ಕಲಬುರಗಿ: ಶ್ರೀ ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ನೌಕರರ ಪತ್ತಿನ ಸಹಕಾರಿ ಸಂಘದ ಗದಗಿನ 23ನೇಯ ವಾರ್ಷಿಕ ಮಹಾಸಭೆ ನಗರದ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮಕ್ಕೆ ಸಂಸ್ಥಾಪಕ ಅಧ್ಯಕ್ಷರಾದ ಸೇವಾರತ್ನ, ಶಿಕ್ಷಣ ತಜ್ಞ ಪ್ರೊಫೆಸರ್ ಎಸ್. ಎಸ್. ಪಟ್ಟಣಶೆಟ್ಟಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕಳೆದ ವರ್ಷ ಇದ್ದ ಸದಸ್ಯರಿಗಿಂತ ಈ ವರ್ಷದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗುತ್ತಾ ಸಾಗುವುದನ್ನು ಗಮನಿಸಿದರೆ ಸದಸ್ಯರ ನಂಬಿಕೆ ಹಾಗೂ ವಿಶ್ವಾಸವು ಸಂಘದ ಮೇಲೆ ಅಧಿಕವಾಗಿರುವುದನ್ನು ಪ್ರತಿಬಿಂಭಿಸುತ್ತದೆ. ಸಂಸ್ಥೆಯ ನೌಕರರ ಸಹಕಾರದಿಂದ ನಮ್ಮ ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿ ಹೊಂದಿರುವುದು ಅಭಿನಂದನೀಯವಾದ ವಿಷಯವಾಗಿದೆ ಎಂದರು.

ಈ ವಿಷಯದ ಸಲುವಾಗಿ ನಾನು ಸಂಘದ ಆಡಳಿತ ಮಂಡಳಿ ಪರವಾಗಿ ಸರ್ವ ಸದಸ್ಯರಿಗೂ ಹೃತ್ತೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ನಮ್ಮ ಸಹಕಾರ ಸಂಘಕ್ಕೆ ಪ್ರೇರಕ ಶಕ್ತಿ ತ್ರಿವಿಧ ದಾಸೋಹ ಮೂರ್ತಿಗಳಾದ ಪೂಜ್ಯ ಲಿಂ. ಶ್ರೀ ಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಆಶೀರ್ವಾದವಿದ್ದು ಪೂಜ್ಯರು ಲಿಂಗೈಕ್ಯ ಆದ ನಂತರದ ಅವಧಿಯಲ್ಲಿ ಈಗಿನ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ॥ ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಸಂಘವು ದಿನದಿಂದ ದಿನಕ್ಕೆ ಪ್ರಗತಿ ಪಥದಲ್ಲಿ ಸಾಗುತ್ತಿದೆ, ಸಂಘದ ಎಲ್ಲಾ ವ್ಯವಹಾರವು ಲಾಭದಾಯಕವಾಗಿ, ಸೇವಾದಾಯಕವಾಗಿ, ತೃಪ್ತಿದಾಯಕವಾಗಿ ಹಾಗೂ ಪಾರದರ್ಶಕವಾಗಿದೆ ಎಂದು ಗುರುಸಾರ್ವಭೌಮ, ಸೇವಾರತ್ನ ಎಸ್ ಎಸ್ ಪಟ್ಟಣ ಶೆಟ್ಟರು ಹೇಳಿದರು.

ಈ ಸಂದರ್ಭದಲ್ಲಿ ನೌಕರ ಸಂಘದ, ಶಂಕರ ನಿಂಗಪ್ಪ ಕಲ್ಲಿಗನೂರ, ಮಲಕಪ್ಪ ಶಿವಪ್ಪ ಅಂಗಡಿ, ಶಿವರಾಚಯ್ಯ ಎಸ್.ಎಂ., ಶಿವಪ್ಪ ಬಸಪ್ಪ ಹೂಗಾರ, ಗುರುರಾಜ ಮೇಲಪ್ಪ ಕೊಟ್ಯಾಳ, ಡಾ. ಶರಣಬಸಪ್ಪ ಶ್ರೀಶೈಲಪ್ಪ ಅಂಗಡಿ, ವಿಜಯಕುಮಾರ ಶಿವಪ್ಪ ಮಾಲಗಿತ್ತಿ, ಕೊಟ್ರಪ್ಪ ದಾನಪ್ಪ ಮೆಣಸಿನಕಾಯಿ, ಮಂಜುನಾಥ ಕಳಕಪ್ಪ ಕಂಡಕಿ, ಯೊಗೇಶಕುಮಾರ ಶಿವಪ್ಪ ಮತ್ತೂರ , ಲಚಮಪ್ಪ ರಾಮಪ್ಪ ಬಸಾಪೂರ, ಚನ್ನಪ್ಪ ಶರಣಪ್ಪ ದೇಸಾಯಿ, ಹನಮಂತಪ್ಪ ಎನ್. ಕೆಲೂರ, ಉಮೇಶ ಶರಣಪ್ಪ ಉಪ್ಪಿನಬೆಟಗೇರಿ, ಮಂಜುನಾಥ ಬಾಲಚಂದ್ರ ಉತ್ತರಕರ, ಬಸವರಾಜ ಮಲ್ಲಪ್ಪ ಗೆದಗೇರಿ, ಸರಸ್ವತಿ ಬಸಪ್ಪ ಗಾಣಿಗೇರ, ಅನ್ನಪೂರ್ಣಾ ಭೀಮಪ್ಪ ಬೇವಿನಕಟ್ಟಿ., ಪ್ರೊಫೆಸರ್ ಎಸ್.ಎಸ್. ಪಟ್ಟಣ ಶೆಟ್ಟರ್ ಶಿಷ್ಯ ಬಳಗ, ಅಭಿಮಾನಿ ಬಳಗ ಸೇರಿ ಮುಂತಾದವರು ಉಪಸ್ಥಿತರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

14 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

17 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

23 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

23 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

24 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago