ಕಲಬುರಗಿ: ಕನ್ನಡ ಕಲಿಕೆಗೆ ಹಿಂದೇಟು ಹಾಕುತ್ತಿರುವ ಸಂದರ್ಭದಲ್ಲಿ, ಇಂಗ್ಲೀಷ್ ವ್ಯಾಮೋಹ ಹೆಚ್ಚುತ್ತಿದೆ. ಇದರಿಂದ ಕನ್ನಡ ಭಾಷೆಗೆ ತೀವ್ರ ಧಕ್ಕೆಯಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಗೌರವ ಕಾರ್ಯದರ್ಶಿಗಳೂ ಆದ ಹಿರಿಯ ಸಾಹಿತಿ ಡಾ. ಪದ್ಮಿನಿ ನಾಗರಾಜು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಸಂಭ್ರಮ-50 ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಸೋಮವಾರ ಏರ್ಪಡಿಸಿದ ಸಮಾಜದ ವಿವಿಧ ರಂಗಗಳಲ್ಲಿ ಸೇವಾಮುಖಿಯಾಗಿರುವ ಚೇತನಗಳಿಗೆ ಕನ್ನಡದ ಚಿನ್ನ-2024 ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಯಾವುದೇ ಭಾಷೆಯ ಕಲಿಕೆಗೆ ಒತ್ತಡಕ್ಕೊಳಗಾಗಬಾರದು. ಮಾತೃ ಭಾಷೆಯ ಶಿಕ್ಷಣವೇ ನಮಗೆಲ್ಲ ಪೂರಕವಾಗಿದೆ. ಆದರೆ ಆಡಳಿತ ನಡೆಸುವ ಸರಕಾರಗಳು ಶಿಕ್ಷಣ ನೀತಿಗಳನ್ನು ಬದಲಾಯಿಸಿ ಕಲಿಕೆಗೆ ಅಡ್ಡಿಯಾಗುತ್ತಿದೆ. ಸ್ಪಷ್ಟವಾದ ಶಿಕ್ಷಣ ನೀತಿಯನ್ನು ರೂಪಿಸಿ ಬದುಕು ಕಟ್ಟಿಕೊಳ್ಳುವ ಕೆಲಸಗಳಾಗಬೇಕು ಎಂದರು.
ಬೆಂಗಳೂರಿನಲ್ಲಿ ಕನ್ನಡ ಮಾತನಾಡುವ ಜನರನ್ನು ಹುಡುಕಾಡುವ ಪರಿಸ್ಥಿತಿ ಎದುರಾಗಿದೆ. ಅಲ್ಲಿ ಕನ್ನಡ ಕಟ್ಟುವ ಬೆಳೆಸುವ ಕಾರ್ಯಗಳು ಆಗಬೇಕಾಗಿದೆ. ಕರ್ನಾಟಕ ಏಕೀಕರಣದ ನಂತರದಲ್ಲಿ ನಾವೆಲ್ಲ ಭೌಗೋಳಿಕವಾಗಿ ಒಂದಾಗಿದ್ದೇವೆ. ಆದರೆ ಕನ್ನಡದ ಮನಸ್ಸುಗಳನ್ನು ಕಟ್ಟುವ ಕೆಲಸ ಕಾರ್ಯಗಳು ಆರಂಭಿಸಬೇಕು.
ಮಹಿಳೆಯರು ಕನ್ನಡ ಸಾಹಿತ್ಯ, ಸಂಸ್ಕøತಿ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾಳೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತಾಡುವ ಭಾಷಾ ಶೈಲಿ ಭಿನ್ನವಾಗಿದ್ದರೂ ಅದರ ಸೊಗಡು ಮಾತ್ರ ವಿಶೇಷತೆಯಿಂದ ಕೂಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯಕ್ಕೆ ಮಾದರಿಯಾಗುವ ವೈವಿಧ್ಯಮಯ ಸಮ್ಮೇಳನಗಳನ್ನು ರೂಪಿಸುತ್ತಿರುವ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಅನುಕರಣೀಯವಾದುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನಮ್ಮ ಮಾತೃಭಾಷೆ, ನಾಡನ್ನು ಕಟ್ಟುವ ಕೈಂಕರ್ಯಕ್ಕೆ ಮುನ್ನಡಿ ಇಡಬೇಕಿದೆ. ತಾಯಿ ನೆಲ, ತಾಯಿ ಭಾಷೆ ಮತ್ತು ಸಂಸ್ಕøತಿಗೆ ಅದರದೇ ಆದ ಮಹತ್ವ ಇದೆ. ನಮ್ಮ ಜನಪದ ಸಂಸ್ಕøತಿ ನಮಗೆ ನೀಡಿರುವ ಪಾಠ ಬದುಕಿನ ಪ್ರತಿ ಕ್ಷಣಕ್ಕೂ ದಾರಿದೀಪವಾಗುತ್ತಿದೆ. ನಮ್ಮ ಪರಂಪರೆ ಮರೆತರೆ ಪರದೇಶಿಗಳಾಗುತ್ತೇವೆ. ನಾವುಗಳು ಎಷ್ಟೇ ಎತ್ತರಕ್ಕೆ ಹೋದರೂ ನಮ್ಮನ್ನು ಬೆಳೆಸಿದ ಭಾಷೆ, ಸಮಾಜವನ್ನು ಎಂದಿಗೂ ಮರೆಯಬಾರದು ಎಂದ ಅವರು, ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿನ ಪ್ರತಿಭಾವಂತರಿಗೆ ಸೂಕ್ತ ವೇದಿಕೆ ಕೊಡುವ ರಚನಾತ್ಮಕ ಕಾರ್ಯಕ್ರಮಗಳು ನಿರಂತರವಾಗಿ ಆಯೋಜಿಸಲಾಗುತ್ತಿದೆ ಎಂದರು.
ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಶರಣರು, ಸಂತರ, ಸೂಫಿ, ದಾಸರು ನಡೆದಾಡಿದ ನೆಲದಲ್ಲಿ ಕನ್ನಡ ಭಾಷೆ ಗಟ್ಟಿಯಾಗಿ ಬೆಲೆದು ಸಂಸ್ಕøತಿ ಉಳಿಸಿಕೊಂಡಿದೆ ಎಂದರು.
ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸಿದ್ಧಲಿಂಗ ಜಿ ಬಾಳಿ, ರಾಜೇಂದ್ರ ಮಾಡಬೂಳ, ರವೀಂದ್ರಕುಮಾರ ಭಂಟನಳ್ಳಿ, ಬಾಬುರಾವ ಪಾಟೀಲ, ಜ್ಯೋತಿ ಕೋಟನೂರ, ವಿಶಾಲಾಕ್ಷಿ ಮಾಯಣ್ಣವರ್, ಶಿವಾನಂದ ಪೂಜಾರಿ, ಧರ್ಮರಾಜ ಜವಳಿ, ರಮೇಶ ಡಿ ಬಡಿಗೇರ ವೇದಿಕೆ ಮೇಲಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಕನ್ನಡ ಕಟ್ಟುತ್ತಿರುವ ಪ್ರಮುಖರಾದ ವಾದಿರಾಜ ವ್ಯಾಸಮುದ್ರ, ಬಸವರಾಜ ತಡಕಲ್, ಸಿದ್ರಾಮಪ್ಪ ಉಕಲಿ, ಡಾ. ಕರಿಗುಳೇಶ್ವರ, ಡಾ.ಪ್ರಶಾಂತ ಕುಲಕರ್ಣಿ, ಮಹಾಂತೇಶ ಪಾಟೀಲ, ಕು.ಅಭಿಶ್ರೀ ವಿಜಯಕುಮಾರ ಮಠಪತಿ, ಕಲ್ಯಾಣಕುಮಾರ ಶೀಲವಂತ, ಗಣೇಶ ಚಿನ್ನಾಕಾರ, ಶರಣು ಪಪ್ಪಾ, ಕಲ್ಯಾಣಿ ಭಾವಿಮನಿ, ಡಾ. ಬಿ.ಪಿ. ಬುಳ್ಳಾ, ಗೀತಾ ಭರಣಿ, ಝಾಕೀರ್ ಹುಸೇನ್ ಕುಪನೂರ, ಶಾಂತಾ ಪಸ್ತಾಪೂರ, ಆನಂದ ಸಿದ್ಧಮಣಿ, ಚಂದ್ರಕಾಂತ ಏರಿ, ಗೌಡಪ್ಪಗೌಡ ಆಂದೋಲಾ, ಡಾ. ಎ ಎಸ್ ಭದ್ರಶೆಟ್ಟಿ, ಡಾ. ಅಣ್ಣಾರಾವ ಪಾಟೀಲ, ಶರಣಪ್ಪ, ಎನ್ ಎ ಪಾಟೀಲ, ಬಿ.ಎಸ್. ಮಾಲಿಪಾಟೀಲ, ರಾಜಶೇಖರ ಶಾಮಣ್ಣಾ, ಎಂ ಎನ್ ಸುಗಂಧಿ, ರೇಣುಕಾ ಕಂಬಾನೂರ, ಸಂಗೀತಾ ಚಿನ್ನಾ, ವೀರಣ್ಣಗೌಡ ದಳಪತಿ ನಂದೂರ ಸೇರಿದಂತೆ ಐವತ್ತು ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಮುಖರಾದ ಸುರೇಶ ದೇಶಪಾಂಡೆ, ಶರಣಬಸಪ್ಪ ಕೋಬಾಳ, ಸುರೇಶ ಲೇಂಗಟಿ, ಪ್ರಭುಲಿಂಗ ಮೂ¯ಗೆ, ಎಸ್ ಕೆ ಬಿರಾದಾರ, ಸಂತೋಷ ಕುಡಳ್ಳಿ, ಸಿ ಎಸ್ ಮಾಲಿಪಾಟೀಲ ಹಣಮಂತಪ್ರಭು, ರೂಪಾ ಪೂಜಾರಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…