ಕಲಬುರಗಿ: ಉತ್ತಮ ವಾಗ್ಮಿಗಳಾಗಿ ಕನ್ನಡದ ಅಸ್ಮಿತೆಗಾಗಿ ಕನ್ನಡದ ಗಟ್ಟಿ ಧ್ವನಿಯಾಗಿ ಪ್ರಚಾರದಿಂದ ದೂರವಿದ್ದು ಸದ್ದಿಲ್ಲದೆ ಶಿಖರವನೇರಿದ್ದ ನರಿಬೋಳದ ಶಾಂತಪ್ಪ ಪಾಟೀಲ ನರಿಬೋಳ ಅವರ ಸ್ಮರಣಾರ್ಥ ಪರೋಪಕಾರಿಗಳಿಗೆ ಶಾಂತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಜೇವರ್ಗಿ ತಾಲೂಕಾಧ್ಯಕ್ಷರಾಗಿ ಕನ್ನಡದ ರಥವನ್ನು ಸಮರ್ಪಕವಾಗಿ ಎಳೆದು ಅನೇಕ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವ ಕಾರ್ಯ ಮಾಡಿದ್ದು ತಾಲೂಕಿನ ಜನತೆ ಇವತ್ತಿಗೂ ಮರೆತಿಲ್ಲ. ಇಂಥ ಮೇರು ಕನ್ನಡದ ಕಟ್ಟಾಳು ನರಿಬೋಳ ಶಾಂತಪ್ಪ ಪಾಟೀಲ ಅವರನ್ನು ಚಿರಸ್ಥಾಯಿಯಾಗಿರಿಸಲು ಇಂಥ ಜನಮುಖಿ ಕಾರ್ಯಕ್ರಮಗಳು ಪ್ರತಿಷ್ಠಾನ ನಿರಂತರವಾಗಿ ಆಯೋಜಿಸುತ್ತಾ ಬರಲಾಗುತ್ತಿದೆ.
ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗಳ ನೆಲೆಯನ್ನು ಮತ್ತಷ್ಟು ಭದ್ರಗೊಳಿಸುವಲ್ಲಿ ಅಪಾರ ಶ್ರಮ ಪಟ್ಟಿರುವ ಲಿಂ. ಶಾಂತಪ್ಪ ಪಾಟೀಲ ನರಿಬೋಳ ಅವರು ಧಾರ್ಮಿಕ ಕ್ಷೇತ್ರಗಳಲ್ಲೂ ಕೂಡ ಆಧ್ಯಾತ್ಮಿಕ ವಿಷಯಗಳ ಜೊತೆಗೆ ಕನ್ನಡದ ಉಳಿವಿನ ಜನಜಾಗೃತಿ ಮೂಡಿಸುವ ಕಾರ್ಯ ಅವರ ಬದುಕಿನುದ್ದಕ್ಕೂ ಮಾಡಿದ್ದಾರೆ.
ನಮ್ಮ ಕನ್ನಡ ನೆಲವನ್ನು ಮತ್ತಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಶ್ರಮಿಸಿದ ಮಹನೀಯರನ್ನು ನೆನೆಯುವ ಕಾರ್ಯ ಈ ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿದೆ…ಈ ಭಾರಿ ಮಲ್ಲಿನಾಥಗೌಡ ಪಾಟೀಲ ಯಲಗೋಡ ರಾಜಕೀಯ ಕ್ಷೇತ್ರ ಡಾ.ದಯಾನಂದರೆಡ್ಡಿ ಡಿಗ್ಗಾವಿ ಮೆಟ್ರೋ ಆಸ್ಪತ್ರೆಯ ಎಂಡಿ ವೈದ್ಯೆಕೀಯ ಕ್ಷೇತ್ರ ಇರ್ವರು ಮಹನಿಯರುಗಳಿಗೆ ಶಾಂತಶ್ರೀ ಪ್ರಶಸ್ಥಿ ನೀಡಲು ತಿರ್ಮಾನಿಸಲಾಗಿದ್ದು ಇದೆ ಸೆಪ್ಟೆಂಬರ್ 12 ರಂದು ನಗರದ ಕನ್ನಡ ಬವನ ಬವನದಲ್ಲಿ 5 ಗಂಟೆಗೆ ಪ್ರಶಸ್ಥಿ ಪ್ರಧಾನ ಹಮ್ಮಿಕೋಳ್ಳಲಾಗಿದೆ.
ದಿ. ಶಾಂತಪ್ಪಾ ಪಾಟೀಲ ನರಿಬೋಳ 11 ಪುಣ್ಯೆಸ್ಮರಣೆ ಅಂಗವಾಗಿ ಶಾಂತಶ್ರೀ ಪ್ರಶಸ್ಥಿ ಪ್ರಧಾನ ಮಾಡಲಾಗುತ್ತಿದೆ ಸಮಾರಂಬದ ದಿವ್ಯ ಸಾನಿದ್ಯವನ್ನು ಯಾದಗೀರ ಜಿಲ್ಲಾ ಮಠಾಧೀಶರ ಒಕ್ಕೂಟ ಅಧ್ಯಕ್ಷರಾದ ದೇವಪುರ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠ ಹಾಗೂ ಸ್ಟೇಷನ್ ಬಬಲಾದ ಬೃಹನ್ಮಠದ ಶ್ರೀ ಷ.ಬ್ರ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಜಿ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಶ್ರೀ ತೋಂಟದಾರ್ಯ ಶಿದ್ದಲಿಂಗೆಶ್ವರ ಮಠ ರುದುನೂರ ಕಾಳಗಿ ವಹಿಸಿಕೋಳ್ಳಲಿದ್ದಾರೆ.
ಉಧ್ಘಾಟನೆ ಶರಣಬಸ್ಸಪ್ಪಗೌಡ ದರ್ಶನಾಪುರ ಸಣ್ಣ ಕೈಗಾರಿಕಾ ಸಚಿವರು ಕರ್ನಾಟಕ ಸರ್ಕಾರ ಉದ್ಘಾಟಿಸಲಿದ್ದು ಮುಖ್ಯೆ ಅತಿಥಿಗಳಾಗಿ ಡಾ.ಶರಣಪ್ಪಾ ಡಗೆ ಪೋಲಿಸ್ ಆಯುಕ್ತರು ಕಲಬುರಗಿ ಆಗಮಿಸುತಿದ್ದು ಅತಿಥಿಗಳಾಗಿ ಶಿವರಾಜಪಾಟೀಲ ರದ್ದೆವಾಡಗಿ ಬಾಜಪಾ ಜಿಲ್ಲಾಧ್ಯಕ್ಷರು ಕಲಬುರಗಿ ಸಂತೋಷ ಬಿಲಗುಂದಿ ಉದ್ಯಮಿಗಳು ಕಾವ್ಯಶ್ರೀ ಮಹಾಗಾಂವಕರ್ ಸಾಹಿತಿಗಳು ಚೇತನ್ ಗೌಡ ಗೋನಾಯಕ್ ರಾಷ್ಟ್ರೀಯ ಸಂಯೋಜಕರು
ಭಾರತೀಯ ಯುವ ಕಾಂಗ್ರೆಸ್ ಮಾದ್ಯಮ ವಿಬಾಗ ಮಹೇಶ್ವರಿ ಶಿವಕುಮಾರ ವಾಲಿ ಜೆ ಡಿ ಎಸ್ ಮಹಿಳಾ ಮುಖಂಡರು ಆಗಮಿಸಲಿದ್ದಾರೆ.
ಸಂದರ್ಬ ರಾಷ್ಠ್ರಪತಿ ಪದಕ ಪಡೆದ ಡಿವೈಎಸ್ ಪಿ ಬಸವೇಶ್ವರ ಹೀರಾ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಷ್ತಿ ಪಡೆದ ದೆವಿಂದ್ರಪ್ಪಾ ಗಣಮುಖಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರನ್ನು ಹಾಗು ಅಖೀಲ ಬಾರತ ವೀರಶೈವ ಲಿಂಗಾಯತ ಮಹಾಸಬೆಯ ರಾಷ್ಠ್ರೀಯ ಕಾರ್ಯಕಾರಿಣಿ ಸದಶ್ಯರಾದ ಚಂದು ಪಾಟೀಲ ಹಾಗು ರಾಜ್ಯ ಕಾರ್ಯಕಾರಿಣಿ ಸದಶ್ಯರುಗಳನ್ನು ಕಲಬುರಗಿ ನೂತನ ಜಿಲ್ಲಾದ್ಯಕ್ಷ ಶರಣಕುಮಾರ ಮೋದಿ ಮತ್ತು ತಂಡದ ಎಲ್ಲಾ ಕಾರ್ಯಕಾರಿಣಿ ಸದಶ್ಯರು ಜಿಲ್ಲೆಯ ಎಲ್ಲಾ ತಾಲುಕುಗಳ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಎಂ ಎಸ್ ಪಾಟೀಲ ನರಿಬೋಳ ಅದ್ಯಕ್ಷ ಶಾಂತಪ್ಪಾ ಪಾಟೀಲ ನರಿಬೋಳ ಪ್ರತಿಷ್ಠಾನ ಕಲಬುರಗಿ ತಿಳಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…