ಹವಾ ಮಲ್ಲಿನಾಥರ ಜನ್ಮ ದಿನ: ನಿರಂತರ ಅನ್ನ ದಾಸೋಹ, ಸನ್ಮಾನಿ

0
46

ಕಲಬುರಗಿ: ಸರಳ ನಡೆ- ನುಡಿಯ ಪರಮ ಪೂಜ್ಯರು, ಜೈ ಭಾರತ ಮಾತಾ ಸೇವಾ ಸಮಿತಿ ನವದೆಹಲಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಹವಾ ಮಲ್ಲಿನಾಥರ 57 ನೇ ಜನ್ಮ ದಿನಾಚರಣೆ ಹಾಗೂ ಶ್ರೀ ಕೃಷ್ಣ ಜನ್ಮಾಷ್ಠಮಿ ಸೋಮವಾರ ವಿವಿಧ ಸಾಮಾಜಿಕ ಸೇವಾ ಕಾರ್ಯಗಳು ಮತ್ತು ಶೃದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು.

ಮಹಾದಾಸೋಹಿ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಮಿತಿ ಹಾಗೂ ಭಕ್ತರ ವತಿಯಿಂದ ಆಯೋಜಿಸಲಾದ ಜನ್ಮ ದಿನಾಚರಣೆಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಚಾಲನೆ ನೀಡಿದರು.

Contact Your\'s Advertisement; 9902492681

ನಂತರ ಮಾತನಾಡಿದ ಅವರು, ಪರಮ ಪೂಜ್ಯ ಹವಾ ಮಲ್ಲಿನಾಥ ಮಹಾರಾಜ ಅವರು ದೇಶದಾದ್ಯಂತ ಸಾವಿರಾರು ಮಠ – ಮಂದಿರಗಳನ್ನು ಸ್ಥಾಪಿಸಿ ನಿರಂತರವಾಗಿ ದೇಶಭಕ್ತಿ ಕಾರ್ಯಕ್ರಮಗಳನ್ನು ಮತ್ರು ನಿರಂತರ ತನ್ನ ದಾಸೋಹ ಕೈಗೊಳ್ಳುತ್ತಾ ಬರುತ್ತಿರುವುದು ನಾಡಿಗೆ ಮಾದರಿಯಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಶಂಕರಜಿ ಹೂವಿನ ಹಿಪ್ಪರಗಿ, ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ, ಹಿರಿಯ ಪತ್ರಕರ್ತರಾದ ಹಣಮಂತರಾವ ಭೈರಾಮಡಗಿ, ಗುರುಸಿದ್ದಪ್ಪಾ ಬೆನಕನಳ್ಳಿ, ಡಾ. ಮಲ್ಲಿಕಾರ್ಜುನ ಹಾಗೂ ಭವಾನಿ ಸಿಂಗ ಠಾಕೂರ ಇತರರನ್ನು ಸನ್ಮಾನಿಸಲಾಯಿತು.

ವಿವಿಧೆಡೆ ಆಗಮಿಸಿದ ವಿವಿಧ ಭಜನಾ ಸಂಘದವರಿಂದ ಭಜನೆ ಕಾರ್ಯಕ್ರಮ ಸಹ ಜರುಗಿದವು.

ದಯಂಡಿ ಉತ್ಸವ: ಕೃಷ್ಣ ಜನ್ಮಾಷ್ಟಮಿ ಹಾಗೂ ಹವಾ ಮಲ್ಲಿನಾಥರ ಜನ್ಮಾಷ್ಟಮಿ ಪ್ರಯಕ್ತ ಶರಣಬಸವೇಶ್ವರ ದೇವಸ್ಥಾನದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿ ವತಿಯಿಂದ ಧಯಂಡಿ (ಕಾಲಾ) ಉತ್ಸವದಲ್ಲಿ ಆಯೋಜಿಸಲಾಗಿತ್ತು.‌ಸರ್ವ-ಧರ್ಮದ ಭಕ್ತಾದಿಗಳು, ಶ್ರಧಾ ಭಕ್ತಿಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.‌

ನಿರಂತರ ಅನ್ನದಾಸೋಹ: ಪೂಜ್ಯರ ಜನ್ಮ ದಿನಾಚರಣೆ ಅಂಗವಾಗಿ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ನಿರಂತರ ಅನ್ನದಾಸೋಹ ಆಯೋಜಿಸಲಾಗಿತ್ತು ಭಕ್ತಾಧಿಗಳು ಹುಗ್ಗಿ, ಸಜ್ಜಕ್ ಹಾಗೂ ಅನ್ನ ಸಾಂಬಾರ ಸವಿದರು.‌

ಜೈ ಭಾರತ ಮಾತಾ ಸೇವಾ ಸಮಿತಿಯ ವಕ್ತಾರರಾದ ವೈಜನಾಥ ಝಳಕಿ, ಪ್ರಮುಖರಾದ ಲಾಲಯ್ಯ ಗುತ್ತೇದಾರ, ಜಗನಾಥ ರೆಡ್ಡಿ, ಶಾಹಾಜಿರಾವ ಪಾಟೀಲ, ವಿಕಾಸ ಆರ್ ಪಾಠಕ, ಅರುಣಕುಮಾರ ಪಾಟೀಲ, ಸುರೇಶ ಪಾಟೀಲ ಜೊಗುರ, ದಯಾನಂದ ಬೊಳ ಶೆಟ್ಟಿ, ಅನುರಾಧಾ ಮುಚ್ಚಂಡೆ, ಶಿವಕಾಂತ ಮಹಾಜನ, ಶಿವಾನಂದ ಲಂಗರ,
ಸಂದೇಶ ಪವಾರ, ಮಂಜುನಾಥ ಬಿರಾದಾರ, ಆದಿನಾಥ ಹೀರಾ, ಚಂದ್ರಶೇಖರ ತಳ್ಳಳ್ಳಿ, ಶಿವರಾಜ ವಾರದ, ಶರಣು ಸಾವಳಗಿ, ರೇವಪ್ಪ ಮಮದಾಪುರೆ, ಈರಣ್ಣ ಕಾರಬಾರಿ, ಖೇಮಲಿಂಗ ಹಿರಾ ನರೋಣಾ, ಮಲ್ಲಿನಾಥ ಹಳ್ಳೆ
ರವಿಂದ್ರ ಗಂಟೆ ಹಾಗೂ ಇತರರು ಹಾಜರಿದ್ದರು.

ಅದೇ ತೆರನಾಗಿ ನಗರದ ವಿವಿಧೆಡೆ ಹಾಗೂ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಪೂಜ್ಯ ಹವಾ ಮಲ್ಲಿನಾಥ ಮಹಾರಾಜ್ ಮುತ್ಯಾ ಅವರ ಜನ್ಮ ದಿನಾಚರಣೆ ಆಚರಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here