ಬಿಸಿ ಬಿಸಿ ಸುದ್ದಿ

ವಿದ್ಯಾರ್ಥಿನಿಯರೊಂದಿಗೆ ಅಸಭ್ಯವರ್ತನೆ: ಸೂಕ್ತ ಕ್ರಮಕ್ಕೆ ಎಸ್.ಎಫ್.ಐ ಆಗ್ರಹ

ರಾಯಚೂರು: ಅಕ್ರಮ‌ ಪ್ರವೇಶ ಮಾಡಿ  ವಿದ್ಯಾರ್ಥಿನಿರಯೊಂದಿಗೆ ಅಸಭ್ಯ ವಾಗಿ ವರ್ತಿಸುವ ಅಮೀಗಡ ಶಾಲೆಯ ಮುಖ್ಯೋಪಾಧ್ಯೆಯಾ ಪತಿಯಾದ ರಾಘವೇಂದ್ರ ಗೌಡ ಸೇರಿ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಿವಕುಮಾರ ಮ್ಯಾಗಳಮನಿ ಆಗ್ರಹ.

ಇಲ್ಲಿನ ಮಸ್ಕಿ ತಾಲ್ಲೂಕಿನ (ಕವಿತಾಳ ಸಮೀಪದ) ಅಮೀನಗಡ ಗ್ರಾಮದಲ್ಲಿ ಒಂದೇ ಆವರಣದಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯೆಯಾದ ಮನೀಶಾ ಪತಿಯಾದ ರಾಘವೇಂದ್ರ ಗೌಡ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಸಮಯವಲ್ಲದ ಸಮಯದಲ್ಲಿ‌ ಯಾರ ಅನುಮತಿ ಇಲ್ಲದೆ ಒಳ ಪ್ರವೇಶಿ, ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಾನೆ ಎಂದು ಅವರು ಆರೋಪಿಸಿದರು.

ಇದನ್ನು ಗಮನಿಸಿ ಪ್ರಶ್ನೆ ಮಾಡಲು ಮುಂದಾದ ಗ್ರಾಮದ ಯುವಕರಿಗೆ ಒಮ್ಮೊಮ್ಮೆ ಒಂದೊಂದು ರೀತಿಯ ಉತ್ತರ ನೀಡಿ ಕೊನೆಗೆ ನೀವು ಮಾತನಾಡಿದರೆ ನಿಮ್ಮ ಮೇಲೆ ಪ್ರಕರಣ ದಾಖಲಿಸುತ್ತೇನೆ ಕೇಳಲು ನೀವು ಯಾರು, ಅವರು ನಮ್ಮ ಪತಿ ನನ್ನ ಇಷ್ಟ ಇದೆ ಕೊನೆ ಹುಷಾರ್ ಎಂದು ಬೆದರಿಕೆಯನ್ನು ಹಾಕುತ್ತಾ ತಾವು ಆಡಿದ್ದೆ ಆಟ, ಮಾಡಿದ್ದೆ ಪಾಠ ಎಂಬ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುವುದು ಅಕ್ಷಮ್ಯ ಅಪರಾಧವಾಗಿದೆ ಎಂದು SFI ಸಂಘಟನೆ ಇಂದು ಕವಿತಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಆರೋಪಿಸಿದರು.

ನಿನ್ನೆಯೂ ಇಂತಹದ್ದೆ ಘಟನೆ ನಡೆದಿದೆ ಇದನ್ನು ಪ್ರಶ್ನೆ ಮಾಡಿದ ಯುವಕರ ಮತ್ತು ಗ್ರಾಮಸ್ಥರ ಮೇಲೆ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿ ತಮ್ಮಲ್ಲೇ ಹತ್ತಾರು ತಪ್ಪುಗಳನ್ನು ಇಟ್ಟುಕೊಂಡು ಮುಖ್ಯೋಪಾಧ್ಯಾಯು ತಮ್ಮ ಗಂಡನೊಂದಿಗೆ ಕವಿತಾಳ ಪೋಲಿಸ್ ಠಾಣೆಗೆ ಬಂದಿದ್ದಾರೆ, ಇವರಿಗೆ ಪೋಲಿಸರು ಸಾಥ್ ನೀಡಿರುವುದು ಖಂಡನೀಯ. ತಮ್ಮ ಪತಿಗೆ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಿಕೊಡುತ್ತಾ ಇಲಾಖೆಯ ಎಲ್ಲಾ ಆದೇಶಗಳನ್ನು ಉಲಂಘನೆ ಮಾಡುತ್ತಿರುವ ಶಾಲೆಯ ಮುಖ್ಯೋಪಾಧ್ಯೆಯಾದ ಮನೀಶಾ ಹಾಗೂ ಅವರ ಪತಿ ರಾಘವೇಂದ್ರ ಗೌಡರ ಮೇಲೆ ಸಂಬಂಧಿಸಿದ ಶಿಕ್ಷಣ ಇಲಾಖೆ ಮತ್ತು ವಸತಿ ನಿಲಯದ ಮೇಲಾಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ವಿದ್ಯಾರ್ಥಿಗಳಿಗೆ ಅನುಕೂಲಕರ, ಶೈಕ್ಷಣಿಕ ಭಯಮುಕ್ತ ವಾತಾವರಣ ನಿರ್ಮಾಣ ಮಾಡಿಕೊಡಬೇಕು ನಿರ್ಲಕ್ಷ್ಯ ತೋರಿದ್ದಲ್ಲಿ SFI ಸಂಘಟನೆ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು ಸುದ್ದಿಗೋಷ್ಠಿಯ ಮೂಲಕ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಆಗ್ರಹಿಸಿದರು.

ಈ ಸುದ್ದಿ ಘೋಷ್ಠಿ ಯಲ್ಲಿ SFI ಜಿಲ್ಲಾ ಉಪಾಧ್ಯಕ್ಷರಾದ ಲಿಂಗರಾಜ ಕಂದಗಲ್, ಮಹಿಳಾ ಮುಖಂಡರಾದ ಗಂಗಮ್ಮ ಅಮೀನಗಡ, ಗ್ರಾಮದ ಯುವ ಮುಖಂಡರಾದ ಬಸವರಾಜ ಅಮೀನಗಡ, ಆಯ್ಯಣ್ಣ, ಮನ್ಸೂರ್, ಹುಚ್ಚರೇಡ್ಡಿ, ಇಮಾಮ್ ಸಾಬ್ ಸೇರಿದಂತೆ ಇತರರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

10 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

20 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

20 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

20 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago