ಗಳಿಸಿಕೊಳ್ಳಬೇಕಾಗಿರುವುದು ಸಾಮ್ರಾಜ್ಯವನ್ನಲ್ಲ, ಒಳ್ಳೆಯ ಸಂಬಂಧ, ವಿಶ್ವಾಸ, ಪ್ರೀತಿ

ಕಲಬುರಗಿ; ಮಹಾದೇವಪ್ಪ ರಾಂಪೂರೆ ಕೂಡಾ ಬಡಾವಣೆಯಲ್ಲಿ ಸ್ಪಂದನಾ ನಾಗರೀಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಟೇಂಗಳಿ ಹಾಗು ಮಂಗಲಗಿ ಶಾಂತೇಶ್ವರ ಮಠದ ಪೀಠಾಧಿಪತಿಗಳಾದ ಡಾ. ಶಾಂತಸೋಮನಾಥ ಶಿವಾಚಾರ್ಯರು ಮಾತನಾಡಿದರು.

ಗೆಲ್ಲುವುದು ಹಂಚಿಕೊಳ್ಳುವುದು ಕಳೆದುಕೊಳ್ಳುವುದು ಇವು ಮೂರು ಜೀವನದಲ್ಲಿ ಮಹತ್ವವಾದುದು ನಮ್ಮ ಬದುಕು ಸಾರ್ಥಕ ಹಾಗು ಸುಂದರಗೊಳಿಸಬೇಕಾದರೆ ನಮ್ಮ ನಡೆ ನುಡಿ ಬರಹ ಶುದ್ಧವಾಗಿರಬೇಕೆ ಹೊರತು ಇನ್ನೊಬ್ಬರಿಗೆ ನೋವು ದುಃಖ ಕೊಡುವಂತಹದಾಗಿರಬಾರದು. ಸಾರ್ಥಕ ಹಾಗು ಸುಂದರ ಬದುಕು ನಮ್ಮದಾಗಿಸಿಕೊಳ್ಳಬೇಕೆಂದರೆ ಗೆಲ್ಲಬೇಕಾಗಿರುವುದು ಇನ್ನೊಬ್ಬರ ಹೃದಯವೇ ಹೊರತು ಸಾಮ್ರಾಜ್ಯವನ್ನಲ್ಲ ಕಳೆದುಕೊಳ್ಳಬೇಕಾಗಿರುವುದು ಕೆಟ್ಟ ವಿಚಾರಗಳೆ ಹೊರತು ಒಳ್ಳೆಯದನ್ನಲ್ಲ ಹಂಚಿಕೊಳ್ಳಬೇಕಾಗಿರುವುದು ಪ್ರೀತಿ, ಪ್ರೇಮ, ನಂಬಿಕೆ ಗೌರವವೇ ಹೊರತು ಭೌದ್ಧಿಕ ಆಸ್ತಿಗಳಲ್ಲ ಎಂದು ಇಂದಿನ ಸಾಮಾಜಿಕ ಜೀವನದಲ್ಲಿನ ನಮ್ಮ ನಡೆ-ನುಡಿ ಬರಹಗಳ ಪರಿಣಾಮ ಮತ್ತು ದುಷ್ಪರಿಣಾಮ ಕುರಿತು ಆರ್ಶಿವಚನ ನೀಡಿದರು.

