ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾವಂತ ನಿರುದ್ಯೋಗಿ ಯುವಕ/ಯುವತಿಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಉದ್ಯಮಶೀಲತಾಭಿವೃದ್ದಿ ತರಬೇತಿ ನೀಡುತ್ತಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್ ಅವರು ಹೇಳಿದರು.
ಮಂಗಳವಾರ ಇಲ್ಲಿನ ಜಿಲ್ಲಾ ವಿಜ್ಞಾನ ಕೇಂದ್ರ ಟ್ಯಾಂಕ್ ಬಂಡ್ ರಸ್ತೆ ಸಾರ್ವಜನಿಕ ಉದ್ಯಾನವನ್ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕೌಶಲ್ಯಾಭಿವೃದ್ಧಿ, ಕೇಂದ್ರ (ಸಿಡಾಕ್) ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಉದ್ಯೋಗ ಅವಿಷ್ಕಾರ ಯೋಜನೆ ಅಡಿಯಲ್ಲಿ ಕಂಪ್ಯೂಟರ್ ಹಾರ್ಡವೇರ್ ಅನದ ನೆಟವರ್ಕಿಂಗ್ ಹಾಗೂ ಬ್ಯೂಟಿ ಪಾರ್ಲರ್ ಮ್ಯಾನೇಜಮೆಂಟ್ ಬಗ್ಗೆ ೩೦ ದಿನಗಳ ವಿಷಯಾಧಾರಿತ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮವನ್ನು ಉದ್ಪಾಟಿಸಿ ಕಲಿಕಾ ಸಾಮಾಗ್ರಿಗಳ ಬಿಡಗಡೆ ಹಾಗೂ ಶಿಬಿರಾರ್ಥಿಗಳಿಗೆ ವಿತರಣೆ ಮಾಡಿ ಮಾತನಾಡಿದರು.
ಸ್ವ-ಉದ್ಯೋಗ/ಉದ್ಯೊಮ ಸ್ಪಾಪಿಸಲು ಮುಂದೆ ಬರುವ ಹಾಗೂ ಬಯಸುವ ಆಸಕ್ತರಿಗೆ ಬೆಂಬಲದ ಸಹಾಯ ಹಸ್ತ ನೀಡುವ ಉದ್ದೇಶ ಕೆ ಕೆ ಆರ್ ಡಿ ಬಿ ಹಾಗೂ ಸಿಡಾಕ್ ಯೋಜನೆ ರೂಪಿಸಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಮಕ್ಕಳಿಗೆ ಈ ಯೋಜನೆ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಬಿ.ಎ, ಬಿ.ಕಾಂ ಮತ್ತು ಬಿ.ಎಸ್.ಸಿ ಕಷ್ಟಪಟ್ಟು ಕಲಿಸಿ ಉತ್ತಮವಾದ ಬದುಕನ್ನು ಕಟ್ಟಿಕೋಳ್ಳಲ್ಲಿ ಎಂದು ತಂದೆ-ತಾಯಿ ಆಸೆ ಪಡುತ್ತಾರೆ. ಅವರ ಆಸೆಗೆ ಪೂರಕವಾಗಿ ನಾವು ಕೆಲಸ ಮಾಡುತ್ತೇವೆ. ಅದನ್ನು ಯುವಕರು ಶ್ರದ್ದೆಯಿಂದ ಕಲಿಯಬೇಕು ಎಂದು ಕರೆ ನೀಡಿದರು.
ಜಿಲ್ಲೆಯಲ್ಲಿರುವ ಜಯದೇವ ಆಸ್ಪತ್ರೆ ಮತ್ತು ತಾಯಿ ಮಕ್ಕಳ ಕಾರ್ಯಕ್ರಮ ಹೀಗೆ ನಮ್ಮ ಸರಕಾರ ಬಂದ ನಂತರ ಅನೇಕ ಪ್ರಗತಿಪರ ಯೋಜನೆಗಳನ್ನು ಮಾಡುತ್ತಿದ್ದೇವೆ. ಅದೇ ರೀತಿ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಪಾಲೈಟ್ ಕಾರ್ಯಕ್ರಮದಲ್ಲಿ ಕಲಿಕೆ ಜತೆಗೆ ಕೌಶಲ್ಯ ಕಾರ್ಯಕ್ರಮದ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ ಎಂದರು.
ಅಕ್ಷರ ಆವಿಷ್ಕಾರ ಯೋಜನೆಯಡಿ ವಿವಿಧ ತರಬೇತಿ ನೀಡಿ ಯುವಕರನ್ನು ಸ್ವಯಂ ಉದ್ಯೋಗಿಗಳಾಗಿ ಮಾಡಲಾಗುವುದು. ಈಗಾಗಲೇ, ರಾಜ್ಯ ಯುವನಿಧಿ ಯೋಜನೆ ಮೂಲಕ ಒಟ್ಟು ೩೮ ಕೋಟಿ ೫೪ ಲಕ್ಷ ಬಿಡುಗಡೆ ಮಾಡಿದೆ. ಪದವಿ ನಿರುದ್ಯೋಗಿ ಯುವಕರಿಗೆ 3000 ಸಾವಿರ ಹಾಗೂ ಡಿಪ್ಲೋಮಾ ಪದವಿ ನಿರುದ್ಯೋಗಿ ಯುವಕರಿಗೆ 1500 ರು. ಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಉದ್ಯಮಶೀಲ ಸಾಮರ್ಥ್ಯಗಳನ್ನು ಹರಿತಗೊಳಿಸಲು ಅವಕಾಶಗಳನ್ನು ಸೃಷ್ಟಿಸುವದು. ಯೋಜನೆಯ ಕಾರ್ಯಸಾಧ್ಯತೆ ಹಾಗೂ ಸ್ಥಿರತೆಗೆ ಸಂಬಂಧಿಸಿದ ಮುಖ್ಯಾಂಶಗಳು, ಹಣಕಾಸಿನ ಅಂಶಗಳು ಸಣ್ಣ ಉದ್ಯಮವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವ ಬಗ್ಗೆ ತಿಳುವಳಿಕೆಯನ್ನು ನೀಡುವದು. ಮಾರಾಟ ಹಾಗೂ ಮಾರುಕಟ್ಟೆ ಕೌಶಲ್ಯ ಹಾಗೂ ತಂತ್ರಗಳನ್ನು ತಿಳಿಸುವುದು. ವರ್ಗದ ಭೋದನೆ ಹಾಗೂ ವಿಚಾರ ವಿನಿಮಯ ಮಾಡುವುದು.
ಉದ್ಯಮಶೀಲತೆ ಹುಟ್ಟಿನಿಂದ ಮಾತ್ರವಲ್ಲ, ಶಿಕ್ಷಣ-ತರಬೇತಿ-ಬೆಂಬಲಸೇವೆ ಮೂಲಕ ಉದ್ಯಮಶೀಲರನ್ನು ಸೃಷ್ಠಿಸಹುದು ಎನ್ನುವ ತತ್ವದ ಮೇಲೆ ಸೂಕ್ತ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಶಿಸ್ತುಬದ್ಧ ಉದ್ಯಮಶೀಲತಾ ತರಬೇತಿ ಹಾಗೂ ಬೆಂಬಲ ಸೇವೆ ನೀಡಿದ್ದಲ್ಲಿ ಉದ್ಯಮಶೀಲ (ಉದ್ಯೋಗದಾತ)ರನ್ನು ಸೃಷ್ಠಿಸಬಹುದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು ಅವರು ಮಾತನಾಡಿ, ಪ್ರತಿ ಜಿಲ್ಲೆಯಲ್ಲಿ ಸಿಡಾಕ್ ಕಛೇರಿ ಇದೆ ಆದರೆ ಕೇಂದ್ರ ಕಛೇರಿ ಇರುವುದು ಧಾರವಾಡದಲ್ಲಿ ಪ್ರಸ್ತುತದಲ್ಲಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿಯೇ ಕುಳಿತ ಯುವಕ/ಯುವತಿಯವರು ಈ ಯೋಜನೆ ಅಡಿಯಲ್ಲಿ ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿಕೊಳ್ಳಲು ನಿಮಗೆ ಆಧಾರ ಸ್ತಂಭವಾಗಿ ಸಿಡಾಕ್ ನಿಲ್ಲುತ್ತದೆ. ಎಂದರು.
ವಿದ್ಯಾವಂತರಿಗಾಗಿ ೩೫ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಅದರಲ್ಲಿ ಪ್ರತಿ ಜಿಲ್ಲೆಯಲ್ಲಿ ಐದು ಕಾರ್ಯಕ್ರಮ ಹಾಗೂ ಐದು ಬ್ಯಾಚ್ ಮಾಡಲಾಗಿದೆ. ತರಬೇತಿ ಹಮ್ಮಿಕೊಂಡ ತಾಲೂಕುಗಳು ಕಲಬುರಗಿ, ಆಳಂದ, ಜೇವರ್ಗಿ, ಯಡ್ರಾಮಿ ಮತ್ತು ಸೇಡಂ ಹಾಗೂ ತರಬೇತಿ ಕಾರ್ಯಕ್ರಮಗಳು ಕಂಪ್ಯೂಟರ್ ಹಾರ್ಡ್ವೇರ್ & ನೆಟ್ವರ್ಕಿಂಗ್, ಮೋಬೈಲ್ ಫೋನ್ಸ್ ರಿಪರ‍್ಸ್ & ಸರ್ವೀಸಿಂಗ್, ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್(ಮಹಿಳೆಯರಿಗೆ ಮಾತ್ರ), ಎಲೆಕ್ಟ್ರಿಕಲ್ ಹೋಮ್ ಅಪ್ಲೈಯನ್ಸ್ ರಿಪರ‍್ಸ್ & ಸರ್ವಿಸಿಂಗ್ ಮತ್ತು ಫ್ಯಾಷನ್ ಡಿಸೈನಿಂಗ್ (ಮಹಿಳೆಯರಿಗೆ ಮಾತ್ರ) ಈ ಯೋಜನೆ ಎಲ್ಲರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಧಾರವಾಡದ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ನಿರ್ದೇಶಕ ಬಿ.ಎಂ. ಗೋಟೂರ ಅವರು ಮಾತನಾಡಿ,ನಾಲ್ಕು ಜನರ ಮುಂದೆ ಹೋಗಿ ಕೆಲಸ ಮಾಡುವುದಕ್ಕಿಂತ ತಾವೇ ಸ್ವಾವಲಂಬಿ ಜೀವನವನ್ನು ರೂಪಿಸಿಕೊಳ್ಳುವುದು ಎಷ್ಟು ಉತ್ತಮ ಎಂದು ಕಂಪ್ಯೂಟರನ ಒಂದು ಡಿಟಿಪಿ ಇಟ್ಟುಕೊಳ್ಳಲು ಬಹಳ ಬಡವಾಳ ಬೇಕಾಗಿಲ್ಲ ಎಂದೂ ಹಾಗೂ ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್ ಮಾಡಲು ಒಂದು ಮದುವೆಯಲ್ಲಿ ಮಧು ಮಗಳಿಗೆ ಸಿಂಗಾರ ಮಾಡಲು ಒಂದು ದಿನಕ್ಕೆ ೨೫ ರಿಂದ ೩೦ ಸಾವಿರ ದವರೆಗೆ ಫೀಜು ಇದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಮಹಾನಂದಾ ಅವರು ಹಾಡಿದರು. ಸಿಡಾಕ್ ಸಂಪನ್ಮೂಲ ವ್ಯಕ್ತಿಗಳು ಸೈಯದ್ ಆಷ್ಫಕ್ ಅಹ್ಮದ್ ಅವರು ನಿರೂಪಣೆ ಮಾಡಿದರು. ಅಧಿಕಾರಿಗಳು ಗಣ್ಯರು ಹಾಗೂ ನಿರುದ್ಯೋಗಿ ಮಹಿಳೆಯರು ಜನರು ಸಾರ್ವಜನಿಕರು ಭಾಗವಹಿಸಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…