ಆಳಂದನಲ್ಲಿ ಅದ್ದೂರಿ ವಿಕಾಸಪಥ ರಥಯಾತ್ರೆ

ಆಳಂದ; ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ, ವಿಕಾಸ ಅಕಾಡೆಮಿ ಮತ್ತು ಭಾರತ ವಿಕಾಸ ಸಂಗಮ ಪ್ರಾರಂಭವಾಗಿ 21 ವರ್ಷಗಳಾದ ಹಿನ್ನೆಲೆಯಲ್ಲಿ 7ನೇ ಭಾರತೀಯ ಸಂಸ್ಕøತಿ ಉತ್ಸವ ಎಂಬ ಬೃಹತ್ ಸಮಾವೇಶವನ್ನು ಒಟ್ಟು 240 ಎಕರೆ ಪ್ರದೇಶದಲ್ಲಿ ಪ್ರಕೃತಿ ನಗರ ಬೀರನಹಳ್ಳಿ, ಸೇಡಂ- ಕಲಬುರಗಿ ರಸ್ತೆಯಲ್ಲಿ ಜನೇವರಿ 29ರಿಂದ ಫೆಬ್ರುವರಿ 6, 2025ರ ವರೆಗೆ ಆಯೋಜಿಸಲಾಗಿದೆ ಎಂದು ಸೇಡಂನ ಸದಾಶಿವ ಮಹಾಸ್ವಾಮೀಜಿ ಹೇಳಿದರು.

ಆಳಂದ ಪಟ್ಟಣದಲ್ಲಿ ನಡೆದ ವಿಕಾಸ ಪಥ ರಥಯಾತ್ರೆಯ ನಂತರ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಗೆ 50 ವರ್ಷಗಳು ಪೂರೈಸಿವೆ. ಈ ಸುಸಂದರ್ಭದಲ್ಲಿ 2025ರ ಜನೇವರಿಯಲ್ಲಿ ಭಾರತೀಯ ಸಂಸ್ಕøತಿ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಜ.29ರಿಂದ ಫೆ.6ರ ವರೆಗೆ ಈ ಉತ್ಸವ ನಡೆಯಲಿದೆ. ಕೃಷಿ, ಜ್ಞಾನ, ವಿಜ್ಞಾನ, ಕಲಾ, ಮಕ್ಕಳ, ಉದ್ಯಮಿ, ಸುಜನ್ಯ, ಸಾಂಸ್ಕೃತಿಕ, ಯೋಗ ತರಬೇತಿ ಕಾರ್ಯಕ್ರಮಗಳು 240 ಎಕರೆ ಪ್ರದೇಶದಲ್ಲಿ ಆಯೋಜಿಸಲಾಗಿದೆ. ಇದರಲ್ಲಿ 5 ಸಾವಿರ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಗಣ್ಯರು, 5 ಸಾವಿರಾರು ಕಲಾವಿದರು ಸೇರಿದಂತೆ ಕಾರ್ಯಕ್ರಮದಲ್ಲಿ 30 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.

ಒಂಬತ್ತು ದಿನಗಳ ಕಾಲ ನಡೆಯುವ ಈ ಉತ್ಸವವು ವಿವಿಧ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ತಜ್ಞರನ್ನು / ಪರಿಣಿತರನ್ನು / ಸಂಪನ್ಮೂಲ ವ್ಯಕ್ತಿಗಳನ್ನು ಕಲ್ಯಾಣ ಕರ್ನಾಟಕದ ಶ್ರೀಸಾಮಾನ್ಯನಿಗಲ್ಲದೆ, ಅಖಿಲ ಕರ್ನಾಟಕ ಮತ್ತು ಅಖಂಡ ಭಾರತದ ಸಮಗ್ರ ಜನಸಮುದಾಯಕ್ಕೂ ಪರಿಚಯಿಸುವುದಲ್ಲದೆ, ಅವರೊಂದಿಗೆ ನೇರ ಸಂವಾದಕ್ಕೂ ಅವಕಾಶ ಕಲ್ಪಿಸುತ್ತದೆ. ಸಂವಾದ ಮತ್ತು ಚರ್ಚೆಯ ಮೂಲಕ ವಿವಿಧ ವಿಷಯಗಳ ಬಗ್ಗೆ ತಮ್ಮ ಜ್ಞಾನವೃದ್ಧಿಯನ್ನು ಮಾಡಿಕೊಳ್ಳುವ ಅವಕಾಶವನ್ನು ಈ ಮಹಾಸಂಗಮ ಎಲ್ಲರಿಗೂ ದೊರಕಿಸಲಿದೆ. ವಿವಿಧ ವಿಷಯಗಳಡಿಯಲ್ಲಿ ಪ್ರದರ್ಶನ, ವಿವಿಧ ಕಾರ್ಯಕ್ರಮ ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೃಷಿ ಲೋಕ – 11 ಎಕರೆ ವಿಸ್ತೀರ್ಣದಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಲೋಕ 6 ಎಕರೆ, ಸೃಜನ ಲೋಕ – 8 ಎಕರೆ, ಜ್ಞಾನ ಲೋಕ 24 ಎಕರೆ, ಮಕ್ಕಳ ಲೋಕ – 2 ಎಕರೆ, ವ್ಯವಹಾರ ಲೋಕ 8 ಎಕರೆ, ಕಲೆ ಮತ್ತು ಸಾಂಸ್ಕೃತಿಕ ಲೋಕ – 2 ಎಕರೆ ವಿಸ್ತೀರ್ಣದಲ್ಲಿ ಆಯೋಜಿಸಲಾಗಿದೆ. ಪ್ರತಿಯೊಂದು ವಿಭಾಗದಲ್ಲೂ ಕಮ್ಮಠ, ಉಪನ್ಯಾಸ, ಪ್ರಾತ್ಯಕ್ಷಿಕೆ, ಸಂವಾದ ಇತ್ಯಾದಿಗಳು ಜರುಗಲಿವೆ. 9 ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ, ನಮ್ಮ ರಾಜ್ಯವμÉ್ಟೀ ಅಲ್ಲದೆ ದೇಶದ ಪ್ರಖ್ಯಾತ / ಉನ್ನತ ಹೆಸರಾಂತ ವ್ಯಕ್ತಿಗಳನ್ನು ಮತ್ತು ಉಪನ್ಯಾಸಕಾರರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನಿಸಲಾಗುವುದು. ಪ್ರತಿನಿತ್ಯ ಸರಿಸುಮಾರು ಎರಡು ಲಕ್ಷ ವೀಕ್ಷಕರು ಬಂದು ಇದರ ಉಪಯೋಗ ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.

ಮಾದನಹಿಪ್ಪರ್ಗಾದ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿ, ಉತ್ಸವಕ್ಕೆ ಆಳಂದ ತಾಲೂಕಿನಿಂದ ಕನಿಷ್ಟ 1 ಲಕ್ಷ ಜನರನ್ನು ಕಳುಹಿಸಿ ಉತ್ಸವ ಐತಿಹಾಸಿಕವಾಗಿ ಜರುಗುವಂತೆ ಮಾಡಲು ಸಹಕರಿಸುವುದಾಗಿ ಹೇಳಿದರು.
ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ ಮಾತನಾಡಿ, ಪ್ರಕೃತಿ ಕೇಂದ್ರಿತ ಅಭಿವೃದ್ಧಿಯನ್ನು ಪರಿಗಣಿಸಿ ನಿಸರ್ಗಕ್ಕೆ ಹಾನಿಯಾಗದಂತೆ, ಪರಿಸರವನ್ನು ಶೋಷಣೆ ಮಾಡದೆ, ಸ್ವಾಭಾವಿಕ ಸಂಪನ್ಮೂಲಗಳಿಗೆ ಧಕ್ಕೆಯಾಗದ ಪರಿಕಲ್ಪನೆಯಿಂದ ಭಾರತ ವಿಕಾಸ ಸಂಗಮ ಉದಯಿಸಿದೆ. ಜಲ, ಜಮೀನು, ಅರಣ್ಯ, ಪಶು, ಪಕ್ಷಿ ಮತ್ತು ಪ್ರಾಣಿ ಸಂಪತ್ತನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಉಳಿಸುವುದು ಭಾರತದ ಪ್ರಜ್ಞಾವಂತ ನಾಗರಿಕರಾದ ನಮ್ಮೆಲ್ಲರ ಆದ್ಯ ಕರ್ತವ್ಯ ಬುದ್ಧಿವಂತ, ಪ್ರಜ್ಞಾವಂತ ನಾಗರಿಕನಾದ ಮಾನವ ನಿಸರ್ಗದ ಜೊತೆ ಸಾಮರಸ್ಯದಿಂದ ಬದುಕುವುದನ್ನು ಕಲಿತುಕೊಳ್ಳಬೇಕು. ಅಲ್ಲದೆ ನಮಗೆ ವರದಾನವಾಗಿ ಬಂದ ಈ ಭೂಮಿ ಮತ್ತು ಆದರ ಎಲ್ಲಾ ಸ್ವಾಭಾವಿಕ ಸಂಪನ್ಮೂಲಗಳನ್ನು ಮುಂಬರುವ ಪೀಳಿಗೆಗೆ ಯಥಾವತ್ತಾಗಿ ಕೊಡಲು ಪಣತೊಡಬೇಕು ಎಂಬ ಗುರಿ ನಮ್ಮೆಲ್ಲರದು ಆಗಿರಬೇಕು ಎಂಬುದೇ ಭಾರತ ವಿಕಾಸ ಸಂಗಮದ ಮಹತ್ತರ ಅಭಿಲಾμÉ ಎಂದಾಗಿದೆ ಎಂದು ಹೇಳಿದರು.

