ಕಲಬುರಗಿ: ಮನುಷ್ಯನ ಬದುಕಿಗೆ ಉತ್ಸವ, ಹಬ್ಬ ಹರಿದಿನಗಳು ಅವಶ್ಯವಾಗಿದ್ದು, ಮನುಷ್ಯನಲ್ಲಿ ಸಂಸ್ಕೃತಿ ಬಿತ್ತಿ ಸಹಬಾಳ್ವೆ ಮೂಡಿಸಿ ಎಲ್ಲರೂ ಒಂದಾಗಿ ಬದುಕುವುದನ್ನು ಹಬ್ಬಗಳು ಕಲಿಸಿಕೊಡುತ್ತವೆ ಎಂದು ಶ್ರೀನಿವಾಸ ಸರಡಗಿಯ ಪೂಜ್ಯ ಶ್ರೀ ಡಾ.ರೇವಣಸಿದ್ದ ಶಿವಾಚಾರ್ಯರು ನುಡಿದರು.
ರಾಜಾಪೂರ ಬಡಾವಣೆಯ ಪ್ರಶಾಂತ ನಗರ (ಎ) ದಲ್ಲಿರುವ ೧೨ ಜೋರ್ತಿಲಿಂಗ ದೇವಸ್ಥಾನದಲ್ಲಿ ದಸರಾ ಮಹೋತ್ಸವ ನಿಮಿತ್ಯವಾಗಿ ಆಯೋಜಿಸಿದ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಮನುಷ್ಯನಲ್ಲಿ ಇಂದು ಸ್ವಾರ್ಥ ಹೆಚ್ಚಾಗಿ ಎಲ್ಲೆಲ್ಲೂ ಅಶಾಂತಿ ತಾಂಡವವಾಡುತ್ತಿದ್ದು, ಇದನ್ನು ಹೋಗಲಾಡಿಸಿ, ದಯೆ, ಕರುಣೆ, ನೆಮ್ಮದಿಯ ಬದುಕಿಗಾಗಿ ಆಚರಣೆಗಳು ಅವಶ್ಯವಾಗಿ ಅನುಕರಣೆ ಮಾಡಬೇಕಾಗಿದೆ ಎಂದು ನುಡಿದರು.
ಸಮಾರಂಭ ಉದ್ಘಾಟಿಸಿದ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ದತ್ತಾತ್ರೇಯ.ಸಿ. ಪಾಟೀಲ ರೇವೂರ ರವರು ಮಾತನಾಡಿ ದಸರಾ ಹಬ್ಬ ಅತ್ಯಂತ ಮಹತ್ವದ ಹಬ್ಬವಾಗಿದ್ದು ಎಲ್ಲರೂ ಒಂದೆ ಕುಟುಂಬದವರಂತೆ ಸಂತೋಷದಿಂದ ಹಬ್ಬ ಮಾಡುವುದು ಬಹು ವಿಶೇಷವಾಗಿದೆ ಎಂದರು. ಯುವ ಜನತೆಗೆ ತಮ್ಮ ಪುರಾತನ ಸಂಸ್ಕೃತಿಯ ಹಬ್ಬಗಳ ಮಹತ್ವ ತಿಳಿಸಿಕೊಡುವುದು ಅಗತ್ಯವಾಗಿದೆ ಎಂದು ಹೇಳಿದರು.
ವೇದಿಕೆಯ ಮೇಲೆ ಮಹಾನಗರ ಪಾಲಿಕೆ ಸದಸ್ಯರಾದ ವೀರಣ್ಣ ಹೊನ್ನಳ್ಳಿ, ಮುಖಂಡರಾದ ಶಿವಾನಂದ ಹುಲಿ, ವೀರಶೈವ ಮಹಾಸಭೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗಲಿಂಗಯ್ಯ ಮಠಪತಿ, ಎಂ.ಎಸ್.ಪಾಟೀಲ ನರಿಬೋಳ ಉಪಸ್ಥಿತರಿದ್ದರು.
ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷರಾದ ರಾಜಶೇಖರ ಗೂಗಲ್ ಅದ್ಯಕ್ಷತೆ ವಹಿಸಿದ್ದರು. ಹಬ್ಬದ ನಿಮಿತ್ಯವಾಗಿ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮನ ವಿತರಿಸಲಾಯಿತು. ಮಹಿಳೆಯರಿಂದ ದಾಂಡಿಯಾ, ಕೋಲಾಟ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ದೇವಸ್ಥಾನದ ಪ್ರಧಾನ ಅರ್ಚಕರಾದ ಪುರೋಹಿತ ರತ್ನ ಶ್ರೀ ಮಹೇಶ್ವರ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಸುರೇಶ ಜಾಧವ ಸ್ವಾಗತಿಸಿದರು. ಶ್ರೀಮತಿ ನೀಲಾ ಪಾಟೀಲ ನಿರೂಪಿಸಿದರು, ಕಾರ್ಯಕ್ರಮ ಆಯೋಜಕರಾದ ಶ್ರೀಮತಿ ಪುಷ್ಪಾ ವಿಶ್ವನಾಥ ಅವಂಟಿ ದೇವಸ್ಥಾನ ಟ್ರಸ್ಟ್‌ನ ಅರವಿಂದ ಆಲಗೂಡ, ಹುಚ್ಚಪ್ಪ ತಳಕೇರಿ, ಶರಣಪ್ಪ ಕುಂಬಾರ, ಶಿವಲಿಂಗಪ್ಪ ಜಾಕನಳ್ಳಿ, ರಾಜು ಉಪ್ಪಲ್ಲಿ ಸೇರಿದಂತೆ ಬಡಾವಣೆಯ ಮಹಿಳೆಯರು, ಮಕ್ಕಳು ನಾಗರಿಕರು ಭಾಗವಹಿಸಿದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…