ಕಲಬುರಗಿ: ಕ್ರೀಡೆಗಳು ಜೀವನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ದೇಹ ಮತ್ತು ಸದೃಢವಾಗಲು ಪ್ರತಿಯೊಬ್ಬರೂ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು.ಎಂದು ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂoಡಗಿ ಹೇಳಿದರು.
ಅವರು ರಾವೂರ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಚಿತ್ತಾಪುರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಾಲೆಗಳಲ್ಲಿ ದೈಹಿಕ ಶಿಕ್ಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಿ, ತರಬೇತಿ ನೀಡಿ ಸ್ಪರ್ಧೆಗಳಿಗೆ ಕಳಿಸಿದ್ದೇ ಆದರೆ ಮಕ್ಕಳು ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಹೋಗಲು ಸಾಧ್ಯ. ಬಹಳ ಬೇಜಾರಿನ ಸಂಗತಿ ಎಂದರೆ ಕೆಲವು ಶಾಲೆಗಳಲ್ಲಿ ಮಕ್ಕಳು ಕ್ರೀಡೆ ಎಂದರೆ ಆಸಕ್ತಿ ವಹಿಸುತ್ತಿಲ್ಲ.ಶಾಲೆಗಳು ಮಕ್ಕಳನ್ನು ಕೇವಲ ಓದು ಬರಹಕ್ಕೆ ಸೀಮಿತಗೊಳಿಸದೇ ಅವರನ್ನು ಪತ್ಯೇತರವಾಗಿ ಕ್ರೀಡಾ ಕೂಟಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕ್ರೀಡಾಕೂಟಗಳಲ್ಲಿ ತೀರ್ಪುಗಾರರು ನಿಸ್ಪಕ್ಷಪಾತವಾಗಿ ಆಟಗಳನ್ನು ಆಡಿಸುವ ಮೂಲಕ ನಿಜವಾದ ಪ್ರತಿಭಾವಂತ ಮಕ್ಕಳನ್ನು ಮುಂದಿನ ಹಂತಕ್ಕೆ ಕಲಿಸಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಠಾಳೆ ಕ್ರೀಡೆ ಇಲ್ಲದ ಜೀವನ ಕೀಡೆ ತಿಂದ ಹಣ್ಣಿನoತೆ. ಮೊಬೈಲ್ ಹಾಗೂ ಜoಕ್ ಫುಡ್ ಗಳಿಂದ ವಿದ್ಯಾರ್ಥಿಗಳು ದೈಹಿಕ ಶಕ್ತಿ ಇಲ್ಲದೆ ಕ್ರೀಡೆಗಳಿಂದ ದೂರ ಉಳಿಯುತ್ತಿದ್ದಾರೆ ಎಂದು ಹೇಳಿದರು. ಚಿತ್ತಾಪುರ ವಲಯ ವ್ಯಾಪ್ತಿಯ 500 ಕ್ಕೂ ಹೆಚ್ಚು ಮಕ್ಕಳು ಕ್ರೀಡಾ ಕೂಟದಲ್ಲಿ ಪಾಲ್ಗೊಂಡಿದ್ದರು. ದಿವ್ಯ ಸಾನಿದ್ಯವನ್ನು ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಬಿರಾದಾರ್, ಕ್ಷೇತ್ರ ಸಮನ್ವಯಧಿಕಾರಿ ಮಲ್ಲಿಕಾರ್ಜುನ್ ಸೇಡಂ, ಚನ್ನಬಸಪ್ಪ ಕೊಲ್ಲುರ, ದೇವಿದ್ರರೆಡ್ಡಿ ದುಗನೂರ, ರಾಜೇಂದ್ರ ಪ್ರಸಾದ, ವೀರಭದ್ರಪ್ಪ ಗುರುಮಿಠಕಲ್, ರಮೇಶ್ ಬೆಟಗೇರಿ ಸಂಸ್ಥೆಯ ಚೆನ್ನಣ್ಣ ಬಾಳಿ, ಡಾ. ಗುಂಡಣ್ಣ ಬಾಳಿ, ಅಣ್ಣಾರಾವ ಬಾಳಿ, ಸಿದ್ದಲಿಂಗ ಜ್ಯೋತಿ ವೇದಿಕೆ ಮೇಲಿದ್ದರು.
ಸಿದ್ದಲಿಂಗ ಬಾಳಿ ಕಾರ್ಯಕ್ರಮ ನಿರೂಪಿಸಿದರು. ಈರಣ್ಣ ಹಳ್ಳಿ ಪ್ರಾರ್ಥಿಸಿದರು, ಡಾ. ಗುಂಡಣ್ಣ ಬಾಳಿ ಸ್ವಾಗತಿಸಿದರು. ಕೆ. ಐ. ಬಡಿಗೇರ್ ವಂದಿಸಿದರು. ಮೇಘಾ ಕ್ರೀಡಾ ಪ್ರಮಾಣ ವಚನ ಬೋಧಿಸಿದಳು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…