ಕಲಬುರಗಿ; ನಾಡಿನ ಶಿಕ್ಷಣ, ಆರೋಗ್ಯ ಮತ್ತು ಹೈನುಗಾರಿಕೆ ಉತ್ಪಾದನಾ ಕ್ಷೇತ್ರ ಸೇರಿದಂತೆ ನಾಡಿನ ಪ್ರಗತಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರ ಕೊಡುಗೆ ಅಪಾರವಾಗಿದೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮಡು ರವರು ನುಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸದ್ಭಕ್ತ ಬಳಗ ಕಲಬುರಗಿ, ಜಿಲ್ಲಾ ಸಕಲ ಜೈನ ಸಮಾಜ ಮತ್ತು ಎಸ್.ಆರ್.ಎನ್. ಮೆಹತಾ ಶಾಲೆ, ವತಿಯಿಂದ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಆಯೋಜಿಸಿದ ಗುರುವಂದನಾ ಮಹೋತ್ಸವವನ್ನು ಜ್ಯೋತಿ ಬೆಳಗಿಸುವ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರ ಆರ್ಥಿಕ ಚೇತರಿಕೆ, ಸ್ವಾವಲಂಬನೆ ಮೂಲಕ ಸಮಾಜದಲ್ಲಿ ಬಹುದೊಡ್ಡ ಕ್ರಾಂತಿಕಾರಿ ಬದಲಾವಣೆಯನ್ನು ಪೂಜ್ಯ ಹೆಗ್ಗಡೆಯವರು ತರುತ್ತಿದ್ದು ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಮಹಿಳೆಯರು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಜನೋಪಯೋಗಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿರುವುದು ಬಹು ಸಂತಸದ ಸಂಗತಿಯಾಗಿದೆ ಎಂದರು.
ತಮ್ಮ ಇಡೀ ಜೀವನವನ್ನೇ ಸಮಾಜಕ್ಕಾಗಿ ಧಾರೆಯೆರೆದ ಪೂಜ್ಯಮ ಹೆಗ್ಗಡೆಯವರು ಸರ್ಕಾರದ ಯೋಜನೆಗಳೊಂದಿಗೆ ಕೈಗೂಡಿಸಿ ಅರ್ಹ ಫಲಾನುಭವಿಗಳಿಗೆ ತಲುಪಿಸುತ್ತಿರುವ ಪರಿಣಾಮವಾಗಿ ಇಂದು ಕಲಬುರಗಿ ವಿಭಾಗದಲ್ಲಿಯೂ ಸಹ ಹತ್ತಾರು ಸಾವಿರ ಮಹಿಳೆಯರು ಧರ್ಮಸ್ಥಳ ಸಂಸ್ಥೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆಂದು ನುಡಿದರು. ಪೂಜ್ಯ ಹೆಗ್ಗಡೆಯವರ ಬದುಕು ಇಂದಿನ ಯುವ ಪೀಳಿಗೆಗೆ ಆದರ್ಶಪ್ರಾಯವಾಗಿದ್ದು ಅವರ ಬದುಕು ನಮಗೆಲ್ಲ ಸನ್ಮಾರ್ಗದರ್ಶನವಾಗಿದೆ ಎಂದು ಮತ್ತಿಮಡು ರವರು ನುಡಿದರು.
