ಬಿಸಿ ಬಿಸಿ ಸುದ್ದಿ

ಚಳವಳಿ, ಹೋರಾಟದಿಂದಲೇ ದಲಿತ ಸಾಹಿತ್ಯ ಉದಯ: ದಲಿತ ಚಳವಳಿ ಸಾಹಿತ್ಯ ಸಮ್ಮೇಳನ

ಕಲಬುರಗಿ: ದಲಿತ, ಹಿಂದುಳಿದವರು, ದೀನರು ಎಂದು ಹೇಳಿಕೊಂಡು ಎಷ್ಟು ದಿನ ಅಂತಾ ಜೀವನ ಸಾಗಿಸಬೇಕು. ಸಾಧನೆ ಮಾಡಿ ಸಾಧಕರಾಗಿ ಸಾಯೋಣ. ಬೌದ್ಧ ಸಂಸ್ಕಾರವನ್ನು ಪಡೆಯಬೇಕು ಎಂದು ಹಿರಿಯ ಸಾಹಿತಿ ಡಾ.ಹನುಮಂತರಾವ ದೊಡ್ಡಮನಿ ಆಗ್ರಹಿಸಿದರು.

ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಜಿಲ್ಲಾ‌‌
ಕನ್ನಡ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿದ್ದ ಜಿಲ್ಲಾ ಪ್ರಥಮ ದಲಿತ ಚಳವಳಿ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಚಳವಳಿಯಿಂದ ಸಾಹಿತ್ಯ ಹುಟ್ಟುತ್ತದೆ. ಸಾಹಿತ್ಯದಿಂದ ಚಳವಳಿಗೆ ಶಕ್ತಿ ಬರುತ್ತದೆ. ಬುದ್ಧ ಬಸವ, ಅಂಬೇಡ್ಕರ್ ಚಳವಳಿ ಮಾಡಿದ್ದರಿಂದಲೇ ಹೊಸ ಸಾಹಿತ್ಯ ರಚನೆ ಆಯಿತು ಎಂದು ಹೇಳಿದರು.

ಸಮ್ಮೇಳನವೂ ಹೋರಾಟಕ್ಕೆ, ಸಾಹಿತ್ಯಕ್ಕೆ ದಿಕ್ಸೂಚಿ ಆಗಬೇಕು. ನಮ್ಮ ನೆಲದ ಮಣ್ಣಿನ ವಾಸನೆ ಸಮ್ಮೇಳನ ಸಾರಬೇಕು. ದಲಿತ ಸಾಹಿತ್ಯ ಮತ್ತು ಚಳವಳಿ ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ ಎಂದು ಹೇಳಿದರು.

ಕೇಂದ್ರೀಯ ವಿವಿ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಮಾತನಾಡಿ, ದಲಿತ ಚಳವಳಿ ಇಲ್ಲದೆ ದಲಿತ ಸಾಹಿತ್ಯ ಇಲ್ಲ. ಹೋರಾಟದ ಸಾಗರಕ್ಕೆ ನೂರಾರು ನದಿಗಳು ಎನ್ನುವಂತೆ ಚಳವಳಿಯೇ ಸಾಹಿತ್ಯ ರಚನೆಗೆ ಪ್ರೇರಣೆ ನೀಡಿತು. ಚರಿತ್ರೆಯ ಹೋರಾಟದ ನೆನಪುಗಳನ್ನು ಮಾಡುತ್ತ ನಮ್ಮ ನಾಳೆಯ ಚರಿತ್ರೆ ಕಟ್ಟಿಕೊಳ್ಳಬೇಕು ಎಂದರು.

ಜಗದ್ಗುರು ಶ್ರೀ ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು. ಅಣದೂರದ ಪೂಜ್ಯ ಬಂತೆಜೀ ವರಜ್ಯೋತಿ ಥೇರೋ, ಬುದ್ಧವಿಹಾರದ ಸಂಗಾನಂದ ಬಂತೆಜೀ, ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ, ಶಿವರಾಜ ಅಂಡಗಿ, ಶರಣರಾಜ ಚಪ್ಪರಬಂಧಿ, ಧರ್ಮಣ್ಣ ಧನ್ನಿ, ಡಾ.ವಿಷ್ಣುವರ್ಧನ, ಸುರೇಶ ಹಾದಿಮನಿ, ಕಲ್ಯಾಣರಾವ ಶೀಲವಂತ ಇತರರಿದ್ದರು.

ವಿವಿಯಲ್ಲಿ ವಿದ್ವಾಂಸರಿಲ್ಲ ದ್ವಂಸಕರಿದ್ದಾರೆ: ದಲಿತ ಚಳವಳಿ, ಸಾಹಿತ್ಯಕ್ಕೆ ಶಕ್ತಿ ತುಂಬಬೇಕಾದ ವಿಶ್ವವಿದ್ಯಾಲಯಗಳಲ್ಲಿ ಕೃತಿಚೌರ್ಯ ಮಾಡುವ ಸಾಹಿತಿಗಳು, ಭ್ರಷ್ಟ ಪ್ರಾಧ್ಯಾಪಕರನ್ನು ಬದಲಾಯಿಸಬೇಕು, ಪಿಎಚ್‌ಡಿ ಪ್ರವೇಶಕ್ಕೆ ಎರಡು ಲಕ್ಷ ರೂ., ಎಂಪಿಲ್‌ಗೆ ೫೦ ಸಾವಿರ ರೂ. ತೆಗೆದುಕೊಳ್ಳುವ ಭ್ರಷ್ಟರನ್ನು ಚಳವಳಿ ಮೂಲಕ ಬದಲಾಯಿಸಬೇಕಿದೆ ಎಂದು ಸಾಹಿತಿ ಹಣಮಂತರಾಯ ದೊಡ್ಡಮನಿ ಆಗ್ರಹಿಸಿದರು.

ಗುಲ್ಬರ್ಗ ವಿವಿಯಲ್ಲಿ ವಿದ್ವಾಂಸರಿಲ್ಲ, ದ್ವಂಸಕರಿದ್ದಾರೆ. ಒಂದೇ ಪುಸ್ತಕಕ್ಕೆ ಆರು ಟೈಟಲ್ ನೀಡಿ, ಸರ್ಕಾರದ ಅನುದಾನದಲ್ಲಿ ಪುಸ್ತಕ ಮಾರಿ ಉಪ ಜೀವನ ಸಾಗಿಸುತ್ತಿದ್ದು, ಇವರ ಬಗ್ಗೆ ಪ್ರಶ್ನೆ ಎತ್ತಬೇಕು ಎಂದರು.

ಡಾ.ಮಲ್ಲಿಕಾರ್ಜುನ ಖರ್ಗೆ ಎಂದೋ ಸಿಎಂ ಆಗಬೇಕಿತ್ತು. ಆಗದಿರುವುದು ಇನ್ನು ಜಾತಿ ಪದ್ಧತಿ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿ. ಡಿ.ಜಿ.ಸಾಗರ ಸೇರಿ ಎಲ್ಲರೂ ಸಮಾನತೆಗಾಗಿ ಜಗಳವಾಡಿದರೆ ಹೊರತು ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ಕ್ರಮಿಸಬೇಕಾದ ದಾರಿ ಇನ್ನು ತುಂಬ ದೂರ ಇದೆ. ಬುದ್ಧ, ಬಸವಣ್ಣ, ಅಂಬೇಡ್ಕರ್ ಜಾತಿ ವಿನಾಶಕ್ಕಾಗಿ ಬುಲ್ಡೋಜರ್ ಆಗಿ ಬಂದರು. ಆ ದಾರಿಯಲ್ಲಿ ಸಾಗಬೇಕು.- ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಶ್ರೀಶೈಲ

ಸಮುದಾಯ ಮುಂದೆ ಬರಲು ಅದರ ನಾಯಕರನ್ನು ಸಮಾಜ ರಕ್ಷಿಸಬೇಕು. ಸಮ್ಮೇಳನ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ. ಅಸಮಾನತೆಯ ವ್ಯವಸ್ಥೆಯಲ್ಲಿ ಸಂಘರ್ಷ ಅನಿವಾರ್ಯ. ಪ್ರಗತಿಪರ, ದಲಿತ, ಬಂಡಾಯ ಸಾಹಿತಿಗಳು ಒಂದಾಗಬೇಕಿದೆ. ಸಂವಿಧಾನ ಉಳಿದರೆ ನಾವು ಉಳಿಯುತ್ತೇವೆ. ಅರಿತು ಎಚ್ಚರಿಕೆಯಿಂದ ಬಾಳಬೇಕು. ಚಳವಳಿಯಲ್ಲಿ ನೈತಿಕತೆ ಇದ್ದರೆ ಹೆಚ್ಚಿನ ಶಕ್ತಿ ಬರುತ್ತದೆ. – ಡಾ.ಡಿ.ಜಿ.ಸಾಗರ, ಸರ್ವಾಧ್ಯಕ್ಷ, ದಲಿತ ಚಳವಳಿ ಸಾಹಿತ್ಯ ಸಮ್ಮೇಳನ

ಸಮ್ಮೇಳನ ನಿರ್ಣಯಗಳು ದಲಿತ ಚಳವಳಿ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿAದ ನಾಡು- ನುಡಿ ಸೇವೆಗಾಗಿ ಅನುದಾನ ಮೀಸಲಿಡಬೇಕು, ಕಲಬುರಗಿ ಜಿ¯್ಲೆಯ ಪ್ರಧಾನ ಬೆಳೆ ತೊಗರಿ ಬೆಳೆಗೆ ಬೆಂಬಲ ಬೆಲೆ ಒದಗಿಸಬೇಕು, ಕನ್ನಡ ಮಾಧ್ಯಮದಲ್ಲಿ ಓದಿದ ಯುವಕರಿಗೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸೂಕ್ತ ಮೀಸಲಾತಿ ಒದಗಿಸಬೇಕು, ಜಿಲ್ಲಾ ಮಟ್ಟದ ದಲಿತ ಚಳವಳಿ ಸಾಹಿತ್ಯ ಸಮ್ಮೇಳನ ನಡೆಸಲು ಸರ್ಕಾರ ಅನುದಾನ ನೀಡಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

6 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

17 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

17 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

19 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

19 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

20 hours ago