ಶರಣಬಸವೇಶ್ವರ ಸಂಸ್ಥಾನದಲ್ಲಿ ಶ್ರಾವಣ ಮಾಸ ನಿಮಿತ್ತ ಮಂಗಲೋತ್ಸವ

ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠದಲ್ಲಿ ಕಳೆದ ಎರಡು ಶತಮಾನಗಳಿಂದ ನಿರಂತರವಾಗಿ ದಾಸೋಹ, ಗುರುಲಿಂಗ ಜಂಗಮ ಅರ್ಚನೆ, ಶಿವಾನುಭವ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬಂದಿವೆ. ಇದು ಶರಣಬಸವೇಶ್ವರ ಸಂಸ್ಥಾನದಲ್ಲಿ ಹಿರಿಯ ಪೀಠಾಧಿಪತಿಗಳು ಹಾಕಿದ ಪರಂಪರೆಯಂತೆ ಎಲ್ಲಾ ಪೀಠಾಧಿಪತಿಗಳು ಮುಂದುವರೆಸಿ ಆಚರಿಸಿಕೊಂಡು ಬಂದಿದ್ದಾರೆ.

ಬಸವಣ್ಣನವರು ತಮ್ಮ ವಚನದಲ್ಲಿ ಹೇಳಿರುವಂತೆ “ಹೊತ್ತಾರೆ ಎದ್ದು ಅಗ್ಗವಣೆ ಪತ್ರಿಯತಂದು ಪೂಜಿಸುಲಿಂಗ” ಎಂದು ಮಹಾದಾಸೋಹ ಪೀಠದಲ್ಲಿ 8ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ, ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ 9ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರ ದಿವ್ಯಸಾನಿಧ್ಯದಲ್ಲಿ ತ್ರಿಕಾಲ ಪೂಜೆ, ಗುರುಲಿಂಗ ಜಂಗಮ ಪೂಜೆ, ಅನ್ನ ದಾಸೋಹ, ಪ್ರಸಾದ ಅರ್ಪಣೆ ಹಾಗೂ ಶಿವಾನುಭವ ಕಾರ್ಯಕ್ರಮಗಳು ಪವಿತ್ರ ಶ್ರಾವಣ ಮಾಸದಾದ್ಯಂತ ನಿತ್ಯವೂ ಜರುಗಿದವು.

ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರು ತಮ್ಮ ಕಿರಿ ವಯಸ್ಸಿನಲ್ಲಿಯೇ ನಡೆ, ನುಡಿ, ಭಕ್ತಿ, ಪೂಜೆ, ಕಾಯಕ, ದಾಸೋಹ ಮೈಗೂಡಿಸಿಕೊಂಡಿದ್ದಾರೆ. ಚಿರಂಜೀವಿಯವರ ನೇತೃತ್ವದಲ್ಲಿ ಶ್ರಾವಣದ ಪ್ರತಿನಿತ್ಯವೂ ಪಾದಪೂಜೆ, ಅನ್ನ ದಾಸೋಹ ನಿಯಮದಂತೆ ನಡೆದುಕೊಂಡು ಬಂದಿತು.

ಈ ಸಂಧರ್ಭದಲ್ಲಿ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರು ವಿಭೂತಿ, ರುದ್ರಾಕ್ಷಿ ಹಾಗೂ ಮಂತ್ರಗಳ ಮಹಿಮೆಯನ್ನು ಕುರಿತು ತಮ್ಮ ಭಕ್ತಿಯುತವಾಗಿ ಅರ್ಥಪೂರ್ಣವಾದ ಉಪನ್ಯಾಸ ನೀಡಿದರು.

ಇದಲ್ಲದೆ “ಕೋಟಿಗೊಬ್ಬ ಶರಣ, ಪರಶಿವನ ಹರಣ ಕಲಬುರಗಿಯ ಶ್ರೀ ಶರಣ ಬಸವನ ಮಾಡೋ ನೀ ಸ್ಮರಣ” ಎಂಬ ಭಕ್ತಿ ವಚನವನ್ನು ಅತಿ ಶ್ರದ್ಧೆಯಿಂದ ಹಾಡಿದ್ದು ನೆರೆದಂತಹ ಭಕ್ತಸಮೂಹಕ್ಕೆ ಹುಬ್ಬೇರಿಸುವಂತೆ ಮಾಡಿತು. ಎಲ್ಲರಿಗೂ ಭಕ್ತಿಲೋಕದ ದರುಶನಮಾಡಿಸಿ, ಶರಣಬಸವೇಶ್ವರರ ಸ್ಮರಣೆಯಲ್ಲಿ ಮುಳುಗುವಂತೆ ಮಾಡಿದ್ದು ವಿಶೇಷ.

ತದನಂತರ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಅವರ ಜೊತೆಗೂಡಿ ಶ್ರೀ ಶರಣಬಸವೇಶ್ವರರ ದೇವಸ್ಥಾನದಲ್ಲಿ ಪೂಜಾ ಪುನಸ್ಕಾರಗಳನ್ನು ಸಲ್ಲಿಸಿ, ಪಲ್ಲಕ್ಕಿ ಪೂಜೆ ಮಾಡಿ ಶ್ರಾವಣ ಮಾಸದ ಶಿವಾನುಭವ ಕಾರ್ಯಕ್ರಮಗಳಿಗೆ ಮಂಗಲೋೀತ್ಸವ ನೆರವೇರಿಸಿದರು. ಶರಣಬಸವೇಶ್ವರ ಸಂಸ್ಥಾನದಲ್ಲಿ ಜರುಗಿದ ಶ್ರಾವಣ ಮಾಸದ ಮಂಗಲೋತ್ಸವ.

ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠದಲ್ಲಿ ಕಳೆದ ಎರಡು ಶತಮಾನಗಳಿಂದ ನಿರಂತರವಾಗಿ ದಾಸೋಹ, ಗುರುಲಿಂಗ ಜಂಗಮ ಅರ್ಚನೆ, ಶಿವಾನುಭವ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬಂದಿವೆ. ಇದು ಶರಣಬಸವೇಶ್ವರ ಸಂಸ್ಥಾನದಲ್ಲಿ ಹಿರಿಯ ಪೀಠಾಧಿಪತಿಗಳು ಹಾಕಿದ ಪರಂಪರೆಯಂತೆ ಎಲ್ಲಾ ಪೀಠಾಧಿಪತಿಗಳು ಮುಂದುವರೆಸಿ ಆಚರಿಸಿಕೊಂಡು ಬಂದಿದ್ದಾರೆ.

ಬಸವಣ್ಣನವರು ತಮ್ಮ ವಚನದಲ್ಲಿ ಹೇಳಿರುವಂತೆ “ಹೊತ್ತಾರೆ ಎದ್ದು ಅಗ್ಗವಣೆ ಪತ್ರಿಯತಂದು ಪೂಜಿಸುಲಿಂಗ” ಎಂದು ಮಹಾದಾಸೋಹ ಪೀಠದಲ್ಲಿ 8ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ, ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ 9ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರ ದಿವ್ಯಸಾನಿಧ್ಯದಲ್ಲಿ ತ್ರಿಕಾಲ ಪೂಜೆ, ಗುರುಲಿಂಗ ಜಂಗಮ ಪೂಜೆ, ಅನ್ನ ದಾಸೋಹ, ಪ್ರಸಾದ ಅರ್ಪಣೆ ಹಾಗೂ ಶಿವಾನುಭವ ಕಾರ್ಯಕ್ರಮಗಳು ಪವಿತ್ರ ಶ್ರಾವಣ ಮಾಸದಾದ್ಯಂತ ನಿತ್ಯವೂ ಜರುಗಿದವು.

ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರು ತಮ್ಮ ಕಿರಿ ವಯಸ್ಸಿನಲ್ಲಿಯೇ ನಡೆ, ನುಡಿ, ಭಕ್ತಿ, ಪೂಜೆ, ಕಾಯಕ, ದಾಸೋಹ ಮೈಗೂಡಿಸಿಕೊಂಡಿದ್ದಾರೆ. ಚಿರಂಜೀವಿಯವರ ನೇತೃತ್ವದಲ್ಲಿ ಶ್ರಾವಣದ ಪ್ರತಿನಿತ್ಯವೂ ಪಾದಪೂಜೆ, ಅನ್ನ ದಾಸೋಹ ನಿಯಮದಂತೆ ನಡೆದುಕೊಂಡು ಬಂದಿತು.

ಈ ಸಂಧರ್ಭದಲ್ಲಿ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರು ವಿಭೂತಿ, ರುದ್ರಾಕ್ಷಿ ಹಾಗೂ ಮಂತ್ರಗಳ ಮಹಿಮೆಯನ್ನು ಕುರಿತು ತಮ್ಮ ಭಕ್ತಿಯುತವಾಗಿ ಅರ್ಥಪೂರ್ಣವಾದ ಉಪನ್ಯಾಸ ನೀಡಿದರು. ಇದಲ್ಲದೆ “ಕೋಟಿಗೊಬ್ಬ ಶರಣ, ಪರಶಿವನ ಹರಣ ಕಲಬುರಗಿಯ ಶ್ರೀ ಶರಣ ಬಸವನ ಮಾಡೋ ನೀ ಸ್ಮರಣ” ಎಂಬ ಭಕ್ತಿ ವಚನವನ್ನು ಅತಿ ಶ್ರದ್ಧೆಯಿಂದ ಹಾಡಿದ್ದು ನೆರೆದಂತಹ ಭಕ್ತಸಮೂಹಕ್ಕೆ ಹುಬ್ಬೇರಿಸುವಂತೆ ಮಾಡಿತು. ಎಲ್ಲರಿಗೂ ಭಕ್ತಿಲೋಕದ ದರುಶನಮಾಡಿಸಿ, ಶರಣಬಸವೇಶ್ವರರ ಸ್ಮರಣೆಯಲ್ಲಿ ಮುಳುಗುವಂತೆ ಮಾಡಿದ್ದು ವಿಶೇಷ.

ತದನಂತರ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಅವರ ಜೊತೆಗೂಡಿ ಶ್ರೀ ಶರಣಬಸವೇಶ್ವರರ ದೇವಸ್ಥಾನದಲ್ಲಿ ಪೂಜಾ ಪುನಸ್ಕಾರಗಳನ್ನು ಸಲ್ಲಿಸಿ, ಪಲ್ಲಕ್ಕಿ ಪೂಜೆ ಮಾಡಿ ಶ್ರಾವಣ ಮಾಸದ ಶಿವಾನುಭವ ಕಾರ್ಯಕ್ರಮಗಳಿಗೆ ಮಂಗಲೋೀತ್ಸವ ನೆರವೇರಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

22 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago