಎಸ್. ವಿದ್ಯಾಸಾಗರ, ದೇಶದ ಸಂವಿಧಾನ ಶಾಶ್ವತವಾಗಿ ಉಳಿಯಬೇಕು. ಇಂದು ಪಟ್ಟಭದ್ರ ಹಿತಾಸಕ್ತಿಗಳಿಂದ ನಮ್ಮ ಸಂವಿಧಾನಕ್ಕೆ ಗಂಡಾಂತರ ಎದುರಾಗಿದೆ. ಸಂವಿಧಾನದ ಆಶಯಗಳು ತಳ ಹಂತದಿಂದ ವ್ಯಕ್ತಿಗೂ ತಲುಪಿಸಬೇಕು. ಆಗ ಮಾತ್ರ ಸಂವಿಧಾನ ಉಳಿಯಲು ಸಾಧ್ಯ. ಜಾತ್ಯತೀತ ಬದಲು ಹಿಂದುತ್ವ ಕಟ್ಟಲು ಹುನ್ನಾರ ಈ ದೇಶದಲ್ಲಿ ನಡೆಯುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆ ಡಾ. ಚಂದ್ರಕಲಾ ಬಿದರಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಡಾ. ಶರಣಪ್ಪ ಸೈದಾಪೂರ ಆಶಯ ನುಡಿಗಳನ್ನಾಡಿದರು. ಡಾ. ಹುವಣ್ಣಾ ಸಕ್ಪಾಲ್, ವೈ.ಸಿ.ಮಯೂರ್ ವಿಜಯಪುರ, ಮಲ್ಲಯ್ಯ ಗುತ್ತೇದಾರ, ಚಮದ್ರಕಾಂತ ತಳವಾರ, ಅಮರನಾಥ ತಡಕಲ್, ಮಲ್ಲಿಕಾರ್ಜುನ ಕಂದಗೂಳೆ, ಮಾರುತಿ ¨ದ್ಧೆ, ಸಿದ್ದು ರಾಯಣ್ಣಯವರ, ರಮೇಶ ಬಡಿಗೇರ, ಸುರೇಶ ಲೇಂಗಟಿ, ಸುರೇಶ ದೇಶಪಾಂಡೆ, ಎಂ.ಎನ್ ಸುಗಂಧಿ, ಗಣೇಶ ಚಿನ್ನಾಕಾರ ವೇದಿಕೆ ಮೇಲಿದ್ದರು.

ನಂತರ ಸಮಾನತೆಯ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಎಸ್ ಪಿ ಸುಳ್ಳದ್, ಹಸಿವು, ಬಡತನ ಮತ್ತು ನೋವಿನಿಂದ ಬರೆದ ಕಾವ್ಯಗಳು ಗಟ್ಟಿಯಾಗಿ ಪರಿವರ್ತನೆ ತರಬಲ್ಲವು. ಕವಿಯಾಗಬಯಸುವ ವ್ಯಕ್ತಿ ಓದುವ ಮೂಲಕ ಮತ್ತು ಅನುಭವಿಸಿದ ವಿಚಾರಗಳನ್ನು ಕಾವ್ಯದ ವಸ್ತುವನ್ನಾಗಿಸಬೇಕೆಂದು ಸಲಹೆ ನೀಡಿದರು.
ಡಾ. ಜಗನ್ನಾಥ ಎಲ್ ತರನಳ್ಳಿ ಅಶಯ ನುಡಿಗಳನ್ನಾಡಿದರು.

ಎಸ್ ಕೆ ಬಿರಾದಾರ, ಪ್ರಭು ಫುಲಾರಿ, ರಾಜೇಂದ್ರ ಮಾಡಬೂಳ, ವೀರೇಂದ್ರಕುಮಾರ ಕೊಲ್ಲೂರ ವೇದಿಕೆ ಮೇಲಿದ್ದರು. ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಕವಿಗಳು ತಮ್ಮ ಸ್ವ ರಚಿತ ಕವನ ವಾಚಿಸಿದರು. ನಂತರ ಕಲಾವಿದರಿಂದ ಕ್ರಾಂತಿ ಗೀತೆಗಳನ್ನು ಹಾಡಿದರು.

ಸಮಾರೋಪ ನುಡಿಗಳನ್ನಾಡಿದ ಹಿರಿಯ ಸಾಹಿತಿ ಡಾ. ಹನುಮಂತರಾವ ಬಿ ದೊಡ್ಡಮನಿ, ಮನುಷ್ಯ – ಮನುಷ್ಯರ ನಡುವೆ ಭ್ರಾತೃತ್ವ ಬೆಳೆಸುವ ದಲಿತ ಚಳವಳಿಗಳಿಗೆ ಸಾಹಿತ್ಯ ಪ್ರೇರಣೆ ಯಾಗಿದೆ. ಇಂಥ ದಲಿತ ಚಳವಳಿ ಸಮ್ಮೇಳನಗಳು ನಮಗೆಲ್ಲ ದಿಕ್ಚೂಚಿಯಾಗಬೇಕು ಮತ್ತು ಮಾರ್ಗದರ್ಶನ ನೀಡಬೇಕು. ಡಾ. ಡಿ.ಜಿ. ಸಾಗರ ಅವರ ಆಯ್ಕೆ ಬಗ್ಗೆ ಮೆಚ್ಚುಗೆ ವ್ಯಕ್ತಿಪಡಿಸಿದರು.

ಸಾರಂಗಮಠದ ಜಗದ್ಗುರು ಶ್ರೀ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಜೀ, ಬಂತೆಜೀ ವರಜ್ಯೋತಿ ಧೇರೋ, ಪೂಜ್ಯ ಸಂಗಾನಂದ ಬಂತೆಜೀ ಸಾನಿಧ್ಯ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಡಾ. ಡಿ.ಜಿ. ಸಾಗರ ಅಧ್ಯಕ್ಷತೆ ವಹಿಸಿದ್ದರು. ಡಾ. ಅಪ್ಪಗೆರೆ ಸೋಮಶೇಖರ, ಬಾಬುರಾವ ಪಾಟೀಲ, ಸಂದೀಪ ಭರಣಿ, ಸೋಮಶೇಖರಯ್ಯ ಹೊಸಮಠ, ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ್ ಛಪ್ಪರಬಂದಿ, ಕಲ್ಯಾಣಕುಮಾರ ಶೀಲವಂತ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ನಿರ್ಣಯಗಳು: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಸಾಂಸ್ಕøತಿಕ ಚಟುವಟಿಕೆಗಳಿಗಾಗಿ ಪ್ರತ್ಯೇಕ ಅನುದಾನ ಮೀಸಲಿಡುವುದು. ಜಿಲ್ಲೆಯ ಪ್ರಧಾನ ಬೆಳೆ ತೊಗರಿ ಬೆಳೆಗೆ ಬೆಂಬಲ ಬೆಲೆ ಒದಗಿಸಬೇಕು.

ಕನ್ನಡ ಮಾಧ್ಯಮದಲ್ಲಿ ಓದಿದ ಯುವಕರಿಗೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸೂಕ್ತ ಮೀಸಲಾತಿ ಒದಗಿಸಬೇಕು.
ರಾಜ್ಯ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪರಿಷತ್ತಿನ ವತಿಯಿಂದ ದಲಿತ ಚಳವಳಿ ಸಾಹಿತ್ಯ ಸಮ್ಮೇಳನ ನಡೆಸಲು ಸರ್ಕಾರ ಪ್ರತ್ಯೇಕ ಅನುದಾನ ನೀಡಬೇಕು ಎಂಬ ಪ್ರಮುಖ ನಾಲ್ಕು ನಿರ್ಣಯಗಳನ್ನು ಸಮ್ಮೇಳನದಲ್ಲಿ ಅಂಗೀಕರಿಸಲಾಯಿತು.

ಮೂಡಾ ಹಗರಣದ ಪ್ರಕರಣಕ್ಕೆ ಸಂಬಂಧಿಸಿದ ರಾಜ್ಯಪಾಲರು ನೋಟಿಸು ನೀಡಿದ್ದು ಖಂಡನಾರ್ಹ. ಈ ದಿಸೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ರಾಜೀನಾಮೆ ಪ್ರಶ್ನೆಯೇ ಇಲ್ಲ. ಈ ಪ್ರಕರಣದಲ್ಲಿ ಮೂಗು ತೋರಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಹಿಂದುಳಿದವರ ವರ್ಗದ ಜನರ ತುಳಿಯುವ ಹುನ್ನಾರ ನಡೆದಿದ್ದು, ನಮ್ಮ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖ್ಯಮಂತ್ರಿಗಳಿಗೆ ಸಂಪೂರ್ಣ ಬೆಂಬಲ ಕೊಡುತ್ತದೆ. ಮತ್ತು ವೈಜ್ಞಾನಿಕವಾಗಿ ಒಳಮೀಸಲಾತಿ ಜಾರಿಗೊಳಿಸಬೇಕು. – ಡಾ. ಡಿ.ಜಿ. ಸಾಗರ, ಸಮ್ಮೇಳನಾಧ್ಯಕ್ಷರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

10 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

21 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

21 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

23 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

23 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

24 hours ago