ಕಲಬುರಗಿ: ಸರಳ ನಡೆ- ನುಡಿಯ ಪರಮ ಪೂಜ್ಯರು, ಜೈ ಭಾರತ ಮಾತಾ ಸೇವಾ ಸಮಿತಿ ನವದೆಹಲಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಹವಾ ಮಲ್ಲಿನಾಥರ 57 ನೇ ಜನ್ಮ ದಿನಾಚರಣೆ ಹಾಗೂ ಶ್ರೀ ಕೃಷ್ಣ ಜನ್ಮಾಷ್ಠಮಿ ಸೋಮವಾರ ವಿವಿಧ ಸಾಮಾಜಿಕ ಸೇವಾ ಕಾರ್ಯಗಳು ಮತ್ತು ಶೃದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು.
ಮಹಾದಾಸೋಹಿ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಮಿತಿ ಹಾಗೂ ಭಕ್ತರ ವತಿಯಿಂದ ಆಯೋಜಿಸಲಾದ ಜನ್ಮ ದಿನಾಚರಣೆಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಪರಮ ಪೂಜ್ಯ ಹವಾ ಮಲ್ಲಿನಾಥ ಮಹಾರಾಜ ಅವರು ದೇಶದಾದ್ಯಂತ ಸಾವಿರಾರು ಮಠ – ಮಂದಿರಗಳನ್ನು ಸ್ಥಾಪಿಸಿ ನಿರಂತರವಾಗಿ ದೇಶಭಕ್ತಿ ಕಾರ್ಯಕ್ರಮಗಳನ್ನು ಮತ್ರು ನಿರಂತರ ತನ್ನ ದಾಸೋಹ ಕೈಗೊಳ್ಳುತ್ತಾ ಬರುತ್ತಿರುವುದು ನಾಡಿಗೆ ಮಾದರಿಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಶಂಕರಜಿ ಹೂವಿನ ಹಿಪ್ಪರಗಿ, ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ, ಹಿರಿಯ ಪತ್ರಕರ್ತರಾದ ಹಣಮಂತರಾವ ಭೈರಾಮಡಗಿ, ಗುರುಸಿದ್ದಪ್ಪಾ ಬೆನಕನಳ್ಳಿ, ಡಾ. ಮಲ್ಲಿಕಾರ್ಜುನ ಹಾಗೂ ಭವಾನಿ ಸಿಂಗ ಠಾಕೂರ ಇತರರನ್ನು ಸನ್ಮಾನಿಸಲಾಯಿತು.
ವಿವಿಧೆಡೆ ಆಗಮಿಸಿದ ವಿವಿಧ ಭಜನಾ ಸಂಘದವರಿಂದ ಭಜನೆ ಕಾರ್ಯಕ್ರಮ ಸಹ ಜರುಗಿದವು.
ದಯಂಡಿ ಉತ್ಸವ: ಕೃಷ್ಣ ಜನ್ಮಾಷ್ಟಮಿ ಹಾಗೂ ಹವಾ ಮಲ್ಲಿನಾಥರ ಜನ್ಮಾಷ್ಟಮಿ ಪ್ರಯಕ್ತ ಶರಣಬಸವೇಶ್ವರ ದೇವಸ್ಥಾನದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿ ವತಿಯಿಂದ ಧಯಂಡಿ (ಕಾಲಾ) ಉತ್ಸವದಲ್ಲಿ ಆಯೋಜಿಸಲಾಗಿತ್ತು.ಸರ್ವ-ಧರ್ಮದ ಭಕ್ತಾದಿಗಳು, ಶ್ರಧಾ ಭಕ್ತಿಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ನಿರಂತರ ಅನ್ನದಾಸೋಹ: ಪೂಜ್ಯರ ಜನ್ಮ ದಿನಾಚರಣೆ ಅಂಗವಾಗಿ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ನಿರಂತರ ಅನ್ನದಾಸೋಹ ಆಯೋಜಿಸಲಾಗಿತ್ತು ಭಕ್ತಾಧಿಗಳು ಹುಗ್ಗಿ, ಸಜ್ಜಕ್ ಹಾಗೂ ಅನ್ನ ಸಾಂಬಾರ ಸವಿದರು.
ಜೈ ಭಾರತ ಮಾತಾ ಸೇವಾ ಸಮಿತಿಯ ವಕ್ತಾರರಾದ ವೈಜನಾಥ ಝಳಕಿ, ಪ್ರಮುಖರಾದ ಲಾಲಯ್ಯ ಗುತ್ತೇದಾರ, ಜಗನಾಥ ರೆಡ್ಡಿ, ಶಾಹಾಜಿರಾವ ಪಾಟೀಲ, ವಿಕಾಸ ಆರ್ ಪಾಠಕ, ಅರುಣಕುಮಾರ ಪಾಟೀಲ, ಸುರೇಶ ಪಾಟೀಲ ಜೊಗುರ, ದಯಾನಂದ ಬೊಳ ಶೆಟ್ಟಿ, ಅನುರಾಧಾ ಮುಚ್ಚಂಡೆ, ಶಿವಕಾಂತ ಮಹಾಜನ, ಶಿವಾನಂದ ಲಂಗರ,
ಸಂದೇಶ ಪವಾರ, ಮಂಜುನಾಥ ಬಿರಾದಾರ, ಆದಿನಾಥ ಹೀರಾ, ಚಂದ್ರಶೇಖರ ತಳ್ಳಳ್ಳಿ, ಶಿವರಾಜ ವಾರದ, ಶರಣು ಸಾವಳಗಿ, ರೇವಪ್ಪ ಮಮದಾಪುರೆ, ಈರಣ್ಣ ಕಾರಬಾರಿ, ಖೇಮಲಿಂಗ ಹಿರಾ ನರೋಣಾ, ಮಲ್ಲಿನಾಥ ಹಳ್ಳೆ
ರವಿಂದ್ರ ಗಂಟೆ ಹಾಗೂ ಇತರರು ಹಾಜರಿದ್ದರು.
ಅದೇ ತೆರನಾಗಿ ನಗರದ ವಿವಿಧೆಡೆ ಹಾಗೂ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಪೂಜ್ಯ ಹವಾ ಮಲ್ಲಿನಾಥ ಮಹಾರಾಜ್ ಮುತ್ಯಾ ಅವರ ಜನ್ಮ ದಿನಾಚರಣೆ ಆಚರಿಸಲಾಗಿದೆ.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…