ಕಲಬುರಗಿ; ತನ್ನೊಳಗೆ ತಾ ನಗುವನು ಜ್ಞಾನಿ, ತನ್ನಿಂದ ತಾನೆ ನಗುವವನು ಹುಚ್ಚ, ಗೆಳತಿಯನ್ನು ನೆನೆದ ನಗುವವನು ಪ್ರೇಮಿ, ಮೈಮರೆತು ನಗುವವನು ರಸಿಕ, ಇನ್ನೊಬ್ಬರನ್ನು ನೋಡಿ ನಗುವವನು ಖಳನಾಯಕ, ನಗುತ್ತಲೇ ವಿಜಯ ಸಾಧಿಸುವವನು ಬುದ್ಧಿವಂತ, ಗೆದ್ದರು ನಗದವನು ಕರ್ಮಯೋಗಿ, ನಕ್ಕು ಮನ ರಂಜಿಸುವವನು ವಿದೂಷಕ ಎಂದು ಹಾಸ್ಯಕವಿ ವಾಯ್. ವಿ. ಗುಂಡೂರಾವ ಮಾತನಾಡಿದರು.
ಸೇಡಂ ರಸ್ತೆಯ ವಿದ್ಯಾನಗರ ವೆಲ್‍ಫೇರ ಸೊಸೈಟಿಯ ಮಲ್ಲಿಕಾರ್ಜುನ ಸಮುದಾಯದ ಪುರಾಣ ಕಾರ್ಯಕ್ರಮದ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ, ಪದಾಧಿಕಾರಿಗಳಾದ ಗುರುಲಿಂಗಯ್ಯ ಮಠಪತಿ, ಬಸವಂತರಾವ ಜಾಬಶೆಟ್ಟಿ, ಸುಭಾಷ ಮಂಠಾಳೆ, ನಾಗರಾಜ ಹೆಬ್ಬಾಳ, ಶಾಂತಯ್ಯ ಬೀದಿಮನಿ, ಎಸ್.ಎಸ್.ಮಠಪತಿ, ಪುರಾಣ ಪ್ರವಚನಕರರಾದ ವೇ.ಮೂ. ಶಂಬುಲಿಂಗ ಶಾಸ್ತ್ರಿ, ಕಲಾವಿದರಾದ ಶಿವಕುಮಾರ ಹಿರೇಮಠ, ಸಿದ್ಧಣ್ಣ ದೇಸಾಯಿ ಕಲ್ಲೂರ, ಶರಣಯ್ಯ ಮಠಪತಿ, ಲಿಂಗರಾಜ ಉಪಸ್ಥಿತರಿದ್ದರು.
ವಿವಿಧ ಬಗೆಯ ನಗೆ ಕುರಿತು ಹಾಸ್ಯಕವಿಗಳಾದ ವಾಯ್. ವಿ. ಗುಂಡೂರಾವ ಅವರು ನಯ. ವಿನಯ, ಭಕ್ತಿ, ದೇವರು ಹೀಗೆ ಅನೇಕ ಆಧ್ಯಾತ್ಮಿಕ ಸಾಹಿತ್ಯದೊಂದಿಗೆ ನೆರೆದಿದ್ದ ಜನರಿಗೆ ಹಾಸ್ಯದ ಲೋಕದಲ್ಲಿ ಮುಳುಗಿಸಿದರೆಂದು ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…