ವಾಡಿ: ಸಮೀದ ಬಳವಡಿ ಗ್ರಾಮದಲ್ಲಿ ಭಾರತೀಯ ಸೇನಾಪಡೆಯಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಷಣ್ಮುಖ ಲೋಕು ಚವ್ಹಾಣ ಅವರಿಗೆ ಗ್ರಾಮದ ಸಮಸ್ತ ಅಭಿಮಾನಿ ಬಳಗದಿಂದ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಪೂಜ್ಯ ಶ್ರೀ ಸೋಮಶೇಖರ್ ಶಿವಾಚಾರ್ಯರು ಕಂಬಳೇಶ್ವರ ಮಠ ಚಿತಾಪುರ ಶ್ರೀಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹುಟ್ಟಿದರೆ ತಾಯಿ ಸಂತೋಷ ಪಡಬೇಕು ಬೆಳೆದರೆ ತಂದೆ ಗರ್ವ ಪಡಬೇಕು,
ಬದುಕಿದರೆ ಸಮಾಜ ಇಷ್ಟಪಡಬೇಕು ಅದಕ್ಕೆ ನಮ್ಮ ಷಣ್ಮುಖ ಲೋಕು ಚವ್ಹಾಣ ರವರು ಉದಾರಣೆ ಯಾಗಿದ್ದಾರೆ, ಅವರು ತಂದೆ, ತಾಯಿ, ಹೆಂಡತಿ ಮಕ್ಕಳ ಪರಿವೇ ಇಲ್ಲದೆ ದೇಶದ ರಕ್ಷಣೆಯಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದು ನಿಜಕ್ಕೂ ಹೆಮ್ಮೆಯ ವಿಷಯ, ಇದಕ್ಕೆ ಅವರ ತಂದೆ ತಾಯಿ ದೊಡ್ಡ ಮನಸ್ಸು ಮಾಡಿದ್ದಾರೆ ಎಂದು ಹೇಳಿದರು.
ಪೂಜ್ಯಶ್ರೀ ಜೇಮಸಿಂಗ ಮಹಾರಾಜರು ಯಲ್ಲಾಲಿಂಗೇಶ್ವರ ಪುಣ್ಯಾಶ್ರಮ ಮುಗುಳನಾಗಾಂವ, ಪೂಜ್ಯಶ್ರೀ ರಾಜಶೇಖರ ಶಿವಾಚಾರ್ಯರು ಸಿದ್ದೇಶ್ವರ ಹಿರೇಮಠ ಹಳಕರ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ರಮೇಶ ಕಾರಬಾರಿ, ಸುರೇಶ ರಾಠೋಡ, ದಂಡಯ್ಯ ಸ್ವಾಮಿ ಹಿರೇಮಠ, ಮಲ್ಲಣ್ಣಗೌಡ ಪೊಲೀಸ್ ಪಾಟೀಲ್, ವಿಶ್ವನಾಥ್ ರೆಡ್ಡಿ ಮಾಲಿ ಪಾಟೀಲ್ ,ವಿಕ್ರಮ್ ನಾಯಕ್ ಬಾಬುಮಿಯ,ತುಕಾರಾಮ ರಾಠೋಡ,ಗಿರಿಮಲ್ಲಪ್ಪ ಕಟ್ಟಿಮನಿ, ಫಕೀರಪ್ಪ ಎಸಿಸಿ,ವೀರಣ್ಣ ಯಾರಿ, ಕಾಶಿನಾಥ ಶೆಟಗಾರ,ಕಿಶನ ಜಾಧವ, ಅಂಬದಾಸ ಜಾಧವ ಇದ್ದರು.
ರಾಚಯ್ಯ ಸ್ವಾಮಿ ಸ್ವಾಗತಿಸಿದರು ,ನರಸಪ್ಪ ಚಿನ್ನಕಟ್ಟಿ ನಿರೂಪಿಸಿದರು, ಅಂಬರೀಶ ಸ್ವಾಮಿ ವಂದಿಸಿದರು.
ಇದಕ್ಕೂ ಮುನ್ನ ವಾಡಿ ರೈಲ್ವೆ ನಿಲ್ದಾಣದಿಂದ ಬಳವಡಗಿ ಗ್ರಾಮದವರೆಗೆ ತೆರದ ಜೀಪ್ ನಲ್ಲಿ ಭವ್ಯ ಮೆರವಣಿಗೆ ನಡೆಯಿತು.
ನೂರಾರು ಜನರು,ಬಂಜಾರ ನೃತ್ಯದೊಂದಿಗೆ ಮಹಿಳೆಯರು ಪಾಲ್ಗೊಂಡಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…