ಆಳಂದ; ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ, ವಿಕಾಸ ಅಕಾಡೆಮಿ ಮತ್ತು ಭಾರತ ವಿಕಾಸ ಸಂಗಮ ಪ್ರಾರಂಭವಾಗಿ 21 ವರ್ಷಗಳಾದ ಹಿನ್ನೆಲೆಯಲ್ಲಿ 7ನೇ ಭಾರತೀಯ ಸಂಸ್ಕøತಿ ಉತ್ಸವದ ಅಂಗವಾಗಿ ಯುವ ಗುರು ಪೂಜ್ಯ ಸದಾಶಿವ ಸ್ವಾಮಿಗಳ ಪ್ರೇರಣಾ ಸಂಚಾರಯಾತ್ರೆ ಆಳಂದ ಪಟ್ಟಣಕ್ಕೆ ಸೆ. 5ರಂದು ಮಧ್ಯಾಹ್ನ 2:30 ಗಂಟೆಗೆ ಆಗಮಿಸಲಿದೆ ಎಂದು ವಿಕಾಸ ಅಕಾಡೆಮಿ ಸಂಚಾಲಕ ಹಣಮಂತ ಶೇರಿ ಖಜೂರಿ ತಿಳಿಸಿದ್ದಾರೆ.’
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ, ವಿಕಾಸ ಅಕಾಡೆಮಿ ಮತ್ತು ಭಾರತ ವಿಕಾಸ ಸಂಗಮ ಪ್ರಾರಂಭವಾಗಿ 21 ವರ್ಷಗಳಾದ ಹಿನ್ನೆಲೆಯಲ್ಲಿ 7ನೇ ಭಾರತೀಯ ಸಂಸ್ಕøತಿ ಉತ್ಸವ ಎಂಬ ಬೃಹತ್ ಸಮಾವೇಶವನ್ನು ಒಟ್ಟು 240 ಎಕರೆ ಪ್ರದೇಶದಲ್ಲಿ ಪ್ರಕೃತಿ ನಗರ ಬೀರನಹಳ್ಳಿ, ಸೇಡಂ- ಕಲಬುರಗಿ ರಸ್ತೆಯಲ್ಲಿ ಜನೇವರಿ 29ರಿಂದ ಫೆಬ್ರುವರಿ 6, 2025ರ ವರೆಗೆ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಒಂಬತ್ತು ದಿನಗಳ ಕಾಲ ನಡೆಯುವ ಈ ಉತ್ಸವವು ವಿವಿಧ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ತಜ್ಞರನ್ನು / ಪರಿಣಿತರನ್ನು / ಸಂಪನ್ಮೂಲ ವ್ಯಕ್ತಿಗಳನ್ನು ಕಲ್ಯಾಣ ಕರ್ನಾಟಕದ ಶ್ರೀಸಾಮಾನ್ಯನಿಗಲ್ಲದೆ, ಅಖಿಲ ಕರ್ನಾಟಕ ಮತ್ತು ಅಖಂಡ ಭಾರತದ ಸಮಗ್ರ ಜನಸಮುದಾಯಕ್ಕೂ ಪರಿಚಯಿಸುವುದಲ್ಲದೆ, ಅವರೊಂದಿಗೆ ನೇರ ಸಂವಾದಕ್ಕೂ ಅವಕಾಶ ಕಲ್ಪಿಸುತ್ತದೆ. ಸಂವಾದ ಮತ್ತು ಚರ್ಚೆಯ ಮೂಲಕ ವಿವಿಧ ವಿಷಯಗಳ ಬಗ್ಗೆ ತಮ್ಮ ಜ್ಞಾನವೃದ್ಧಿಯನ್ನು ಮಾಡಿಕೊಳ್ಳುವ ಅವಕಾಶವನ್ನು ಈ ಮಹಾಸಂಗಮ ಎಲ್ಲರಿಗೂ ದೊರಕಿಸಲಿದೆ. ವಿವಿಧ ವಿಷಯಗಳಡಿಯಲ್ಲಿ ಪ್ರದರ್ಶನ, ವಿವಿಧ ಕಾರ್ಯಕ್ರಮ ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೃಷಿ ಲೋಕ – 11 ಎಕರೆ ವಿಸ್ತೀರ್ಣದಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಲೋಕ 6 ಎಕರೆ, ಸೃಜನ ಲೋಕ – 8 ಎಕರೆ, ಜ್ಞಾನ ಲೋಕ 24 ಎಕರೆ, ಮಕ್ಕಳ ಲೋಕ – 2 ಎಕರೆ, ವ್ಯವಹಾರ ಲೋಕ 8 ಎಕರೆ, ಕಲೆ ಮತ್ತು ಸಾಂಸ್ಕೃತಿಕ ಲೋಕ – 2 ಎಕರೆ ವಿಸ್ತೀರ್ಣದಲ್ಲಿ ಆಯೋಜಿಸಲಾಗಿದೆ. ಪ್ರತಿಯೊಂದು ವಿಭಾಗದಲ್ಲೂ ಕಮ್ಮಠ, ಉಪನ್ಯಾಸ, ಪ್ರಾತ್ಯಕ್ಷಿಕೆ, ಸಂವಾದ ಇತ್ಯಾದಿಗಳು ಜರುಗಲಿವೆ. 9 ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ, ನಮ್ಮ ರಾಜ್ಯವμÉ್ಟೀ ಅಲ್ಲದೆ ದೇಶದ ಪ್ರಖ್ಯಾತ / ಉನ್ನತ ಹೆಸರಾಂತ ವ್ಯಕ್ತಿಗಳನ್ನು ಮತ್ತು ಉಪನ್ಯಾಸಕಾರರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನಿಸಲಾಗುವುದು. ಪ್ರತಿನಿತ್ಯ ಸರಿಸುಮಾರು ಎರಡು ಲಕ್ಷ ವೀಕ್ಷಕರು ಬಂದು ಇದರ ಉಪಯೋಗ ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕೃತಿ ಕೇಂದ್ರಿತ ಅಭಿವೃದ್ಧಿಯನ್ನು ಪರಿಗಣಿಸಿ ನಿಸರ್ಗಕ್ಕೆ ಹಾನಿಯಾಗದಂತೆ, ಪರಿಸರವನ್ನು ಶೋಷಣೆ ಮಾಡದೆ, ಸ್ವಾಭಾವಿಕ ಸಂಪನ್ಮೂಲಗಳಿಗೆ ಧಕ್ಕೆಯಾಗದ ಪರಿಕಲ್ಪನೆಯಿಂದ ಭಾರತ ವಿಕಾಸ ಸಂಗಮ ಉದಯಿಸಿದೆ. ಜಲ, ಜಮೀನು, ಅರಣ್ಯ, ಪಶು, ಪಕ್ಷಿ ಮತ್ತು ಪ್ರಾಣಿ ಸಂಪತ್ತನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಉಳಿಸುವುದು ಭಾರತದ ಪ್ರಜ್ಞಾವಂತ ನಾಗರಿಕರಾದ ನಮ್ಮೆಲ್ಲರ ಆದ್ಯ ಕರ್ತವ್ಯ ಬುದ್ಧಿವಂತ, ಪ್ರಜ್ಞಾವಂತ ನಾಗರಿಕನಾದ ಮಾನವ ನಿಸರ್ಗದ ಜೊತೆ ಸಾಮರಸ್ಯದಿಂದ ಬದುಕುವುದನ್ನು ಕಲಿತುಕೊಳ್ಳಬೇಕು. ಅಲ್ಲದೆ ನಮಗೆ ವರದಾನವಾಗಿ ಬಂದ ಈ ಭೂಮಿ ಮತ್ತು ಆದರ ಎಲ್ಲಾ ಸ್ವಾಭಾವಿಕ ಸಂಪನ್ಮೂಲಗಳನ್ನು ಮುಂಬರುವ ಪೀಳಿಗೆಗೆ ಯಥಾವತ್ತಾಗಿ ಕೊಡಲು ಪಣತೊಡಬೇಕು ಎಂಬ ಗುರಿ ನಮ್ಮೆಲ್ಲರದು ಆಗಿರಬೇಕು ಎಂಬುದೇ ಭಾರತ ವಿಕಾಸ ಸಂಗಮದ ಮಹತ್ತರ ಅಭಿಲಾμÉ ಎಂದಾಗಿದೆ ಎಂದು ಹೇಳಿದ್ದಾರೆ.
ಈ ಉತ್ಸವದ ಪೂರಕ ಪ್ರೇರಣಾದಾಯಿ ಕಲ್ಯಾಣ ಕರ್ನಾಟಕ ವಿಕಾಸ ಪಥ ಸಂಚಾರವನ್ನು ಸೇಡಂನ ಶ್ರೀ ಕೊತ್ತಲಬಸವೇಶ್ವರ ದೇವಸ್ಥಾನದ ಯುವ ಗುರು ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ಕೈಗೊಂಡಿದ್ದಾರೆ. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಒಟ್ಟು 48 ತಾಲೂಕುಗಳಲ್ಲಿ 5 ಸಾವಿರ ಕೀ.ಮೀ. ವ್ಯಾಪ್ತಿಯಲ್ಲಿ ಇದೇ ಆಗಷ್ಟ್ 22ರಂದು ಆರಂಭವಾಗಿದ್ದು ಸೆಪ್ಟೆಂಬರ್ 11 ರಂದು ಪೂರ್ಣಗೊಳ್ಳಲಿದೆ.
ಯುವ ಗುರು ಪೂಜ್ಯ ಸದಾಶಿವ ಸ್ವಾಮಿಗಳ ಪ್ರೇರಣಾ ಸಂಚಾರಯಾತ್ರೆ ಆಳಂದ ಪಟ್ಟಣಕ್ಕೆ ಸೆ. 5ರಂದು ಮಧ್ಯಾಹ್ನ 2:30 ಗಂಟೆಗೆ ಆಗಮಿಸಲಿದೆ. ಅಂದು ರಥಯಾತ್ರೆ ಬಸ್ ನಿಲ್ದಾಣದಿಂದ ಆರಂಭವಾಗಿ ಶ್ರೀರಾಮ ಮಾರುಕಟ್ಟೆ ಮಾರ್ಗವಾಗಿ ಶರಣ ಏಕಾಂತ ರಾಮಯ್ಯ ಮಂದಿರದಲ್ಲಿ ಸಂಪನ್ನಗೊಳ್ಳಲಿದೆ. ಆದ್ದರಿಂದ ಅಂದು ನಡೆಯುವ ರಥಯಾತ್ರೆ ಮತ್ತು ಶರಣ ಏಕಾಂತ ರಾಮಯ್ಯ ಮಂದಿರದಲ್ಲಿ ನಡೆಯುವ ಸಭೆಯಲ್ಲಿ ತಾಲೂಕಿನ ಪರಮ ಪೂಜ್ಯರು, ಸಾರ್ವಜನಿಕರು, ಗಣ್ಯರು, ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದಾರೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…