ಕಲಬುರಗಿ: ನಗರದ ಪ್ರತಿಸ್ಠಿತ ಅಪ್ಪನ ಕೆರೆಯು ಸಂಪೂರ್ಣವಾಗಿ ಹದಗೆಟ್ಟು ತಿಪ್ಪೆಯಂತೆ ಆಗಿದ್ದು, ಕೂಡಲೇ ಕೆರೆಯನ್ನು ಸ್ವಚ್ಛತೆ ಮಾಡಿ, ಸಾರ್ವಜನಿಕರಿಗೆ ಒಳ್ಳೆಯ ವಾತಾವರಣ ನಿರ್ಮಾಣ ಮಾಡವಂತೆ ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸಚೀನ್ ಎಸ್. ಫರತಾಬಾದ ಅವರು ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಲಬುರಗಿಯಲ್ಲಿ ಸುಮಾರು ಏಳು ಕೆರೆಗಳು ಇದ್ದವು. ಕೆರೆಗಳ ಜಾಗದಲ್ಲಿ ಆಕ್ರಮ ಮನೆಗಳನ್ನು ನಿರ್ಮಾಣ ಆಗಿದ್ದು, ಉಳಿದಿರುವ ಈ ಅಪ್ಪನ ಕೆರೆ ಮಾತ್ರ, ಈ ಕೆರೆಯಲ್ಲಿ ಸಾರ್ವಜನಿಕರು ಮನಸ್ಸಿಗೆ ಬಂದಂತೆ ಕಸದ ರಾಶಿ ಬಿಸಾಡಿ ಹೋಗುತ್ತಿದ್ದು, ಇದರಿಂದ ಕೆರೆಯ ಸಂಪೂರ್ಣವಾಗಿ ಹಾಳಾಗುತ್ತಿದೆ. ಇದಕ್ಕೆ ಮಹಾನಗರ ಪಾಲಿಕೆನೇ ನೇರ ಹೊಣೆಯಾಗಿದೆ.
ಕೆರೆಯಲ್ಲಿ ನೀರು ಇರುವದರಿಂದ ಸುತ್ತಮುತ್ತ ವಾಸಿಸುವ ನಿವಾಸಿಗಳ ಬೋರ್ವೇಲ್ಗಳಿಗೆ ನೀರು ಬರುತ್ತಿದ್ದು, ಸಾರ್ವಜನಿಕರು ಕೆರೆಯ ಪಕ್ಕದಲ್ಲಿ ಹೋಗುವ ಸಂದರ್ಭದಲ್ಲಿ ದುರ್ವಾಸನೆ ಬರುತ್ತಿದೆ. ಕೂಡಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿಗಳು. ಲೋಕಸಭಾ ಸದಸ್ಯರು. ದಕ್ಷಿಣ ಮತಕ್ಷೇತ್ರದ ಶಾಸಕರು, ಮಹಾನಗರ ಪಾಲಿಕೆ ಆಯುಕ್ತರು, ಅಪ್ಪನ ಕೆರೆಗೆ ಭೇಟಿ ನೀಡಿ ಅಪ್ಪನ ಕೆರೆಯಲ್ಲಿನ ಕಸವನ್ನು ತೆಗೆಯಿಸಿ, ಕೆರೆಯನ್ನು ಅಭಿವೃದ್ಧಿಗೊಳಿಸಿ ಸಾರ್ವಜನಿಕರಿಗೆ. ಮಕ್ಕಳಿಗೆ ಬೊಟ್ ಪ್ರಾರಂಭ ಮಾಡಿಸಿ ನಗರದಲ್ಲಿರುವ ಕೆರಗಳ ಸೌಂದರ್ಯಕರಣ ಮಾಡುವ ಮೂಲಕ ಒಳ್ಳೆಯ ವಾತಾವರಣ ನಿರ್ಮಾಣ ಮಾಡಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸುರೇಶ ಹನಗುಡಿ, ಅಕ್ಷಯ, ಅಣವೀರ ಪಾಟೀಲ, ರವಿ ಸಜ್ಜನ್, ಬಸ್ಸು, ಅಜಯ, ಪ್ರವೀಣ ಸಿಂಧೆ, ಅಂಬು ಮಸ್ಕಿ, ಸಾಯಿಕುಮಾರ ಸಿಂದೆ ಸೇರಿದಂತೆ ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…