ಕಲಬುರಗಿ: ಆಗಸ್ಟ್ 23 ರಿಂದ 25 ರಂದು ಮೈಸೂರಿನಲ್ಲಿ ನಡೆದ 27 ನೆಯ ನ್ಯಾಷನಲ್ ಶೀಟೋ ರಿಯೋ ಕರಾಟೇ ಡು ಚಾಂಪಿಯನ್ಶಿಪ್‍ನಲ್ಲಿ ಮನೋಹರಕುಮಾರ ಬೀರನೂರ ಅವರ ನೇತೃತ್ವದ ಕರಾಟೇ ತಂಡ 17 ಚಿನ್ನದ, 13 ಬೆಳ್ಳಿ, 6 ಕಂಚಿನ ಪದಕ ಸೇರಿ 36 ಪ್ರಶಸ್ತಿ ಮತ್ತು ಪದಕಗಳನ್ನು ಪಡೆದು ರಾಜ್ಯಕ್ಕೆ, ಕಲ್ಯಾಣ ಕರ್ನಾಟಕ ಭಾಗಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ.
ಈ ಚಾಂಪಿಯನ್ಶಿಪ್‍ಗೆ ಮೈಸೂರಿನ ಮಹಾರಾಜರು ಮತ್ತು ಪಾರ್ಲಿಮೆಂಟ್ ಸದಸ್ಯರಾದ ಯದುವೀರ್ ಕೃಷ್ಣ ದತ್ತ ನರಸಿಂಹರಾಜ ಒಡೆಯರ್ ಅವರು ಉದ್ಘಾಟಿಸಿದರು. ಚಾಂಪಿಯನ್ ಶಿಪ್‍ನ ಯೋಜನೆಯನ್ನು ಮಾಜಿ ವಿಧಾನ ಪರಿಷತ್ನ ಸದಸ್ಯರು ಆಲ್ ಇಂಡಿಯಾ ಶೀಟೋ ರಿಯೋ ಕರಾಟೆ ಸಂಸ್ಥೆ & ಅಖಿಲ ಕರ್ನಾಟಕ ಸ್ಪೋಟ್ರ್ಸ್ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ಶಿಹಾನ ಸಿ.ಎಸ್ ಅರುಣ ಮಾಚಯ್ಯನವರು ಆಯೋಜಿಸಿದರು.
ದೇಶದ ಹಲವಾರು ರಾಜ್ಯಗಳಿಂದ ಸುಮಾರು ಸಾವಿರಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ್ದು. ಕಲ್ಯಾಣ ಕರ್ನಾಟಕ ಜಿಲ್ಲೇಯ ಅಖಿಲ ಕರ್ನಾಟಕ ಸ್ಪೋಟ್ರ್ಸ್ ಕರಾಟೆ ಸಂಸ್ಥೆಯ ಸ್ಪೋಟ್ರ್ಸ್ ಕಮಿಷನ್ ರಾಜ್ಯದ ಚೇರ್ಮೆನ್ ಮತ್ತು ಹೆವೆನ್ ಫೈಟರ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಅಂತರಾಷ್ಟ್ರೀಯ ಕರಾಟೆ ಪಟ್ಟು ವೇಳೆ ಉಪಸ್ಥತಿರಿದ್ದರು.
ಈ ಕರಾಟೆ ಪಟ್ಟುಗಳ ಸಾಧನೆಗೆ ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು, ರಾಜಕೀಯ ಮುಖಂಡರು, ಅಧಿಕಾರಿ ವರ್ಗದವರು, ಕ್ರೀಡಾ ಅಭಿಮಾನಿಗಳು, ಹ್ಯಾವೆನ್ ಫೈಟರ್ ಸಂಸ್ಥೆಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಹೇವೆನ್ ಫೈಟರ್ ಸಂಸ್ಥೆಯ ರಾಷ್ಟ್ರೀಯ ಕರಾಟೆಪಟು ಆಕಾಂಕ್ಷ ಪುರಾಣಿ ಮತ್ತು ಕಲ್ಯಾಣ ಕರ್ನಾಟಕ ಉಪಾಧ್ಯಕ್ಷರಾದ ಅನಿಲಕುಮಾರ್ ಅಳಿಮನಿ ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…