ಸರ್ವರೋಗಕ್ಕೆ ನಗುವೆ ಮದ್ದು

0
100

ಕಲಬುರಗಿ; ತನ್ನೊಳಗೆ ತಾ ನಗುವನು ಜ್ಞಾನಿ, ತನ್ನಿಂದ ತಾನೆ ನಗುವವನು ಹುಚ್ಚ, ಗೆಳತಿಯನ್ನು ನೆನೆದ ನಗುವವನು ಪ್ರೇಮಿ, ಮೈಮರೆತು ನಗುವವನು ರಸಿಕ, ಇನ್ನೊಬ್ಬರನ್ನು ನೋಡಿ ನಗುವವನು ಖಳನಾಯಕ, ನಗುತ್ತಲೇ ವಿಜಯ ಸಾಧಿಸುವವನು ಬುದ್ಧಿವಂತ, ಗೆದ್ದರು ನಗದವನು ಕರ್ಮಯೋಗಿ, ನಕ್ಕು ಮನ ರಂಜಿಸುವವನು ವಿದೂಷಕ ಎಂದು ಹಾಸ್ಯಕವಿ ವಾಯ್. ವಿ. ಗುಂಡೂರಾವ ಮಾತನಾಡಿದರು.

ಸೇಡಂ ರಸ್ತೆಯ ವಿದ್ಯಾನಗರ ವೆಲ್‍ಫೇರ ಸೊಸೈಟಿಯ ಮಲ್ಲಿಕಾರ್ಜುನ ಸಮುದಾಯದ ಪುರಾಣ ಕಾರ್ಯಕ್ರಮದ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ, ಪದಾಧಿಕಾರಿಗಳಾದ ಗುರುಲಿಂಗಯ್ಯ ಮಠಪತಿ, ಬಸವಂತರಾವ ಜಾಬಶೆಟ್ಟಿ, ಸುಭಾಷ ಮಂಠಾಳೆ, ನಾಗರಾಜ ಹೆಬ್ಬಾಳ, ಶಾಂತಯ್ಯ ಬೀದಿಮನಿ, ಎಸ್.ಎಸ್.ಮಠಪತಿ, ಪುರಾಣ ಪ್ರವಚನಕರರಾದ ವೇ.ಮೂ. ಶಂಬುಲಿಂಗ ಶಾಸ್ತ್ರಿ, ಕಲಾವಿದರಾದ ಶಿವಕುಮಾರ ಹಿರೇಮಠ, ಸಿದ್ಧಣ್ಣ ದೇಸಾಯಿ ಕಲ್ಲೂರ, ಶರಣಯ್ಯ ಮಠಪತಿ, ಲಿಂಗರಾಜ ಉಪಸ್ಥಿತರಿದ್ದರು.

Contact Your\'s Advertisement; 9902492681

ವಿವಿಧ ಬಗೆಯ ನಗೆ ಕುರಿತು ಹಾಸ್ಯಕವಿಗಳಾದ ವಾಯ್. ವಿ. ಗುಂಡೂರಾವ ಅವರು ನಯ. ವಿನಯ, ಭಕ್ತಿ, ದೇವರು ಹೀಗೆ ಅನೇಕ ಆಧ್ಯಾತ್ಮಿಕ ಸಾಹಿತ್ಯದೊಂದಿಗೆ ನೆರೆದಿದ್ದ ಜನರಿಗೆ ಹಾಸ್ಯದ ಲೋಕದಲ್ಲಿ ಮುಳುಗಿಸಿದರೆಂದು ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here