ಗುರುವಂದನಾ ಸ್ವೀಕರಿಸಿ ಮಾತನಾಡಿದ ಪೂಜ್ಯ ಹೆಗ್ಗಡೆಯವರು ಕಲಬುರಗಿ ಜಿಲ್ಲೆಯ ಜನತೆಯ ಭಕ್ತಿ ಮತ್ತು ಪ್ರೀತಿಗೆ ಗೌರವ ಮತ್ತು ಆತಿಥ್ಯ ನಮ್ಮ ಮನಸೂರೆಗೊಂಡಿದ್ದು ಇಲ್ಲಿಯವರ ಭಕ್ತಿಯಲ್ಲಿ ಶಕ್ತಿ ಇದ್ದು ಹೀಗಾಗಿ ಧರ್ಮಾಧಿಕಾರಿಗಳನ್ನು ಇವತ್ತು ಗೌರವಿಸಿದ್ದು ನಮ್ಮ ಜೀವಮಾನದಲ್ಲಿಯೇ ಮರೆಯಲಾಗದ ಕ್ಷಣವೆಂದು ಭಾವುಕರಾದರು. ಪ್ರತಿಯೊಬ್ಬರು ನಿಷ್ಠೆಯಿಂದ ಕಾಯಕ ಮಾಡಿ ಭಕ್ತಿಯಿಂದ ದಾಸೋಹ ಮಾಡುವಂತೆ ಕರೆ ನೀಡಿದ ಪೂಜ್ಯರು ಸುಂದರ ಸಮಾಜಕ್ಕಾಗಿ ಮತ್ತು ಮನುಕುಲ ನೆಮ್ಮದಿಯಿಂದ ಬದುಕುವುದಕ್ಕಾಗಿ ಶ್ರಮಿಸುವಂತೆ ಕಿವಿ ಮಾತು ಹೇಳಿದರು.
ಎಸ್.ಆರ್.ಎನ್.ಮೆಹತಾ ಸಂಸ್ಥೆಯ ಮುಖ್ಯಸ್ಥರಾದ ಚಕೋರ ಮೆಹತಾ ಅದ್ಯಕ್ಷತೆ ವಹಿಸಿದ್ದರು, ಶ್ರೀಮತಿ ಶೃದ್ಧಾ ಅಮೀತ, ಶ್ರೀಮತಿ ತ್ರಿಶುಲಾ ಮಾಲಗತ್ತಿ, ಜೈನ ಸಮಾಜದ ಮುಖಂಡರಾದ ಬಾಹುಬಲಿ ಚಿಂದೆ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ನಿಗಮ ನಿಯಮಿತದ ನಿಕಟಪೂರ್ವ ನಿರ್ದೇಶಕರಾದ ಸುರೇಶ ಎಸ್. ತಂಗಾ, ಶಾಲೆಯ ಪ್ರಾಂಶುಪಾಲರಾದ ರಾಜಶೇಖರ ರೆಡ್ಡಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಎಸ್.ಆರ್.ಎನ್. ಮೆಹತಾ ಸಂಸ್ಥೆಯ ಮ್ಯಾನೇಜಿಂಗ ಡೈರೆಕ್ಟರ್ ಪ್ರೀತಮ್ ಮೆಹತಾ ಸ್ವಾಗತಿಸಿದರು, ನಾಗಲಿಂಗಯ್ಯ ಮಠಪತಿ ನಿರೂಪಿಸಿದರು, ರಾಜೇಂದ್ರ ಕುಣಚಗಿ ವಂದಿಸಿದರು.
ಪೂಜ್ಯ ಶ್ರೀ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರಿಗೆ ಸಮಸ್ತ ಜನತೆಯ ವತಿಯಿಂದ ಸಮಾರಂಭದಲ್ಲಿ ಗುರುವಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಪ್ರಕಾಶ ಜೈನ, ಶ್ರೀಕಾಂತ ಕಟಂಬಲೆ, ಧನ್ಯಕುಮಾರ ವರ್ಧಮಾನೆ, ಬ್ರಹ್ಮ ಜಗಶೆಟ್ಟಿ, ವಿನೋದ ಪಾಟೀಲ, ಧರಣೇಂದ್ರ ಸಂಗಮಿ, ಶ್ರೇಣಿಕ ಪಾಟೀಲ, ಚೇತನ ಪಂಡಿತ, ರಮೇಶ ಬೆಳಕೇರಿ ಸೇರಿದಂತೆ ಭಕ್ತ ಬಳಗದವರು, ಜೈನ ಸಮಾಜದವರು, ಶಾಲೆಯ ಆಡಳಿತ ಮಂಡಳಿ ಸದಸ್ಯರುಗಳು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…