ಈ ಉತ್ಸವದ ಪೂರಕ ಪ್ರೇರಣಾದಾಯಿ ಕಲ್ಯಾಣ ಕರ್ನಾಟಕ ವಿಕಾಸ ಪಥ ಸಂಚಾರವನ್ನು ಸೇಡಂನ ಶ್ರೀ ಕೊತ್ತಲಬಸವೇಶ್ವರ ದೇವಸ್ಥಾನದ ಯುವ ಗುರು ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ಕೈಗೊಂಡಿದ್ದಾರೆ. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಒಟ್ಟು 48 ತಾಲೂಕುಗಳಲ್ಲಿ 5 ಸಾವಿರ ಕೀ.ಮೀ. ವ್ಯಾಪ್ತಿಯಲ್ಲಿ ಇದೇ ಆಗಷ್ಟ್ 22ರಂದು ಆರಂಭವಾಗಿದ್ದು ಸೆಪ್ಟೆಂಬರ್ 11 ರಂದು ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಮಾದನಹಿಪ್ಪರ್ಗಾದ ಶಾಂತವೀರ ಶಿವಾಚಾರ್ಯರು, ನರೋಣಾದ ಗುರುಮಹಾಂತ ಸ್ವಾಮೀಜಿ, ಯಳಸಂಗಿಯ ಪರಮಾನಂದ ಸ್ವಾಮೀಜಿ, ಆಳಂದ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು ಇದ್ದರು.

ಪ್ರಮುಖರಾದ ಮಲ್ಲಿಕಾರ್ಜುನ ಕಂದಗೂಳೆ, ಪ್ರಕಾಶ ಮಾನೆ, ಅಪ್ಪಾಸಾಬ ತೀರ್ಥೆ, ಗುಂಡು ಗೌಳಿ, ಪುರಸಭೆ ಸದಸ್ಯ ಶಿವಪುತ್ರ ನಡಗೇರಿ, ಬಸವರಾಜ ಹತ್ತರಕಿ, ಮಲ್ಲಿಕಾರ್ಜುನ ಕರಲಗಿ, ಮಲ್ಲಿನಾಥ ತುಕ್ಕಾಣೆ, ಮಲ್ಲಿಕಾರ್ಜುನ ಬುಕ್ಕೆ, ರಾಜೇಂದ್ರ ಭಾವಿ, ದತ್ತಾತ್ರೇಯ ಬಿರಾದಾರ ಸೇರಿದಂತೆ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ರಥಯಾತ್ರೆ ಮತ್ತು ಸಭೆಯಲ್ಲಿ ಭಾಗವಹಿಸಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

12 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

14 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

21 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

21 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

22 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago