ಸುರಪುರ: ಕಲಬುರ್ಗಿ ಕಡೆಗೆ ಹೋಗುವ ಸಗರ ನಾಡು ಬಸ್‍ಗಳ ಸಂಖ್ಯೆ ಹೆಚ್ಚಿಸುವಂತೆ ಆಗ್ರಹಿಸಿ ನಗರದ ಬಸ್ ನಿಲ್ದಾಣದಲ್ಲಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ,ಸುರಪುರ ದಿಂದ ಕಲಬುರ್ಗಿಗೆ ಜನರು ಹೋಗಲು ಹೆಚ್ಚಿನ ಬಸ್‍ಗಳಿಲ್ಲದೆ ಪರದಾಡುವಂತಾಗಿದೆ.ಕೂಡಲೇ ಸಗರ ನಾಡು ಬಸ್‍ಗಳ ಸಂಖ್ಯೆ ಹೆಚ್ಚಿಸ ಬೇಕು.ರಾತ್ರಿ 9 ಗಂಟೆ ನಂತರ ಹೋಗುವ ಬೆಂಗಳೂರ ಮತ್ತಿತರೆ ಕಡೆಗೆ ಹೋಗುವ ಬಸ್‍ಗಳು ಬೈಪಾಸ್ ಮೂಲಕ ಹೋಗುತ್ತಿದ್ದು ಎಲ್ಲಾ ಬಸ್‍ಗಳನ್ನು ಬಸ್ ನಿಲ್ದಾಣಕ್ಕೆ ಬಂದು ಹೋಗಲು ಕ್ರಮ ಕೈಗೊಳ್ಳ ಬೇಕು.ಬಸ್ ನಿಲ್ದಾಣದಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳ ಬೇಕು.ಬಸ್ ನಿಲ್ದಾಣದಲ್ಲಿ ಶೌಚಾಲಯಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳ ಬೇಕು.ಬೊಮ್ಮನಹಳ್ಳಿ ಟಿ ಗ್ರಾಮದ ಮೂಲಕ ಪೇಠ ಅಮ್ಮಾಪುರ ಕಡೆಗೆ ಹೋಗಲು ಬಸ್ ಆರಂಭಿಸ ಬೇಕು.ತಿಂಥಣಿ ಗ್ರಾಮದ ಮೌನೇಶ್ವರ ದೇವಸ್ಥಾನದ ವರೆಗೆ ಬಸ್‍ಗಳು ಹೋಗಲು ಕ್ರಮವಹಿಸ ಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ಜಿಲ್ಲಾಧಿಕಾರಿಗಳ ಮೂಲಕ ದೂರವಾಣಿಯಲ್ಲಿ ಮಾತನಾಡಿ,ಎಲ್ಲಾ ಬೇಡಿಕೆಗಳ ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಬಸ್ ಡಿಪೋ ಮ್ಯಾನೇಜರ್‍ಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಬಸ್ ನಿಲ್ದಾಣದ ನಿಯಂತ್ರಕರು ಹಾಗೂ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ರಾಜು ದರಬಾರಿ,ತಾ.ಅಧ್ಯಕ್ಷ ಕೇಶವ ನಾಯಕ,ಕಾರ್ಯದರ್ಶಿ ಹಣಮಂತ,ಜಿ.ಕಾರ್ಯದರ್ಶಿ ದವಲಸಾಬ್,ಕನಕಾಚಲ ಜಾಗೀರಾದ ಯಡಿಯಾಪೂರ,ಶಿವು ಹೆಚ್,ಯಂಕಪ್ಪ,ದೇವಿಂದ್ರಪ್ಪ,ಅಭಿ ಸುರಪುರ,ಸಂಜಿವಪ್ಪ,ಹಣಮಂತ,ಮಾನಯ್ಯ ಕವಲ್ದಾರ್,ವೆಂಕೋಬ ದೊರೆ,ಸಂಜೀವ ನಾಯಕ,ಗುರುನಾಥರೆಡ್ಡಿ ಸುರಪುರ ಸೇರಿದಂತೆ ಅನೇಕು ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…