ಅಕ್ಕಮಹಾದೇವಿಯು ಇಂದಿನ ಮಹಿಳೆಯರಿಗೆ ಆದರ್ಶಪ್ರಾಯ

ಶಹಾಬಾದ: ಧೈರ್ಯ ಮತ್ತು ಆತ್ಮವಿಶ್ವಾಸಕ್ಕೆ ಅಕ್ಕಮಹಾದೇವಿಯು ಇಂದಿನ ಮಹಿಳೆಯರಿಗೆ ಆದರ್ಶಪ್ರಾಯ ಎಂದು ಶಿರಗುಪ್ಪಾದ ಬಸವ ಚಿಂತಕರಾದ ಮಹಾಂತೇಶ ಕುಂಬಾರ ಹೇಳಿದರು.

ಅವರು ಬುಧವಾರ ನಗರದ ಹಳೆಶಹಾಬಾದನ ಶ್ರೀ ವೀರಭದ್ರೇಶ್ವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಲಾದ ವೀರ ವಿರಾಗಿಣಿ ಅಕ್ಕಮಹಾದೇವಿಯವರ ಪ್ರವಚನ ಕಾರ್ಯಕ್ರಮದ ಪ್ರವಚನಕಾರರಾಗಿ ಮಾತನಾಡಿದರು.

ಅಕ್ಕನ ಜೀವನ ಘಟ್ಟಗಳು ಹೇಳುವದಾದರೆ ಅದೊಂದು ಕಠಿಣ ಸಾಧನೆಯ ದಾರಿ.ಉಡುತಡಿಯಲ್ಲಿ ಜನಿಸಿದ ಅಕ್ಕ ಮಹಾದೇವಿ ಬಾಲ್ಯದಿಂದಲೂ ಶಿವಭಕ್ತೆಯಾಗಿದ್ದಳು.ಲಿಂಗವನ್ನೇ ಪತಿಯಾಗಿ ಭಾವಿಸಿ ಮಾನಸಿಕವಾಗಿ ತನ್ನ ಆರಾಧ್ಯದೈವ ಚೆನ್ನಮಲ್ಲಿಕಾರ್ಜುನನ್ನೇ ಮದುವೆಯಾಗಿರುತ್ತಾಳೆ.ಆದರೆ ಆಕೆಯ ರೂಪಕ್ಕೆ ಮಾರು ಹೋದ ಕೌಶಿಕ ರಾಜ ಆಕೆಯನ್ನೇ ಮದುವೆಯಾಗಲು ಬಯಸುತ್ತಾನೆ.

ಕುಟುಂಬಸ್ಥರು ಅಕ್ಕಮಹಾದೇವಿಯನ್ನು ಕೊಡಲು ನಿರಾಕರಿಸುತ್ತಾರೆ. ಆದರೆ ಮದುವೆಯನ್ನು ನಿರಾಕರಿಸಿದರೆ ತನ್ನ ಕುಟುಂಬಕ್ಕೆ ಒದಗಬಹುದಾದ ಆಪತ್ತನ್ನು ಕಂಡು ಮಹಾದೇವಿ ಶಿವಧ್ಯಾನಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕು ಎಂಬ ಷರತ್ತಿನೊಂದಿಗೆ ಅರಮನೆಗೆ ಹೋಗುತ್ತಾಳೆ.ಕೌಶಿಕ ರಾಜ ಆ ಷರತ್ತನ್ನು ಮುರಿದು, ಬಲವಂತಕ್ಕೆ ಇಳಿಸಿದಾಗ ಮಹಾದೇವಿ ತೋರಿದ ಪ್ರತಿಭಟನೆಯ ರೀತಿ ಇಂದಿಗೂ ಲೋಕವನ್ನು ಬೆಚ್ಚಿ ಬೀಳಿಸುತ್ತದೆ.ಇಂದಿಗೂ ಯಾವ ಹೆಣ್ಣು ಈ ರೀತಿಯ ಕಷ್ಟಕ್ಕೆ ಒಳಗಾಗಬಾರದು.

ಅಕ್ಕ ಕಷ್ಟದಲ್ಲಿಯೇ ತನ್ನ ಮನೋಬಲವನ್ನು ಹೆಚ್ಚಿಸಿಕೊಂಡು ಹೋರಾಡಿದ ಪರಿ ಮಾತ್ರ ಅದ್ಭುತ. ತಕ್ಷಣವೇ ಬಟ್ಟೆಯನ್ನು ಬಿಸಾಕಿ ದಿಗಂಬರೆಯಾಗಿ,ನಂತರ ಕೇಶಾಂಬರೆಯಾಗಿ ಅಲ್ಲಿಂದ ಹೊರಬರುತ್ತಲೇ ಜೀವನದಲ್ಲಿ ಅನುಭವಿಸಿದ ಕಷ್ಟವನ್ನು ವಚನಗಳ ಮೂಲಕ ಸಾರುತ್ತಾಳೆ.ಮುಂದೆ ಅನುಭವ ಮಂಟಪಕ್ಕೆ ಕಡೆಗೆ ಸಾಗುತ್ತಾಳೆ.ಆದರೆ ಅಕ್ಕಮಹಾದೇವಿ ಇಡೀ ಸ್ತ್ರಿ ಕುಲಕ್ಕೆ ಮಾದರಿ.ಅವಳ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಎಲ್ಲರೂ ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಸಾನಿಧ್ಯ ವಹಿಸಿ ಮಾತನಾಡಿದ ಮುಗುಳನಾಗಾವಿಯ ಸಿದ್ದಲಿಂಗ ಶಿವಾಚಾರ್ಯರು, 12ನೇ ಶತಮಾನದ ಅಕ್ಕಮಹಾದೇವಿ ಪ್ರವಚನವೆಂದರೆ ಇತಿಹಾಸ.ಇತಿ ಎಂದರೆ ಹೀಗಿತ್ತು ಎಂದು ತಿಳಿಸುತ್ತದೆ.ಆದರೆ ಪುರಾಣ ಎಂದರೆ ಅದರಲ್ಲಿ ಹೀಗಿತ್ತು ಎಂದು ಹೇಳುವುದು ಕಷ್ಟ. ಶರಣರ ಆದರ್ಶದಂತೆ ಸರಳಾಗಿ ಬದುಕುವ, ಸತ್ಯವನ್ನು ಹೇಳುವ, ಪರೋಪಕಾರ ಬುದ್ಧಿಯನ್ನು ಮೈಗೂಡಿಸಿಕೊಳ್ಳುವ, ಪ್ರಾಮಾಣಿಕತೆಯನ್ನು ಮೆರೆಯುವಂತಹ ಜೀವನ ಮೌಲ್ಯಗಳನ್ನು ರೂಢಿಸಿಕೊಂಡರೆ ಸಾಮಾನ್ಯರೂ ಅಸಾಮಾನ್ಯರಾಗಬಹುದು. ಇದು ಕೇವಲ ಒಬ್ಬ ಬಸವಣ್ಣ, ಅಕ್ಕಮಹಾದೇವಿ, ಮಾತ್ರ ಸೀಮಿತವಲ್ಲ.ಮನಸ್ಸು ಮಾಡಿದರೆ ಪ್ರತಿಯೊಬ್ಬರೂ ಒಬ್ಬೊಬ್ಬ ಆದರ್ಶ ಪುರುಷರಾಗಬಹುದು ಎಂದು ಹೇಳಿದರು.

ಮುಖಂಡರಾದ ಗೋರಖನಾಥ ಶಾಖಾಪೂರ, ಉದ್ಯಮಿ ಬೀಮರಾವ ಸುಗೂರ, ಮುಖಂಡರಾದ ಗುರುರಾಜ ಮಾಲಿಪಾಟೀಲ, ವ್ಯಾಪಾರಸ್ಥರಾದ ನರೇಂದ್ರ ವರ್ಮಾಅ.ಭಾ.ವೀ.ಮ ಹಳೆಶಹಾಬಾದ ಅಧ್ಯಕ್ಷ ಮಲ್ಲಿಕಾರ್ಜುನ ಚಂದನಕೇರಿ,ನಗರಸಭೆ ಸದಸ್ಯ ಮಲ್ಲಿಕಾರ್ಜುನ ವಾಲಿ ವೇದಿಕೆಯ ಮೇಲಿದ್ದರು, ಶ್ರೀ ವೀರಭದ್ರೇಶ್ವರ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಬಸವರಾಜ ತರನಳ್ಳಿ ಅಧ್ಯಕ್ಷತೆ ವಹಿಸಿದ್ದರು.

emedialine

Recent Posts

ಆಳಂದ: ಗುಂಡಿಕ್ಕಿ ಮಾಜಿ ಗ್ರಾಮ ಪಂಚಾಯತಿ ಸದಸ್ಯನ ಹತ್ಯೆ

ಅಳಂದ: ಮಾಜಿ ಗ್ರಾಮ ಪಂಚಾಯತಿ ಸದಸ್ಯ ಓರ್ವನನ್ನು ಗುಂಡಿಕ್ಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಖಾನಾಪುರ ಜಿಟ್ಗಾ ರಸ್ತೆಯಲ್ಲಿ…

2 hours ago

ಕಲಬುರಗಿಯಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಜಾಥಾ

ಕಲಬುರಗಿ: ಸರಕಾರಿ ನೌಕರರೆಂದು ಪರಿಗಣಿಸಿ ಸಮಾಜಿಕ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಎರಡು…

2 hours ago

ಯಾದಗಿರಿ: APD ಸಂಸ್ಥೆಯಿಂದ ವಿಶೇಷ ಚೇತನ, ವಯಸ್ಕರಿಗೆ ಆರೋಗ್ಯ ಮೇಳ

ಯಾದಗಿರಿ: ಇಲ್ಲಿನ ಸ್ಟೇಷನ್ ಏರಿಯಾ ಲಾಡೀಸ್ ಗಲ್ಲಿ ಅಂಗನವಾಡಿ ಕೇಂದ್ರದಲ್ಲಿ ದಿ ಅಸೋಸಿಯೇಷನ್ ಆಫ ಪೀಪಲ್ ವಿಥ್ ಡಿಸೇಬಲಿಟಿ (ಎ.ಪಿ.ಡಿ)…

3 hours ago

ನಾಳಿನ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನ್ಯಾಯವಾದಿ ಕೋರಿಕೆ

ಕಲಬುರಗಿ: ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15ರಂದು ಸರ್ಕಾರ ಹಮ್ಮಿಕೊಂಡಿರುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಎಲ್ಲ ನ್ಯಾಯವಾದಿಗಳು ಹೆಚ್ಚಿನ…

12 hours ago

ಕೊಪ್ಪಳದಲ್ಲಿ ವಧು ವರರ ಸಮಾವೇಶ, ಪ್ರತಿಭಾ ಪುರಸ್ಕಾರ

ಕಲಬುರಗಿ: ಎಲ್ಲಾ ಜಾತಿಯನ್ನು ಗೌರವಿಸು, ನಿನ್ನ ಜಾತಿಯನ್ನು ಆರಾಧಿಸು ಎಂಬ ಭಾವನೆಯೊಂದಿಗೆ ಕೊಪ್ಪಳ ಜಿಲ್ಲಾ ಗಾಣಿಗ ಸಮಾಜ, ಡಾ.ಚೌಧರಿ ಮತ್ತು…

12 hours ago

ಪ್ರಜಾಪ್ರಭುತ್ವ ದಿನಾಚರಣೆ ಹಿನ್ನಲೆ ಮಾನವ ಸರಪಳಿ ಯಶಸ್ವಿಗೊಳಿಸಿ; ಜಗದೀಶ ಚೌರ್

ಶಹಾಬಾದ: ಇದೆ ಸೆಪ್ಟೆಂಬರ್ 15ರಂದು ಕರ್ನಾಟಕ ಸರ್ಕಾರದಿಂದ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನಲೆಯಲ್ಲಿ ಬೀದರ ಜಿಲ್ಲೆಯಿಂದ ಚಾಮರಾಜನಗರದವರೆಗೆ ರಾಜ್ಯದ್ಯಾದಂತ ಏಕಕಾಲಕ್ಕೆ ದಾಖಲೆ…

12 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420