ಈ ಚಿಂತನ ಮಂಥನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಟೇಂಗಳಿ ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಅವರು ಮಾತನಾಡುತ್ತ ಇಂದು ವಿಶೇಷ ದಿನ ಶಿಕ್ಷಕರ ದಿನಾಚರಣೆ ತಮ್ಮ ಹುಟ್ಟುಹಬ್ಬದ ದಿನವನ್ನು ಸಾರ್ವತ್ರಿಕಗೊಳಿಸಿ ತಮ್ಮ ತನವನ್ನು ತ್ಯಾಗ ಮಾಡಿದ ಇಬ್ಬರು ಮಹಾನ ಮೇದಾವಿಗಳೆಂದರೆ ಡಾ. ಸರ್ವಪಲ್ಲಿ ರಾಧಾಕೃಷ್ಣನ ಶಿಕ್ಷಕರ ದಿನಾಚರಣೆ ಮಾಡಿದ್ದು, ಪಂಡಿತ ಜವಾಹಾರಲಾಲ ನೆಹರು ಮಕ್ಕಳ ದಿನಾಚರಣೆ ಎಂದು ಘೋಷಿಸಿದ್ದು ತ್ಯಾಗವಲ್ಲವೇ ಎಂದು ತನ್ನ ವಿದ್ಯಾರ್ಥಿ ಜೀವನದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದ ಶಿಕ್ಷಕರಾದ ಶಿವಾಜಿ, ಮಡಿವಾಳಯ್ಯ, ಎಸ್.ಜಿ. ಮೇಳಕುಂದಿ, ಶಿಕ್ಷಕರನ್ನು ಸ್ಮರಿಸಿಕೊಳ್ಳುತ್ತ ಒಂದು ತಿಂಗಳ ಪರ್ಯಂತ ಚಿಂತನ ಮಂಥನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಅಭಿಮಾನಕ್ಕೆ ಸ್ಪಂದನಾ ಸಂಘದ ಅಧ್ಯಕ್ಷ ಡಾ. ಬಾಬುರಾವ ಕುಲಕರ್ಣಿ ಅವರಿಗೆ ಶಿಕ್ಷಕರ ದಿನದ ನಿಮಿತ್ಯ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರ ಕೊಟ್ಟು ಅಭಿನಂದಿಸಿ ನಂತರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸುಮಾರು 12ಜನ ಶಿಕ್ಷಕರಿಗೆ ಟೇಂಗಳಿ ಅಂಡಗಿ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಶಿವಕುಮಾರ ಪಂಚಾಳ ಅಧ್ಯಕ್ಷತೆ ವಹಿಸಿದರು, ಸಂಜೀವ ಮಹಾಜನ ಗುಂಡಾಚಾರ್ಯ ವೇದಿಕೆ ಮೇಲೆ ಉಪಸ್ಥಿತರಿದ್ದರು. ಡಾ.ಬಾಬುರಾವ ಕುಲಕರ್ಣಿ ಸ್ವಾಗತಿಸಿದರು. ಡಾ. ನಾಗರಾಜ ಬಡಿಗೇರ ನಿರೂಪಿಸಿದರು.

ಸಮಾರಂಭದಲ್ಲಿ ಕಸಾಪ ಟೇಂಗಳಿ ವಲಯ ಘಟಕದ ಅಧ್ಯಕ್ಷ ಭೀಮಾಶಂಕರ ಅಂಕಲಗಿ ಪದಾಧಿಕಾರಿಗಳಾದ ಗುಂಡಪ್ಪ ಪಟ್ಟೇದ, ರಾಜಕುಮಾರ ಪಟ್ಟೇದ, ವಿಜಯಕುಮಾರ ಪಟ್ಟೇದ ಹಾಗು ಹಿರಿಯರಾದ ವೆಂಕಟರಡ್ಡಿ, ನಾಗೇಂದ್ರರಾವ ಮುಚ್ಚೆಟ್ಟಿ, ನಾಗಣ್ಣ ಮುಂಜೆ, ರಮೇಶ ಸಿಂಪಿ, ಗೌಡಪ್ಪಗೌಡ ಪಾಟೀಲ, ಡಾ. ಅಣ್ಣರಾವ ಪೊ.ಪಾಟೀಲ, ಮಲ್ಲಿಕಾರ್ಜುನ ಮಿಣಜಗಿ, ಶಿವಕುಮಾರ ಪಾಂಚಾಳ, ಡಾ.ಅಂಬ್ರಿಷ ಕೋಳಕೂರ, ಶಿವಾಜಿ ಜಿ.ಕೆ. ವಿನೋದಕುಮಾರ ಜೆನೇವರಿ, ಅಚಲರಾಜ ಅಂಡಗಿ, ಶೈಲಜಾ ಪಾಟೀಲ, ಸ್ವರಾಜ ಲಕ್ಷ್ಮಿರಡ್ಡಿ ಉಪಸ್ಥಿತರಿದ್ದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

1 hour ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

1 hour ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

3 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

3 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

4 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

4 hours ago