ಕೇಂದ್ರ ಕಾರಾಗೃಹದಲ್ಲಿ ಮಾದಕ ವಸ್ತುಗಳ ಸೇವನೆ, ಕಳ್ಳ ಸಾಗಣಿಕೆ ವಿರೋಧಿ, ಆತ್ಮಹತ್ಯೆ ತಡೆಗಟ್ಟುವಿಕೆ ಜಾಗೃತಿ

ಕಲಬುರಗಿ: ಕೇಂದ್ರ ಕಾರಾಗೃಹ ಕಲಬುರಗಿಯಲ್ಲಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಕಲಬುರಗಿ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವೆ ಹಾಗೂ ಕಳ್ಳ ಸಾಗಣಿಕೆ ವಿರೋಧಿ ದಿನ 10 ನೇ ಸೆಪ್ಟಂಬರ್ ಅಂತರಾಷ್ಟ್ರೀಯ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಅಂಗವಾಗಿ ಅರಿವಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಮಕ್ಕೆ ಮುಖ್ಯ ಅತಿಥಿ ಹಾಗೂ ಉಪನ್ಯಾಸಕರಾಗಿ ಆಗಮಿಸಿದ ಡಾ|| ಮಹ್ಮದ್ ಇರ್ಫಾನ್, ಮಾನಸಿಕ ತಜ್ಞರು, ಜಿಮ್ಸ್ ಆಸ್ಪತ್ರೆ. ಕಲಬುರಗಿರವರು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಾ, ಜನರಲ್ಲಿ ಸಾಮನ್ಯವಾಗಿ ಕಂಡು ಬರುವ ಮಾನಸಿಕ ಖಾಯಿಲೆಗಳ ಲಕ್ಷಣಗಳೇಂದರೆ ನಿದ್ರಾ ಹೀನತೆ, ಜೀವನದಲ್ಲಿ ಜಿಗುಪ್ಸೆ, ನಿರಾಸಕ್ತಿ, ಹಸಿವು ಕಡಿಮೆ, ಅತೀ ಬೇಜಾರು, ವಿನಾಕಾರಣ ಭಯ ಪಡುವುದು, ಲೈಂಗಿಕ ಸಮಸ್ಯೆ ಹಾಗೂ ಅತ್ಯಂತ ಗಂಭೀರ ಸ್ವರೂಪದ ಲಕ್ಷಣಗಳಾದ ಅತೀ ಸಂಶಯ, ಆತ್ಮ ಹತ್ಯೆ ಆಲೋಚನೆ, ಮೈಮೇಲೆ ದೇವರು, ದೆವ್ವ ಬಂದಂತೆ ಆಡುವುದು, ವಿಚಿತ್ರ ವರ್ತನೆ, ಬೇರೆಯವರಿಗೆ ಕಾಣಿಸದ, ಕೇಳಿಸದ, ದೃಶ್ಯ ದ್ವನಿಗಳು ಕಾಣಿಸುವುದು, ಕೇಳಿಸುವುದು ಮುಂತಾದ ಲಕ್ಷಣಗಳನ್ನು ಮಾನಸಿಕ ವ್ಯಕ್ತಿಗಳಲ್ಲಿ ಕಾಣಬಹುದು. ಪ್ರತಿ ನೂರು ಜನ ಮಾನಸಿಕ ರೋಗಿಗಳಲ್ಲಿ ಕೇವಲ 15 ಜನ ಮಾತ್ರ ಚಿಕಿತ್ಸೆ ಪಡೆಯುತ್ತಾರೆ. ಇನ್ನುಳಿದ ಜನ ಹಲವಾರು ಕಾರಣಗಳಿಂದ ಚಿಕಿತ್ಸೆಯಿಂದ ವಂಚಿತರಾಗುತ್ತಾರೆ.ಇದಕ್ಕೆ ಕಾರಣಗಳು ಖಾಯಿಲೆ ಅರಿವು ಇರದೇ ಇರುವುದು, ತಪ್ಪು ನಂಬಿಕೆ, ಸಾಮಾಜಿಕ ಕಳಂಕ, ಚಿಕಿತ್ಸೆ ಕುರಿತು ತಪ್ಪು ಕಲ್ಪನೆಗಳಿಂದ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಅವರಿಗೆ ಆಪ್ತ ಸಮಾಲೋಚನೆ ,ಮಾತ್ರೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಸಾಮಾಜಿಕ ಬೆಂಬಲ ನೀಡುವುದು ಎಂದು ಹೇಳಿದರು.

