ಕಲ್ಯಾಣದ ಪ್ರಗತಿಗಾಗಿ ಶಾಸಕ ಬಿ.ಆರ್. ಪಾಟೀಲರೊಂದಿಗೆ ತಜ್ಞರ ಸಮಾಲೋಚನಾ ಸಭೆ

ಕಲಬುರಗಿ: ಕಲ್ಯಾಣ ಕರ್ನಟಕ ಪ್ರದೇಶದ ರಚನಾತ್ಮಕ ಪ್ರಗತಿ ಮತ್ತು ೩೭೧ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನ ಸೇರಿದಂತೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಪರ ಸುಮಾರು ೧೬ ಅಂಶಗಳ ವಿಷಯಗಳ ಕುರಿತು ಮುಖ್ಯಮಂತ್ರ್ರಿಗಳ ರಾಜಕೀಯ ಸಲಹೆಗಾರ ಶಾಸಕ ಬಿ.ಆರ್. ಪಟೀಲವರೊಂದಿಗೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ಕಲ್ಯಣದ ಪರಿಣಿತ ತಜ್ಞರ, ಚಿಂತಕರ ಹಾಗೂ ಪ್ರಮುಖರ ಸಮಲೋಚನಾ ಸಭೆ ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿ ನಡೆಯಿತು.

ಈ ಮಹತ್ವದ ಸಭೆಯಲ್ಲಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಕಲಬುರಗಿಯಲ್ಲಿ ಒಂದು ದಶಕದ ನಂತರ ಸರಕಾರ ೩೭೧ನೇ(ಜೆ) ಕಲಂ ದಶಮಾನೋತ್ಸವದ ಸಂದರ್ಭದಲ್ಲಿ ಸಂಪುಟ ಸಭೆ ನಡೆಸುತ್ತಿರುವುದಕ್ಕೆ ಸ್ವಾಗತಿಸಿ ಕಲಾಣ ಕರ್ನಾಟಕದ ೩೭೧ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನ ಸೇರಿದಂತೆ, ಕಲ್ಯಾಣದ ನೀರಾವರಿ, ಕೈಗಾರಿಕೆ, ರಸ್ತೆ, ಸಾರಿಗೆ, ಶಿಕ್ಷಣ ರೈಲ್ವೆ, ಪ್ರವಾಸೋಧ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಂಡಿಸಿದರು. ಅದಕ್ಕೆ ಪೂರಕವಾಗಿ ಪ್ರೊ.ಆರ್.ಕೆ. ಹುಡಗಿಯವರು, ಪ್ರೊ. ಬಸವರಾಜ ಕುಮನೂರವರು, ಡಾ. ಸುರೇಶಕುಮಾರ, ರೌಫ್ ಖಾದ್ರಿ, ಪ್ರೊ. ಗುರುಬಸಪ್ಪನವರು, ಡಾ. ಮಾಜಿದ್ ದಾಗಿಯವರು, ಪ್ರೊ. ಮಂಜೂರ ಡೆಕ್ಕನಿಯವರು ವಿಷಯಗಳ ಬಗ್ಗೆ ವಿಶ್ಲೇಷಣೆ ಮಡಿ ಮನವರಿಕೆ ಮಾಡಿದರು.

ಸುಮಾರು ೩ ಗಂಟೆಗಳವರೆಗೆ ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಬಗ್ಗೆ ಅಲಿಸಿದ ಶಾಸಕ ಬಿ.ಆರ್. ಪಾಟೀಲವರು ಬರುವ ಕಲಬುರಗಿಯ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ರಚನತ್ಮಕ ಪ್ರಗತಿಗೆ ಮತ್ತು ೩೭೧ನೇ (ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಹೋರಾಟ ಸಮಿತಿ ಕಳೆದ ಎರಡು ತಿಂಗಳುಗಳಿಂದ ಏಳು ಜಿಲ್ಲೆಗಳಲ್ಲಿ ನಡೆಸಿರುವ ಬೃಹತ್ ಹೋರಾಟಗಳಿಗೆ ಸ್ಪಂದಿಸಿ ಸಮಿತಿ ಕಲ್ಯಾಣದ ಜನಮಾನಸಕ್ಕೆ ಸಂಬಂಧಿಸಿದ ಬೇಡಿಕೆಗಳ ಬಗ್ಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಪ್ರಿಯಾಂಕ ಖರ್ಗೆಯವರೊಂದಿಗೆ ಸಮಾಲೋಚನೆ ಮಾಡಿ ಕಲಬುರಗಿಯಲ್ಲಿ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲು ತಾವು ಗಂಭೀರವಾಗಿ ಪರಿಗಣಿಸುವುದಾಗಿ ವಿವರಿಸುತ್ತಾ ಭರವಸೆ ನೀಡಿದರು. ಅದರಂತೆ ಕಲ್ಯಾಣದ ರಚನಾತ್ಮಕ ಪ್ರಗತಿಗೆ ಸೈದ್ಧಾಂತಿಕ ತಳಹದಿಯ ಮೇಲೆ ಹೋರಾಟಗಳು, ಚಿಂತನೆಗಳು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ನಿರಂತರವಾಗಿ ನಡೆಯಬೇಕೆಂದು ಈ ಸಭೆಯ ಮುಖಾಂತರ ಏಳು ಜಿಲ್ಲೆಯ ಅಭಿವೃದ್ಧಿಪರ ಬುದ್ಧಿ ಜೀವಿಗಳಿಗೆ, ಪ್ರಗತಿಪರರಿಗೆ, ವಿಶೇಷ ಕರೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿರುವ ಸಮಿತಿಯ ಗೌರವ ಅಧ್ಯಕ್ಷರಾದ ಬಸವರಾಜ ದೇಶಮುಖ ಅವರು ಮಾತನಾಡಿ ಶಾಸಕರಾದ ಬಿ.ಆರ್. ಪಾಟೀಲವರ ಸಲಹೆಯಂತೆ ಬುದ್ಧಿ ಜೀವಿಗಳ, ಚಿಂತಕರನ್ನೊಳಗೊಂಡಂತೆ, ವಿನೂತನ ಮಾದರಿಯ ವಿಚಾರ ಸಂಕಿರಣವನ್ನು ಸೆಪ್ಟೆಂಬರ ಎರಡನೇ ವಾರದಲ್ಲಿ ಶರಣಬಸವ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಅದರಂತೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಮಿತಿ ಮನವರಿಕೆ ಮಾಡಿರುವಂತೆ ಸಂಪುಟದಲ್ಲಿ ನಮ್ಮ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಗಣನೆಗೆ ತೆಗೆದುಕೊಳ್ಳಲು ವಿಷಯಗಳನ್ನು ಮನವರಿಕೆ ಮಾಡಲಾಗಿದೆ. ಅದರಂತೆ, ಅವರ ಕಲಬುರಗಿ ಭೇಟಿಯ ಸಂದರ್ಭದಲ್ಲಿ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲು ಸಮಿತಿ ನಿರ್ಧರಿಸಿದೆ ಎಂದರು.

ಈ ಮಹತ್ವದ ಸಭೆಯಲ್ಲಿ ಅಶೋಕ ಗುರೂಜಿ, ಕೈಲಾಸನಾಥ ದೀಕ್ಷಿತ, ಅಖ್ತರ ಇನಾಮದಾರ, ಅಭಿಷೇಕ ಪಾಟೀಲ, ಆನಂದ ದೇಶಪಾಂಡೆ, ಭೀಮಶೆಟ್ಟಿ ಮುಕ್ಕಾ, ಅಸ್ಲಂ ಚೌಂಗೆ, ಶ್ರೀಧರ ಪಾಟೀಲ, ಮಹೇಶ ಬಿರಾದಾರ, ಶಿವಾನಂದ ಪಾಟೀಲ, ರವೀಂದ್ರ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

emedialine

Recent Posts

ಬಂದಾ ನವಾಜ್ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಚಿವ ಜಮೀರ್ ಅಹ್ಮದ್ ಖಾನ್

ಕಲಬುರಗಿ: ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಮತ್ತು ವಸತಿ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಇಲ್ಲಿನ…

5 hours ago

ಕಣ್ಣುಗಳನ್ನು ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಲು ಜಿ. ಪಂ. ಮಾಜಿ ಸದಸ್ಯೆ ಅನಿತಾ ವಳಕೇರಿ ಕರೆ

ಕಲಬುರಗಿ: ನೇತ್ರದಾನ ಮಹಾದಾನ, ಪ್ರತಿಯೊಬ್ಬರೂ ತಮ್ಮ ನೇತ್ರದಾನ ಮಾಡುವುದರೊಂದಿಗೆ ಅಂಧರ ಬಾಳಿಗೆ ಬೆಳಕಾಗಲು ಮುಂದೆ ಬರಬೇಕು ಎಂದು ಜಿಲ್ಲಾ ಪಂಚಾಯತ್…

5 hours ago

ಲಿಂಗರಾಜ ಶಾಸ್ತ್ರಿ ಪುಣ್ಯಸ್ಮರಣೋತ್ಸವ: ಬಹುಮುಖ ವ್ಯಕ್ತಿತ್ವದ ಶಾಸ್ತ್ರಿ

ಕಲಬುರಗಿ: ದಿ.ಲಿಂಗರಾಜ ಶಾಸ್ತ್ರಿ ಅವರದು ಬಹುಮುಖ ವ್ಯಕ್ತಿತ್ವ ಎಂದು ಜೆಡಿಎಸ್ ಮುಖಂಡ ನಾಸೀರ್ ಹುಸೇನ್‌ ಅಭಿಮತ ವ್ಯಕ್ತಪಡಿಸಿದರು. ನಗರದ ಕನ್ನಡ…

5 hours ago

ಕಲಬುರಗಿ: ನಕಲಿ ವೈದ್ಯರ ಹಾವಳಿ ತಡೆಯಲು ಆರೋಗ್ಯಧಿಕಾರಿಗೆ‌ ಮನವಿ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ನಕಲಿ ವೈದ್ಯರ ವಹಾವಳಿ ತಡೆಯಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಯುವ ಕರ್ನಾಟಕ ವೇದಿಕೆ ಚಿಂಚೋಳಿ ಮತ್ತು…

5 hours ago

ವೀ.ಲಿಂ.ಸಂಘಟನಾ ವೇದಿಕೆ ವಿದ್ಯಾರ್ಥಿ ಘಟಕದ ಅಧ್ಯಕ್ಷ ಬಸವರಾಜ ಶೆಳ್ಳಗಿ

ಸುರಪುರ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸುರಪುರ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಎಸ್.ಶೆಳ್ಳಗಿ ಅವರನ್ನು ನೇಮಕಗೊಳಿಸಲಾಗಿದೆ. ಈ…

6 hours ago

ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ವಿಶ್ವ ಓಜೋನ್ ದಿನ

ಸುರಪುರು: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾದಗಿರಿಯವರ ಸಂಯೋಗದಲ್ಲಿ “ವಿಶ್ವ ಓಜೋನ್ ದಿನ”…

6 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420