ರಾಯಚೂರು : ಕಲ್ಕತ್ತಾ ವೈದ್ಯಕೀಯ ಟ್ರೈನಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಿರುವ ಅಪರಾಧಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಹಟ್ಟಿ ಪ್ರಗತಿಪರ ಜಂಟಿ ಸಂಘಟನೆಗಳು ಪ್ರತಿಭಟಿಸಿದರು.
ಲಿಂಗಸಗೂರು ತಾಲ್ಲೂಕಿನ ಹಟ್ಟಿ ಪಟ್ಟಣದ ಪಾಮನಕಲ್ಲೂರು ಕ್ರಾಸ್ ನಿಂದ, ಬಸ್ ನಿಲ್ದಾಣ, ಕೊಠಾ ಕ್ರಾಸ್, ಮೂಲಕ ಪೊಲೀಸ್ ಠಾಣೆವರಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಮುಖಂಡರಾದ ಮೀನಾಕ್ಷಿ ಬಾಳೆ ವೈದ್ಯ ವಿದ್ಯಾರ್ಥಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವುದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ .ವೈದ್ಯ ಮೇಲೆ ಆದ ಕೃತ್ಯವನ್ನು ಸರಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ.
ಟ್ರೈನಿ ವೈದ್ಯೆಯ ಮೃತ ದೇಹವು ಶುಕ್ರವಾರ ಬೆಳಿಗ್ಗೆ ಕಾಲೇಜಿನ ಮೂರನೇ ಮಹಡಿಯ ಸೆಮಿನಾರ್ ಹಾಲ್‌ನಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುತ್ತಿಗೆ ಮೂಳೆ ಮುರಿದು, ಕಣ್ಣು, ಬಾಯಿ, ಖಾಸಗಿ ಅಂಗದಲ್ಲೂ ರಕ್ತಸ್ರಾವ ಆಗುವಷ್ಟು ಭೀಕರವಾದ ಲೈಂಗಿಕ ದೌರ್ಜನ್ಯ ನಡೆದಿರುವ ಕುರಿತು ವರದಿಯಾಗಿದೆ. ಇದು ದೇಶದ ನಾಗರಿಕರಲ್ಲಿ ತೀವ್ರವಾದ ಆತಂಕ, ಗಾಬರಿ ಮತ್ತು ಆಘಾತವನ್ನು ಉಂಟುಮಾಡಿದೆ.
ಜನರ ಜೀವವನ್ನು ರಕ್ಷಿಸಬೇಕಾದ ವೈದ್ಯರಿಗೇ ರಕ್ಷಣೆ ಇಲ್ಲದಂತಾಗಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಇಂತಹ ಘೋರವಾದ ಘಟನೆ ನಡೆಯುವ ಸಂದರ್ಭದಲ್ಲಿ ಅಲ್ಲಿರುವ ಸಿಬ್ಬಂದಿ ವರ್ಗ ಎಲ್ಲಿತ್ತು. ಆಡಳಿತ ವ್ಯವಸ್ಥೆಯು ಇಂದು ಸಂಪೂರ್ಣವಾಗಿ ಕಲುಷಿತವಾಗಿದೆ. ಅರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ಸ್ಥಳದಲ್ಲಿ ಏಕಾಏಕಿ ಗುಂಪುಗೂಡಿ ಆಸ್ಪತ್ರೆಗೆ ನುಗ್ಗಿ ದಾಂಧಲೆ ಮಾಡಿದ ತಪ್ಪಿತಸ್ಥರನ್ನು ಶಿಕ್ಷೆ ವಿಧಿಸಬೇಕು ಹಾಗೂ ಜಸ್ಟಿಸ್ ವರ್ಮಾ ಆಯೋಗ ಶಿಫಾರಸು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು .
ನಿರ್ಭಯ ಹತ್ಯೆಯಾದಾಗ ಇಡೀ ದೇಶದಲ್ಲಿ ಪ್ರತಿಭಟನೆಗಳು , ಪಂಜಿನ ಮೆರವಣಿಗೆ , ಹೋರಾಟಗಳು ಹಾಗೂ ಅಪರಾಧಿಗೆ ಶಿಕ್ಷೆಯಾದರು ಮಹಿಳೆಯರ ಮೇಲೆ ದೌರ್ಜನ್ಯ ,ಕೊಲೆ ನಡೆದಿವೆ ಈ ದೇಶ ಯಾರಿಗೂ ಸುರಕ್ಷಿತವಾಗಿಲ್ಲ , ನಿರ್ಭಯಾ ನಿಧಿ ಸದ್ಬಳಕೆಯಾಗಬೇಕು ಎಂದರು .
ಬಿಲ್ಕಿಸ್ ಬಾನು ಮೇಲೆ ಹತ್ಯೆಯಾದಾಗ ಅಪರಾಧಿಗಳನ್ನು ಬಿಡುಗಡೆಗೊಳಿಸಿ ಸನ್ಮಾನ ,ಸಿಹಿ ತಿನ್ನಿಸಿ ಸ್ವಾಗತ ಮಾಡುತ್ತಾರೆ ಎಂದರೆ ಎತ್ತ ಕಡೆ ದೇಶ ಸಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹಿಳೆಯರ ಬಟ್ಟೆ , ಉಡುಪು ತೋಡುಪು ,ಊಟ ಆಚಾರ ,ವಿಚಾರ ಬಗ್ಗೆ ಮಾತನಾಡುತ್ತಾರೆ .ಮಹಿಳೆ ಬಟ್ಟೆ ಮುಚ್ಚಿದರು ಸಮಸ್ಯೆ , ಬಿಚ್ಚಿದರು ಒಂದು ಸಮಸ್ಯೆ , ಮುಚ್ಚಬೇಕಾ ,ಬಿಚ್ಚಬೇಕಾ ಎಂದು ಪ್ರಶ್ನಿಸಿದರು .
ಈ ವೇಳೆ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪೂರ , ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷ ಕೆ ಎಸ್ ಲಕ್ಷ್ಮೀ , ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ರಾಜ್ಯ ಉಪಾಧ್ಯಕ್ಷ ದಾವಲ್ ಸಾಬ್ ನದಾಫ್, ವರಲಕ್ಷ್ಮೀ ,ವೈದ್ಯರಾದ ಸಾಜಿದಾ , ವಸಂತ ಕುಮಾರ್ , ಕುಟ್ಟಿಮ್ಮ ,ಪೆಂಚಲಮ್ಮ , ಅಲ್ಲಾಬಕ್ಷ , ಚಂದ್ರಶೇಖರ್ ,ಚನ್ನಬಸವ ,ನಜೀರ್ , ದಾವುದ್ , ರಿಯಾಜ್ , ವಿನಾಯಕ ವಿದ್ಯಾ ಸಂಸ್ಥೆ ಪ್ರಾಂಶುಪಾಲರು ನರಸಪ್ಪ ಯಾದವ್ , ಕಟ್ಟಡ ಕಾರ್ಮಿಕ ಮುಖಂಡ ನಿಂಗಪ್ಪ ಎಮ್ , ವಿನಯ , ಆನೀಫ್,ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಸಹ ಸಂಚಾಲಕ ಲಾಲಪೀರ್ ಇನ್ನಿತರರು ಉಪಸ್ಥಿತರಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…