ಇನ್ನೋರ್ವ ಅತಿಥಿಗಳಾಗಿ ಆರೋಗ್ಯ ಇಲಾಖೆ ವತಿಯಿಂದ ಆಗಮಿಸಿದ ತಂಬಾಕು ಸಾಮಾಜಿಕ ಕಾರ್ಯಕರ್ತರಾದ ಕು|| ಆರತಿರವರು ಮಾತನಾಡುತ್ತಾ, ತಂಬಾಕು ಸೇವೆನೆಯಿಂದ ನೀವು ಬೀಡಿ ಸಿಗರೇಟ್‍ನಿಂದ ಬಿಡುವ ಹೊಗೆ ನಿಮ್ಮ ಶರೀರದ ಒಳಗಡೆ ಅಲ್ಲದೇ ನಿಮ್ಮ ಪಕ್ಕದಲ್ಲಿರುವ ಇತರೇ ಜನರಿಗೆ ಗಾಳಿಯ ಮೂಲಕ ನೇರವಾಗಿ ತಂಬಾಕು ಸೇವೆನೆಯ ಹೊಗೆಯನ್ನು ಅವರು ಪಡೆದು ಅನಾರೋಗ್ಯಕ್ಕೆ ತುತ್ತಾಗಿ ಹಲವಾರು ರೋಗಗಳಿಗೆ ಕಾರಣಿಭೂತರಾಗುತ್ತೀರಿ (ಉದಾ: ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಶ್ವಾಸ ಕೋಶದ ಕಾಯಿಲೆಗಳು, ತಂಬಾಕು ಸೇವನೆಯೇ ಪ್ರಮುಖ ಕಾರಣಾವಾಗಿದೆ ಎಂದು ತಿಳಿಸಿದರು.

ಇನ್ನೋರ್ವ ಅತಿಥಿಗಳಾಗಿ ಆಗಮಿಸಿದಕ್ಲೀನಿಕಲ್ ಸೈಕಾಲಿಜಿಸ್ಟ್‍ರಾದ ಮತಿ ಸಂತೋಷಿ ಗುಳೆ ರವರು ಎಲ್ಲರಿಗೆ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವೆ ಹಾಗೂ ಕಳ್ಳ ಸಾಗಣಿಕೆ ವಿರೋಧಿ ದಿನ 10 ನೇ ಸೆಪ್ಟಂಬರ್ ಅಂತರಾಷ್ಟ್ರೀಯ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾರಾಗೃಹದ ಮುಖ್ಯಸ್ಥರಾದ ಡಾ|| ಪಿ. ರಂಗನಾಥ್, ಮುಖ್ಯ ಅಧೀಕ್ಷಕರು ಕೇಂದ್ರ ಕಾರಾಗೃಹ ಕಲಬುರಗಿ ರವರು ಮಾತನಾಡುತ್ತಾ, ವಿವಿಧ ರೀತಿಯ ತಂಬಾಕು ಸೇವೆನೆ ಮಾಡುವುದರಿಂದ ಚಟಕ್ಕೆ ಬಿದ್ದು, ವ್ಯಸನಿಗಳಾಗಿ ದೈಹಿಕ ಮತ್ತು ಮಾನಸಿಕ ದುರ್ಬಲರಾಗಿ ಆಗುವುದರ ಜೊತೆಗೆ ಅರ್ಥಿಕವಾಗಿ ನಷ್ಟ ಹೊಂದಿ ಕುಟುಂಬ ನಿರ್ವಹಣೆ ಮಾಡುವುದು ಕೂಡ ದುಸ್ತರವಾಗುತ್ತದೆ ಮತ್ತು ತಂಬಾಕು ಸೇವನೆಗಳನ್ನು ನೀವು ದೂರ ಮಾಡಲು ಕಾರಾಗೃಹದಲ್ಲಿರುವ ವೃತ್ತಿಪರ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು, ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡು ವ್ಯಸನಿಗಳಿಂದ ಮುಕ್ತಿಪಡೆದು ಒಳ್ಳೆಯ ಮತ್ತು ಸದೃಡ ಆರೋಗ್ಯವನ್ನು ಪಡೆದು ಒಳ್ಳೆಯ ಜೀವನವನ್ನು ನಡೆಸಲು ಸಲಹೆ ನೀಡಿದರು ಹಾಗೂ ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳನ್ನು ಕಾರಾಗೃಹದ ಬಂದಿಗಳಿಗೆ ನೀಡಲಾಗುತ್ತಿದೆ. ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಆಗಮಿಸಿದ ಆರೋಗ್ಯ ಮತ್ತು ಮಾನಸಿಕ ಇಲಾಖೆಯ ವೈದ್ಯರು ಹಾಗೂ ವೈದ್ಯಕೀಯ ತಂಡದವರಿಗೆ ಅಭಿನಂದನೆಗಳನ್ನು ತಿಳಿಸಿದರು.

ಪ್ರಾಸ್ತಾವಿಕವಾಗಿಬಿ. ಸುರೆಶ್, ಪ್ರಭಾರಿ ಅಧೀಕ್ಷಕರು, ಕಲಬುರಗಿ ಇವರು ಮಾತನಾಡುತ್ತಾ, 10 ನೇ ಸೆಪ್ಟಂಬರ್ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಘೋಷಣೆಯಾದ “ಎಲ್ಲರೂ ಜೊತೆಗೂಡಿ ಆತ್ಮಹತ್ಯೆಯನ್ನು ತಡೆಗಟ್ಟುವುದು ಆಗಿದೆ” ಹಾಗಾಗಿ ಅವರಲ್ಲಿ ಒಳ್ಳೆಯ ನಡತೆ ಮತ್ತು ವಾತಾವರಣವನ್ನು ಕಲ್ಪಿಸಲು ಎಲ್ಲರೂ ಕೈ ಜೋಡಿಸುವುದು ಮತ್ತು ಪ್ರತಿಯೊಬ್ಬರು ಉತ್ತಮ ಆರೋಗ್ಯವನ್ನು ಹೊಂದಬೇಕಾದರೆ, ಮಾನಸಿಕವಾಗಿ ಸದೃಡರಾಗಬೇಕು ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುವ ತಂಬಾಕು ಸೇವನೆಯಿಂದ ದೂರವಿರಬೇಕು. ಸಹವಾಸದಿಂದ ಸನ್ಯಾಸಿ ಕೆಟ್ಟ, ಹಾಗಾಗಿ ಉತ್ತಮರ ಸಂಗ ಮಾಡಬೇಕು ಅಂದರೆ ಸಜ್ಜನರ ಸಂಗ ಹೆಜ್ಜೆನು ಸವಿದಂತೆ, ಒಳ್ಳೆಯವರ ಆಚಾರ ವಿಚಾರಗಳನ್ನು ನಮ್ಮಲ್ಲಿ ಅಳವಡಿಸಿಕೊಂಡು ಮಾನಸಿಕ ಒಳಗೊಂಡಂತೆ ಉತ್ತಮ ಆರೋಗ್ಯವನ್ನು ಪಡೆಯಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕಾರಾಗೃಹದ ಸಹಾಯಕ ಅಧೀಕ್ಷಕರಾದಚನ್ನಪ್ಪ ಹಾಗೂ ಡಾ|| ಆನಂದ ಅಡಕಿ,ಪರಮಾನಂದ ಹರವಾಳ, ಜೈಲರ್,ಭೀಮಾಶಂಕರ್ ಡಾಂಗೆ, ಸಹಾಯಕ ಆಡಳಿತಾಧಿಕಾರಿಗಳ, ಮತಿ ಮಹಾದೇವಿ, ಸೈಕ್ಯಾಟ್ರಿಕ್,ಹರೀಶ್ ಗೌಳಿ ಹಾಗೂ ಆರೋಗ್ಯ ಮತ್ತು ಮಾನಸಿಕ ತಂಡದವರು ಭಾಗವಹಿಸಿದರು.

ಸ್ವಾಗತವನ್ನುನಾಗರಾಜ ಬಿರಾದಾರ, ಮನೋ ಸಾಮಾಜಿಕ ತಜ್ಞರು, ಡಿ.ಎಂ.ಹೆಚ್.ಪಿ, ಕಲಬುರಗಿರವರು ನೇರವೆರಿಸಿದರು. ನಿರೂಪಣೆ ಹಾಗೂ ವಂದಾರ್ಪಣೆಯನ್ನುನಾಗರಾಜ ಮುಲಗೆ, ಶಿಕ್ಷಕರು ಇವರು ನೇರವೇರಿಸಿಕೊಟ್ಟರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago